IPL 2023: ಹ್ಯಾರಿ ಬ್ರೂಕ್ ಅಬ್ಬರದ ಶತಕ, ಹೈದರಾಬಾದ್ ಗೆ 23 ರನ್ ಗಳ ಭರ್ಜರಿ ಗೆಲುವು 

ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಹೈದರಾಬಾದ್ ಮತ್ತು ಕೊಲ್ಕತ್ತಾ ವಿರುದ್ಧದ ಐಪಿಎಲ್ ಟೂರ್ನಿ ೨೦೨೩ ಪಂದ್ಯದಲ್ಲಿ ಹೈದರಾಬಾದ್ ತಂಡವು ೨೩ ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ.

Written by - Zee Kannada News Desk | Last Updated : Apr 15, 2023, 12:23 AM IST
  • ಮಾರ್ಕ್ರಂ ಹಾಗೂ ಅಭಿಷೇಕ್ ಕ್ರಮವಾಗಿ ೫೦ ಹಾಗೂ ೩೨ ರನ್ ಗಳನ್ನು ಗಳಿಸುವ ಮೂಲಕ ತಂಡಕ್ಕೆ ನೆರವಾದರು
  • ಹೈದರಾಬಾದ್ ತಂಡವು ೨೦ ಓವರ್ ಗಳಲ್ಲಿ ಕೇವಲ ನಾಲ್ಕು ವಿಕೆಟ್ ನಷ್ಟಕ್ಕೆ ೨೨೮ ಗಳ ಬೃಹತ್ ಮೊತ್ತವನ್ನು ಗಳಿಸಿತು
  • ಗೆಲುವಿನ ದಡವನ್ನು ಮುಟ್ಟಲು ಸಾಧ್ಯವಾಗಲಿಲ್ಲ
 IPL 2023: ಹ್ಯಾರಿ ಬ್ರೂಕ್ ಅಬ್ಬರದ ಶತಕ, ಹೈದರಾಬಾದ್ ಗೆ 23 ರನ್ ಗಳ ಭರ್ಜರಿ ಗೆಲುವು  title=
Photo: Twitter

ಕೊಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಹೈದರಾಬಾದ್ ಮತ್ತು ಕೊಲ್ಕತ್ತಾ ವಿರುದ್ಧದ ಐಪಿಎಲ್ ಟೂರ್ನಿ ೨೦೨೩ ಪಂದ್ಯದಲ್ಲಿ ಹೈದರಾಬಾದ್ ತಂಡವು ೨೩ ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಹೈದರಾಬಾದ್ ತಂಡವು ೨೦ ಓವರ್ ಗಳಲ್ಲಿ ಕೇವಲ ನಾಲ್ಕು ವಿಕೆಟ್ ನಷ್ಟಕ್ಕೆ ೨೨೮ ಗಳ ಬೃಹತ್ ಮೊತ್ತವನ್ನು ಗಳಿಸಿತು.

ಇದನ್ನೂ ಓದಿ: Shahneel Gill: ‘ದಿಲ್’ ಗೆದ್ದಳು ಅಪ್ಸರೆ..! ಶುಭ್ಮನ್ ಗಿಲ್ ಸಹೋದರಿಯ ಮುಂದೆ ಬಾಲಿವುಡ್ ನಟಿಯರು ಝೀರೋ,

ಈ ಸಂದರ್ಭದಲ್ಲಿ ಹೈದರಬಾದ್ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಹ್ಯಾರಿ ಬ್ರೂಕ್ ಕೇವಲ ೫೫ ಎಸೆತಗಳಲ್ಲಿ ಮೂರು ಭರ್ಜರಿ ಸಿಕ್ಸರ್ ಹಾಗೂ ೧೨ ಬೌಂಡರಿ ಗಳ ನೆರವಿನಿಂದಾಗಿ ಬರೋಬ್ಬರಿ ೧೦೦ ಗಳಿಸುವ ಮೂಲಕ ಶತಕದ ಗುರಿಯನ್ನು ತಲುಪಿದರು.ಮಾರ್ಕ್ರಂ ಹಾಗೂ ಅಭಿಷೇಕ್ ಕ್ರಮವಾಗಿ ೫೦ ಹಾಗೂ ೩೨ ರನ್ ಗಳನ್ನು ಗಳಿಸುವ ಮೂಲಕ ತಂಡಕ್ಕೆ ನೆರವಾದರು.

ಈ ಬೃಹತ್ ರನ್ ಗಳ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಆರಂಭದಲ್ಲಿಯೇ ಆಘಾತವನ್ನು ಎದುರಿಸಿತು.ತಂಡದ ಮೊತ್ತ ೨೦ ರನ್ ಗಳಾಗುವಷ್ಟರಲ್ಲಿ ಮೂರು ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.ಈ ಹಂತದಲ್ಲಿ ನಿತೀಶ್ ರಾಣಾ ೭೫ ರನ್ ಹಾಗೂ ರಿಂಕು ಸಿಂಗ್ ೫೮ ರನ್ ಗಳನ್ನುಗಳಿಸುವ ಮೂಲಕ ತಂಡಕ್ಕೆ ಗೆಲುವಿನ ಆಸೆಯನ್ನು ಮೂಡಿಸಿದ್ದಾದರೂ ಕೂಡ ಗೆಲುವಿನ ದಡವನ್ನು ಮುಟ್ಟಲು ಸಾಧ್ಯವಾಗಲಿಲ್ಲ ಅಂತಿಮವಾಗಿ ಕೊಲ್ಕತ್ತಾ ತಂಡವು ೨೦ ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ೨೦೫ ರನ್ ಗಳನ್ನು ಮಾತ್ರ ಗಳಿಸುವಲ್ಲಿ ಸಫಲವಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News