Best Selling Bikes In India: ಪ್ರತಿ ತಿಂಗಳು ದೇಶದಲ್ಲಿ ಲಕ್ಷಾಂತರ ಬೈಕ್ ಗಳು ಮಾರಾಟವಾಗುತ್ತವೆ. ಹೆಚ್ಚಿನ ಗ್ರಾಹಕರು ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಮತ್ತು ವರ್ಷಾನುವರ್ಷಗಳವರೆಗೆ ಬಾಳಿಕೆ ಬರುವ ಬೈಕ್ ಗಾಗಿ ಹುಡುಕಾಟ ನಡೆಸುತ್ತಾರೆ. ಆದರೆ, ಅಂತಹ ಆಯ್ಕೆಗಳು ಸೀಮಿತವಾಗಿವೆ. ಗ್ರಾಹಕರು ಯಾವುದಾದರೂ ಒಂದು ಬೈಕ್ ಮೇಲೆ ಮುಗಿಬೀಳಲು ಇದೇ ಕಾರಣ. ಜುಲೈ ತಿಂಗಳಿನಲ್ಲಿಯೂ ಇದೇ ರೀತಿ ಸಂಭವಿಸಿದೆ. ಜುಲೈ 2022 ರಲ್ಲಿ, ಹೀರೋ ಮೋಟಾರ್‌ಸೈಕಲ್ ನ ಒಂದು ಬೈಕ್ ದೇಶದ ಅತಿ ಹೆಚ್ಚು ಮಾರಾಟಗೊಂಡ ಬೈಕ್ ಆಗಿ ಹೊರಹೊಮ್ಮಿದೆ. ಲಕ್ಷಾಂತರ ಜನರು ಈ ಬೈಕ್ ಖರೀದಿಸಿದ್ದಾರೆ. ಈ ಬೈಕ್ ನ ವಿಶೇಷತೆ ಎಂದರೆ ಇದರ ಬೆಲೆಯೂ ಕೂಡ ನಿಮ್ಮ ಬಜೆಟ್ ಗೆ ಸರಿಹೊಂದುತ್ತದೆ.


COMMERCIAL BREAK
SCROLL TO CONTINUE READING

ಈ ಬೈಕ್ ಅತ್ಯಧಿಕ ಮಾರಾತಗೊಂಡಿದೆ
ಜುಲೈ ತಿಂಗಳಿನಲ್ಲಿ ಹೀರೋ ಸ್ಪ್ಲೆಂಡರ್ ದೇಶದ ಅತಿ ಹೆಚ್ಚು ಮಾರಾಟವಾದ ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಒಟ್ಟು 2,50,409 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಜುಲೈನಲ್ಲಿಯೂ ಬಹುತೇಕ ಇದೇ ರೀತಿಯ ಮಾರಾಟ ಕಂಡುಬಂದಿತ್ತು. ಇದರರ್ಥ ಹೀರೋ ಸ್ಪ್ಲೆಂಡರ್ ದೇಶದಲ್ಲಿ ನಂಬರ್ ಒನ್ ಬೈಕ್ ಆಗಿ ಇದುವರೆಗೂ ಕೂಡ ಮುಂದುವರೆದಿದೆ. ಮಾಸಿಕ ಅಂಕಿಅಂಶಗಳನ್ನು ಗಮನಿಸಿದರೆ, ಪ್ರತಿದಿನ ಈ ಬೈಕ್ ನ ಒಟ್ಟು 8,347 ಯುನಿಟ್‌ಗಳು ಮಾರಾಟವಾಗುತ್ತಿವೆ.


ಇದನ್ನೂ ಓದಿ-EPFO Latest Update: ಪಿಎಫ್ ಚಂದಾದಾರರಿಗೊಂದು ಮಹತ್ವದ ಅಪ್ಡೇಟ್ ಪ್ರಕಟ, ಕೇಂದ್ರ ಸಚಿವರು ಸಂಸತ್ತಿನಲ್ಲಿ ಹೇಳಿದ್ದೇನು?


ಹೀರೋ ಸ್ಪ್ಲೆಂಡರ್ ಬೆಲೆ
ಕಂಪನಿಯು ಹೀರೋ ಸ್ಪ್ಲೆಂಡರ್ ಅನ್ನು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡುತ್ತದೆ. ಇದರ ಅತ್ಯಂತ ಜನಪ್ರಿಯ ಮತ್ತು ಕೈಗೆಟುಕುವ ಮಾದರಿಯೆಂದರೆ ಹೀರೋ ಸ್ಪ್ಲೆಂಡರ್ ಪ್ಲಸ್. ಇದರ ಬೆಲೆ ರೂ 70,658 ರಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ, ದೆಹಲಿ). ಇದಲ್ಲದೆ, ಸೂಪರ್ ಸ್ಪ್ಲೆಂಡರ್, ಸ್ಪ್ಲೆಂಡರ್ ಐಸ್ಮಾರ್ಟ್, ಸ್ಪ್ಲೆಂಡರ್ + ಎಕ್ಸ್‌ಟೆಕ್‌ನಂತಹ ಮಾದರಿಗಳಲ್ಲಿಯೂ ಕೂಡ ಈ ಬೈಕ್ ಮಾರುಕಟ್ಟೆಯಲ್ಲಿ ಲಭ್ಯವಿದೆ.


ಇದನ್ನೂ ಓದಿ-Amazon ನಲ್ಲಿ ದಿನಕ್ಕೆ ಕೆಲವೇ ಗಂಟೆ ಕೆಲಸ ಮಾಡಿ ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಸಂಪಾದಿಸುವ ಸುವರ್ಣಾವಕಾಶ


ಈ ಬೈಕುಗಳು  ತೀವ್ರ ಪೈಪೋಟಿಯನ್ನು ನೀಡಿವೆ
ಹೋಂಡಾದ CB ಶೈನ್ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದು ಪ್ರಯಾಣಿಕರ ಬೈಕ್ ಕೂಡ ಆಗಿದೆ. ಹೋಂಡಾ ಶೈನ್ ಜುಲೈ 2022 ರಲ್ಲಿ 1,14,663 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಜುಲೈನಲ್ಲಿ ಈ ಬೈಕ್‌ಗೂ ಅಷ್ಟೇ ಸಂಖ್ಯೆಯ ಯೂನಿಟ್‌ಗಳು ಮಾರಾಟವಾಗಿದ್ದವು. ಇದೇ ರೀತಿ ಪಲ್ಸರ್ ಬೈಕ್‌ಗಳು ಕೂಡ ಮೂರನೇ ಸ್ಥಾನದಲ್ಲಿದ್ದು, ಕಳೆದ ತಿಂಗಳು ಇದರ ಒಟ್ಟು 1,01,905 ಯುನಿಟ್ ಗಳು ಮಾರಾಟಗೊಂಡಿವೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.