Car sales in november 2024: ಹಬ್ಬದ ಸೀಸನ್‌ ಕೊನೆಗೊಂಡರೂ ಕಾರು ಖರೀದಿಯ ಭರಾಟೆ ಮುಂದುವರೆದಿದೆ. ನವೆಂಬರ್‌ ಮೊದಲ ವಾರ ನಡೆದ ದೀಪಾವಳಿ ಹಬ್ಬದ ಋತು ಕೊನೆಗೊಂಡರೂ ದೇಶೀಯ ಮಾರುಕಟ್ಟೆಗಳಲ್ಲಿ ಕಾರುಗಳ ಮಾರಾಟ ಬಿರುಸಿನಿಂದ ಸಾಗುತ್ತಿದೆ. 


COMMERCIAL BREAK
SCROLL TO CONTINUE READING

ಕಳೆದ ತಿಂಗಳಿಂದ ದೇಶದಲ್ಲಿ 3,50,000 ಕಾರುಗಳು ಮಾರಾಟವಾಗಿದ್ದು, ಹಿಂದಿನ ವರ್ಷ ಇದೇ ತಿಂಗಳಲ್ಲಿ 3.36 ಲಕ್ಷ ಕಾರುಗಳ ಸೇಲ್‌ ಆಗಿದ್ದವು. ಒಟ್ಟಾರೆ ಶೇ.4ರಷ್ಟು ಕಾರುಗಳ ಖರೀದಿಯಲ್ಲಿ ಏರಿಕೆಯಾಗಿದೆ. ದೀಪಾವಳಿ ಹಬ್ಬದ ಸೀಸನ್‌ ಮುಗಿದು ತಿಂಗಳುಗಳು ಕಳೆದರೂ ಸಹ ಕಾರುಗಳ ಖರೀದಿ ಮಾತ್ರ ಕಡಿಮೆ ಆಗಿಲ್ಲ. ದಿನ ಕಳೆದಂತೆ ಕಾರುಗಳ ಖರೀದಿ ಬಿರುಸಿನಿಂದ ಸಾಗಿದ್ದು, ಆಟೋಮೊಬೈಲ್‌ ಕಂಪನಿಗಳಿಗೆ ಸಂತಸದ ಸುದ್ದಿ ಎಂದರೆ ತಪ್ಪಾಗಲಾರದು.


ಇದನ್ನೂ ಓದಿ: ಫೆಂಗಲ್ ಚಂಡಮಾರುತದ ಎಫೆಕ್ಟ್: ಆಕಾಶದತ್ತ ಮುಖ ಮಾಡಿದ ತರಕಾರಿ ಬೆಲೆಗಳು!


ಆಟೋಮೊಬೈಲ್‌ ಸಂಸ್ಥೆಯೊಂದರ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಹೇಳಿರುವ ಪ್ರಕಾರ, "ಹಬ್ಬದ ಅವಧಿಯಲ್ಲಿ ಉಂಟಾದ ಬೇಡಿಕೆಯ ಜೋಶ್‌ ನವೆಂಬರ್‌ನಲ್ಲೂ ಮುಂದುವರಿದಿದೆ. ಇದಕ್ಕೆ SUV (ಸ್ಪೋರ್ಟ್ ಯುಟಿಲಿಟಿ ವಾಹನ)ಗಳಿಗೆ ಭಾರೀ ಬೇಡಿಕೆ ಕಂಡುಬಂದಿದೆ ಎಂದಿದ್ದಾರೆ.


ಹಾಗೆಯೇ ಗ್ರಾಹಕರು ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಹೊಸ ವಿನ್ಯಾಸಗಳ ಜೊತೆಗೆ ವೈವಿಧ್ಯಮಯ ಫೀಚರ್‌ ಹೊಂದಿರುವ ಕಾರುಗಳ ಮೇಲೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಈ ರೀತಿಯಾಗಿ ಕಾರುಗಳ ಮೇಲೆ ಒಲವು ಮೂಡಲು ಕಾರಣವಾದ್ರೂ ಏನು ಎಂಬುದು ತಿಳಿಯದ ಸಂಗತಿಯಾಗಿದೆ.


ಇದನ್ನೂ ಓದಿ: ಸರ್ಕಾರಿ ನೌಕರರಿಗೆ ದೊಡ್ಡ ಆಘಾತ ! ವೇತನ ಹೆಚ್ಚಳದ ಬಗ್ಗೆ ಸದನದಲ್ಲಿಯೇ ಶಾಕಿಂಗ್ ಹೇಳಿಕೆ ನೀಡಿದ ಸರ್ಕಾರ !ಹುಸಿಯಾಯಿತು ನಿರೀಕ್ಷೆ


ಮಾರಕಟ್ಟೆಯಲ್ಲಿ ಅಗ್ರವಾಗಿ ಐದು ಸ್ಥಾನಗಳನ್ನು ಹೊಂದಿರುವ ಕಂಪನಿಗಳಲ್ಲಿ ಮಾರುತಿ ಸುಜುಕಿ ಮೊದಲ ಸ್ಥಾನದಲ್ಲಿದ್ದು, ಹ್ಯುಂಡೈ ಎರಡನೇ ಸ್ಥಾನ, ಟಾಟಾ ಮೋಟಾರ್ಸ್‌, ನಂತರದ ಸ್ಥಾನಗಳಲ್ಲಿ ಟೊಯೊಟಾ ಮತ್ತು ಎಂಜಿ ಮೋಟಾರ್‌ ಇದೆ. ಇದೇ ರೀತಿ ಕಾರುಗಳು, ಬೈಕ್‌ಗಳ ಖರೀದಿ ಮುಂದುವರೆ ಬೆಂಗಳೂರು ಇನ್ನೇನು ಕೆಲವೇ ದಿನಗಳಲ್ಲಿ ಮಾಲಿನ್ಯದ ವಿಷಯದಲ್ಲಿ ದೆಹಲಿಗೆ ಸೆಡ್ಡು ಹೊಡೆಯುವರಲ್ಲಿ ಅನುಮಾನವೇ ಇಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.