ಶತಕ ದಾಟಿದ ಟೊಮ್ಯಾಟೊ ಬೆಲೆ- ಸಂಕಷ್ಟದಲ್ಲಿ ಜನರು
Tomato Price: ಟೊಮೆಟೊ ಬೆಲೆ ಹೊಸ ದಾಖಲೆ ಬರೆದಿದ್ದು, ಸತತವಾಗಿ ಬೆಲೆ ಏರಿಕೆಯಾಗುತ್ತಲೇ ಇರುವ ಪರಿಣಾಮ ಕೆಜಿ ಟೊಮೆಟೊ ಬೆಲೆ 100 ರೂಪಾಯಿಯ ಗಡಿ ದಾಟಿದೆ.
Tomato Price Hike: ಒಂದು ಮುಂಗಾರು ಹಂಗಾಮು ಹಾಳು ಇನ್ನೊಂದು ಕಡೆ ಟೊಮ್ಯಾಟೊ ಸೇರಿದಂತೆ ತರಕಾರಿ ಬೆಲೆ ಏರಿಕೆ ಆಗಿದ್ದು ಅದರಲ್ಲೂ ಟೊಮ್ಯಾಟೊ ಬೆಲೆ ಗಗನಕ್ಕೆ ಹೋಗಿದ್ದರಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಟೊಮೆಟೊ ಬೆಲೆ ಹೊಸ ದಾಖಲೆ ಬರೆದಿದ್ದು, ಸತತವಾಗಿ ಬೆಲೆ ಏರಿಕೆಯಾಗುತ್ತಲೇ ಇರುವ ಪರಿಣಾಮ ಕೆಜಿ ಟೊಮೆಟೊ ಬೆಲೆ 100 ರೂಪಾಯಿಯ ಗಡಿ ದಾಟಿದೆ. ಒಂದು ಸರ್ಕಾರ ಐದು ಗ್ಯಾರಂಟಿಗಳಲ್ಲಿ ಗ್ಯಾರಂಟಿಗಳನ್ನ ಜಾರಿಗೆ ತರುವ ಪ್ರಯತ್ನ ಇನ್ನೊಂದು ಕಡೆ ಟೊಮ್ಯಾಟೊದಂತಹ ತರಕಾರಿ ಬೆಲೆ ಏರಿಕೆ ಬಿಸಿಯಿಂದಾಗಿ ಸರ್ಕಾರಕ್ಕೆ ತಲೆ ಬೇನೆ ಆಗಿದೆ.. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ...
ಟೊಮ್ಯಾಟೊ ಬೆಲೆ ಈಗ ನೂರರ ಗಡಿ ದಾಟಿದೆ. ಪ್ರತಿ ಅಡುಗೆ ಮನೆಯ ಪ್ರಮುಖ ತರಕಾರಿಗಳಲ್ಲಿ ಒಂದಾದ ಟೊಮಾಟೊ ಬೆಲೆ ಏರಿಕೆಯಿಂದ ಜನಸಾಮಾನ್ಯರು ಆರ್ಥಿಕ ಹೊಡೆತಕ್ಕೆ ಸಿಲುಕಿದರೆ, ಇನ್ನೊಂದು ಕಡೆ ಸರ್ಕಾರಕ್ಕೂ ಕೂಡ ದೊಡ್ಡ ಸವಾಲು ಎದುರಾಗಿದೆ.
ಇದನ್ನೂ ಓದಿ- ದುಬಾರಿ ದುನಿಯಾ..! ಬೆಲೆ ಏರಿಕೆ ಬಿಸಿಗೆ ರಾಜ್ಯದ ಜನ ಕಂಗಾಲು..!
ಸಗಟು ಮಾರುಕಟ್ಟೆಯಲ್ಲಿ ಟೊಮಾಟೊ ಬೆಲೆ:
ಧಾರವಾಡ ಜಿಲ್ಲೆಯ ಸಗಟು ಮಾರುಕಟ್ಟೆಯಲ್ಲಿ ಟೊಮಾಟೊ ಬೆಲೆ ನೋಡುವುದಾದರೆ ನವಲಗುಂದದಲ್ಲಿ ಪ್ರತಿ ಕೆಜಿ ಟೊಮಾಟೊ 110 ರೂಪಾಯಿಗೆ ಮಾರಾಟವಾಗಿದೆ. ಧಾರವಾಡದ ಕೆಲವೆಡೆ 90 ರೂಪಾಯಿ ಇದ್ದರೆ, ಕೆಲ ಮಾರುಕಟ್ಟೆಗಳಲ್ಲಿ 95 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಕೆಲವೆಡೆ ಅತಿಯಾದ ಇನ್ನೂ ಕೆಲ ಭಾಗಗಳಲ್ಲಿ ಮಳೆ ಅಭಾವದಿಂದಾಗಿ ಟೊಮೆಟೊ ಬೆಳೆಗೆ ಹಾನಿಯಾಗಿದ್ದು, ಕೆಲವು ಕಡೆಗಳಲ್ಲಿ ಬಿರು ಬಿಸಿಲಿನಿಂದಾಗಿ ಸರಿಯಾಗಿ ಇಳುವರಿ ಬಂದಿಲ್ಲ. ಹಿಂದಿನ ವರ್ಷದಲ್ಲಿ ಎಲ್ಲಾ ಕಡೆ ರೈತರು ಟೊಮೆಟೊ ಬೆಳೆಯನ್ನು ಹೆಚ್ಚಾಗಿ ಬೆಳೆದಿದ್ದರು. ಆದರೆ ಸರಿಯಾಗಿ ಬೆಲೆ ಸಿಗದೆ ಕೈ ಸುಟ್ಟುಕೊಂಡಿದ್ದರು.
ಸದ್ಯ ಮಾರುಕಟ್ಟೆಗಳು, ಮಾಲ್, ಸೂಪರ್ ಮಾರುಕಟ್ಟೆಗಳು ಉತ್ತಮ ಗುಣಮಟ್ಟದ ಕೆಜಿ ಟೊಮೆಟೊ 120 ರಿಂದ 150 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದಾಗಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ- ಬೆಲೆ ಏರಿಕೆಯಿಂದ ಬಡವಾಯ್ತು ಜನಸಾಮಾನ್ಯನ ಜೀವನ
ಎರಡನೇ ಮತ್ತು ಮೂರನೇ ಗುಣಮಟ್ಟದ ಟೊಮೆಟೊವನ್ನು ಕೆಜಿಗೆ 60 ರಿಂದ 80 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಅಡುಗೆಗೆ ಹೆಚ್ಚಾಗಿ ಬಳಸುವ ಟೊಮ್ಯಾಟೋ ಬೆಲೆ ಕೇಳಿದರೆ ಶಾಕ್ ಹೊಡೆಯುತಿದ್ದು ಮಾರುಕಟ್ಟೆಗಳಲ್ಲಿ ಟೊಮ್ಯಾಟೊ ರೇಟ್ ಕೇಳುವುದೇ ಇಲ್ಲ. ಅದರಲ್ಲೂ ಬಕ್ರೀದ್ ಹಬ್ಬ ಬೇರೆ, ಹಬ್ಬದ ಹೊಸ್ತಿಲ್ಲಲಿ ಬೆಲೆ ಏರಿಕೆ ಭಾರೀ ಹೊಡೆತ ಕೊಟ್ಟಿದೆ. ಮಾಂಸದ ಅಡುಗೆ, ಬಿರಿಯಾನಿ, ಪಲಾವ್, ಸಾಂಬಾರು ಹೀಗೆ ಏನೇ ಮಾಡಿದರೂ ಟೊಮ್ಯಾಟೋ ಬಳಸಲೇಬೇಕು. ಆದರೀಗ ಅಡುಗೆಯ ರುಚಿ ಹೆಚ್ಚಿಸುವ ಈ ತರಕಾರಿ ಬೆಲೆ ಕೇಳಿದರೆ ತಲೆ ತಿರುಗುವುದಂತೂ ಸತ್ಯ. ಆದ್ದರಿಂದ ನಾವು ಸಹ ಅನಿವಾರ್ಯವಾಗಿ ಸಿಕ್ಕ ಬೆಲೆಗೆ ಟೊಮ್ಯಾಟೊ ಮಾರಾಟ ಮಾಡಬೇಕಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.
ಇನ್ನು ಮುಂಗಾರು ಮಳೆ ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಕೈ ಕೊಟ್ಟಿದ್ದು ಟೊಮ್ಯಾಟೊ ಸೇರಿದಂತೆ ಇತರ ತರಕಾರಿಗಳ ಬೆಲೆಯೂ ಇನ್ನಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/38l6m8543Vk?feature=share
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.