IPL 2023: ಐಪಿಎಲ್ 2023ರ ಮಧ್ಯೆ ಹಿರಿಯ ಕ್ರಿಕೆಟಿಗನ ಮೇಲೆ ಬೆಟ್ಟಿಂಗ್ ಆರೋಪ ಕೇಳಿಬಂದಿದ್ದು, ಪರಿಣಾಮ ಕ್ರಿಕೆಟ್ ಲೋಕದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ತನ್ನ ಭ್ರಷ್ಟಾಚಾರ-ವಿರೋಧಿ ನಿಯಮಗಳನ್ನು ಉಲ್ಲಂಘಿಸಿದೆಯೇ ಎಂದು ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಇಂಗ್ಲೆಂಡ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಆನ್ ಲೈನ್ ಬೆಟ್ಟಿಂಗ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ತೊಂದರೆಗೆ ಸಿಲುಕಿದ್ದಾರೆ.
ಇದನ್ನೂ ಓದಿ: Watch: ಮೈದಾನದಲ್ಲಿಯೇ ಸಹ ಆಟಗಾರನ ವಿರುದ್ಧ ಕೂಗಾಡಿದ ವಿವಾದಕ್ಕೆ ಸಿಕ್ಕಿಹಾಕಿಕೊಂಡ ಪಾಂಡ್ಯ!
ನ್ಯೂಜಿಲೆಂಡ್’ನ ಮಾಜಿ ನಾಯಕ ಜನವರಿಯಲ್ಲಿ ಬೆಟ್ಟಿಂಗ್ ಸಂಸ್ಥೆ '22ಬೆಟ್'ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡರು. ಆ ಬಳಿಕ ಆನ್ ಲೈನ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರೆಂಡನ್ ಮೆಕಲಮ್ ಮಾರ್ಚ್ 27 ರಂದು ತಮ್ಮ ಫೇಸ್ ಬುಕ್ ಪುಟದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ‘22 ಬೆಟ್’ ಪ್ರಚಾರ ಮಾಡುತ್ತಿದ್ದಾರೆ.
ಬಿಬಿಸಿ ಪ್ರಕಾರ, “ನಾವು ಈ ವಿಷಯದ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಬ್ರೆಂಡನ್ ಅವರ ‘22 ಬೆಟ್’ ಜೊತೆಗಿನ ಸಂಬಂಧವನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಬೆಟ್ಟಿಂಗ್’ಗೆ ಸಂಬಂಧಿಸಿದಂತೆ ನಾವು ಕೆಲ ನಿಯಮಗಳನ್ನು ಹೊಂದಿದ್ದೇವೆ. ಅವುಗಳನ್ನು ಸಂಪೂರ್ಣವಾಗಿ ಅನುಸರಿಸುವ ಬಗ್ಗೆ ಪ್ರತೀಬಾರಿ ಕೆಲಸ ಮಾಡುತ್ತೇವೆ” ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಆದರೆ ಮೆಕಲಮ್ ಬಗ್ಗೆ ಪ್ರಸ್ತುತ ತನಿಖೆ ನಡೆಸುತ್ತಿಲ್ಲ ಎಂದು ಇಸಿಬಿ ಸ್ಪಷ್ಟಪಡಿಸಿದೆ. ನ್ಯೂಜಿಲೆಂಡ್’ನ ಪ್ರಾಬ್ಲಮ್ ಗ್ಯಾಂಬ್ಲಿಂಗ್ ಫೌಂಡೇಶನ್ ಕಳೆದ ವಾರ ಈ ಜಾಹೀರಾತುಗಳ ಬಗ್ಗೆ ECB ಗೆ ದೂರು ನೀಡಿದೆ. ಬ್ರೆಂಡನ್ ಮೆಕಲಮ್ ಕೋಚ್ ಆದ ನಂತರ ಕಳೆದ 12 ಟೆಸ್ಟ್ ಪಂದ್ಯಗಳಲ್ಲಿ 10 ಪಂದ್ಯಗಳನ್ನು ಇಂಗ್ಲೆಂಡ್ ಗೆದ್ದಿದೆ.
ಇದನ್ನೂ ಓದಿ: Pakistan: ಪಾಕಿಸ್ತಾನದಲ್ಲಿ ಬದುಕುವುದು ಜೈಲಿನಲ್ಲಿ ಇದ್ದಂತೆ..! ಹಿರಿಯ ಕ್ರಿಕೆಟಿಗನಿಂದಲೇ ಗಂಭೀರ ಆರೋಪ!
ಐಪಿಎಲ್’ನ ಮೊದಲ ಸೀಸನ್’ನ ಮೊದಲ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ 156 ರನ್’ಗಳ ಬಿರುಸಿನ ಇನ್ನಿಂಗ್ಸ್ ಆಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. 101 ಟೆಸ್ಟ್ ಪಂದ್ಯಗಳಲ್ಲಿ 12 ಶತಕಗಳೊಂದಿಗೆ 6453 ರನ್ ಗಳಿಸಿದ್ದಾರೆ ಇವರು. ಇನ್ನು ಟೆಸ್ಟ್ ಪಂದ್ಯಗಳಲ್ಲಿ ಅವರ ಗರಿಷ್ಠ ಸ್ಕೋರ್ 302 ರನ್. 260 ಏಕದಿನ ಪಂದ್ಯಗಳಲ್ಲಿ ಐದು ಶತಕ ಸೇರಿದಂತೆ 6083 ರನ್ ಗಳಿಸಿದ್ದಾರೆ. ಇದಲ್ಲದೆ 71 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2140 ರನ್ ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.