Yamaha RX100: ಮತ್ತೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಿಡುಗಡೆಯಾಗುತ್ತಿದೆ ಈ ಜನಪ್ರೀಯ ಬೈಕ್! ಇಲ್ಲಿದೆ ಕಂಪನಿಯ ಪ್ಲಾನಿಂಗ್

Yamaha RX100 Launch Soon: ನೀವೂ ಕೂಡ ಒಂದು ವೇಳೆ ಭಾರತದ ಅತ್ಯಂತ ಯಶಸ್ವಿ ಮೋಟರ್ ಸೈಕಲ್ ಗಳ ಕುರಿತು ಚರ್ಚೆ ನಡೆಸುತ್ತಿದ್ದರೆ. ಯಮಾಹಾ ಆರ್.ಎಕ್ಸ್ ಹೊರತುಪಡಿಸಿದರೆ, ನಿಮ್ಮ ಚರ್ಚೆ ಅಪೂರ್ಣ ಎಂದೆನಿಸಿಕೊಳ್ಳಲಿದೆ. ಹೌದು, ಯಮಾಹಾ ಆರ್.ಎಕ್ಸ್ 100 ಅಂತಹ ಬೈಕ್ ಗಳಲ್ಲಿ ಒಂದಾಗಿದೆ. ಒಂದಾನೊಂದು ಕಾಲದಲ್ಲಿ ಅಷ್ಟೇ ಅಲ್ಲ ಇಂದಿಗೂ ಕೂಡ ಕೋಟ್ಯಾಂತರ ಭಾರತೀಯರ ಹೃದಯದಲ್ಲಿ ಈ ಬೈಕ್ ಸ್ಥಾನ ಪಡೆದಿದೆ. ಇಂದಿಗೂ ಕೂಡ ಯುವಕರಲ್ಲಿ ಯಮಾಹಾ ಆರ್.ಎಕ್ಸ್ 100 ಬೈಕ್ ಕ್ರೇಜ್ ನೀವು ಗಮನಿಸಬಹುದು.   

Written by - Nitin Tabib | Last Updated : Aug 19, 2022, 05:15 PM IST
  • ನೀವೂ ಕೂಡ ಒಂದು ವೇಳೆ ಭಾರತದ ಅತ್ಯಂತ ಯಶಸ್ವಿ ಮೋಟರ್ ಸೈಕಲ್ ಗಳ ಕುರಿತು ಚರ್ಚೆ ನಡೆಸುತ್ತಿದ್ದರೆ.
  • ಯಮಾಹಾ ಆರ್.ಎಕ್ಸ್ ಹೊರತುಪಡಿಸಿದರೆ, ನಿಮ್ಮ ಚರ್ಚೆ ಅಪೂರ್ಣ ಎಂದೆನಿಸಿಕೊಳ್ಳಲಿದೆ.
  • ಹೌದು, ಯಮಾಹಾ ಆರ್.ಎಕ್ಸ್ 100 ಅಂತಹ ಬೈಕ್ ಗಳಲ್ಲಿ ಒಂದಾಗಿದೆ.
Yamaha RX100: ಮತ್ತೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಿಡುಗಡೆಯಾಗುತ್ತಿದೆ ಈ ಜನಪ್ರೀಯ ಬೈಕ್! ಇಲ್ಲಿದೆ ಕಂಪನಿಯ ಪ್ಲಾನಿಂಗ್ title=
Yamaha RX100 Relaunch

Yamaha RX100 May Launch Soon: ನೀವು ಭಾರತದ ಅತ್ಯಂತ ಯಶಸ್ವಿ ಮೋಟಾರ್‌ಸೈಕಲ್‌ಗಳ ಬಗ್ಗೆ ಮಾತನಾಡುತ್ತಿದ್ದಾರೆ, ಯಮಹಾ RX100 ಹೊರತುಪಡಿಸಿದರೆ ನಿಮ್ಮ ಚರ್ಚೆ ಒಂದು ಪರಿಪೂರ್ಣ ಚರ್ಚೆಯೇ ಅಲ್ಲ. ಹೌದು, ಯಮಹಾ RX100 ಅಂತಹ ಒಂದು ಜನಪ್ರೀಯ ಬೈಕ್ ಆಗಿದೆ, ಇಂದಿಗೂ ಕೂಡ ಕೋಟ್ಯಾಂತರ ಜನರ ಹೃದಯದಲ್ಲಿ ಈ ಬೈಕ್ ಸ್ಥಾನ ಪಡೆದಿದೆ. ಇಂದಿಗೂ, ಹೆಚ್ಚಿನ ಜನರು ವಯಸ್ಸು ಅಥವಾ ತಲೆಮಾರು ಲೆಕ್ಕಿಸದೆ ಯಮಹಾ RX100 ಬಗ್ಗೆ ಕ್ರೇಜ್ ಹೊಂದಿದ್ದಾರೆ. ಯಮಹಾ RX100 ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ.

ಇಂದಿಗೂ ಅದನ್ನು ಇಷ್ಟಪಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. 1985 ರಲ್ಲಿ ಈ ಬೈಕ್ ನ ಉತ್ಪಾದನೆ ಆರಂಭಗೊಂಡಿತ್ತು ಮತ್ತು 1996 ರಲ್ಲಿ ಅದರ ಉತ್ಪಾದನೆಯನ್ನು ನಿಲ್ಲಿಸಲಾಯಿತು. ಆದರೆ, ಈಗ ಬಹುಶಃ ಕಂಪನಿಯು ಅದನ್ನು ಮತ್ತೆ ಮಾರುಕಟ್ಟೆಗಿಳಿಸುವ ಪ್ಲಾನಿಂಗ್ ನಲ್ಲಿದೆ. ಬ್ಯುಸಿನೆಸ್‌ಲೈನ್‌ಗೆ ಇತ್ತೀಚೆಗೆ ನೀಡಿದ ತಮ್ಮ ಸಂದರ್ಶನದಲ್ಲಿ ಮಾತನಾಡಿರುವ ಯಮಹಾ ಇಂಡಿಯಾ ಅಧ್ಯಕ್ಷ ಇಶಿನ್ ಚಿಹಾನಾ, ಕಂಪನಿಯು ಇದುವರೆಗೆ ತನ್ನ ಯಾವುದೇ ಉತ್ಪನ್ನಕ್ಕೆ RX100 ಬ್ಯಾಡ್ಜ್ ಅನ್ನು ಬಳಸಿಲ್ಲ  ಎಂದು ಹೇಳಿದ್ದಾರೆ. ಏಕೆಂದರೆ, ಕಂಪನಿ ಭವಿಷ್ಯದಲ್ಲಿ ಈ  ಬ್ಯಾಡ್ಜ್ ಕುರಿತು ವಿಶೇಷ ಯೋಜನೆಯನ್ನು ಹೊಂದಿದೆ ಎಂದು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ-Electricity Payment: ಕರ್ನಾಟಕ ಸೇರಿದಂತೆ ದೇಶದ ಈ 13 ರಾಜ್ಯಗಳಲ್ಲಿ ತಲೆದೂರಲಿದೆಯಾ ವಿದ್ಯುತ್ ಕ್ಷಾಮ? ಕಾರಣ ಇಲ್ಲಿದೆ

ಅವರು ನೀಡಿರುವ ಹೇಳಿಕೆಯಿಂದ ಯಮಾಹಾ RX100 ಅನ್ನು ಮರಳಿ ಮಾರುಕಟ್ಟೆಗೆ ಇಳಿಯಲಿದೆ ಎಂಬುದರ ಸ್ಪಷ್ಟ ಸಂಕೇತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೂ ಕೂಡ ಕಂಪನಿಯು ಹಳೆಯ ಯಮಹಾ RX100 ಅನ್ನು ಮರಳಿ ತರಲು ಎಂದಿಗೂ ಕೂಡ ಸಾಧ್ಯವಿಲ್ಲ. ಏಕೆಂದರೆ ಹಳೆ ಬೈಕ್ ಟೂ-ಸ್ಟ್ರೋಕ್ ಎಂಜಿನ್ ಅನ್ನು ಹೊಂದಿತ್ತು, ಹೀಗಾಗಿ ಅದು ಇಂದಿನ ಕಟ್ಟುನಿಟ್ಟಾದ BS6 ಎಮಿಷನ್ ಮಾನದಂಡಗಳಿಗೆ ಎಂದಿಗೂ ಹೊಂದಿಕೆಯಾಗುವುದಿಲ್ಲ. ಹೀಗಿರುವಾಗ, ಅದರ ಎಂಜಿನ್ನಲ್ಲಿ ಬದಲಾವಣೆಗಳನ್ನು ಮಾಡಿದ ನಂತರ ಮಾತ್ರ ಅದನ್ನು ಪುನಃ ಮಾರುಕಟ್ಟೆಗೆ ಇಳಿಸುವ ಸಾಧ್ಯತೆ ಇದೆ. ಕಂಪನಿಯು RX100 ಅನ್ನು ಮರುಪ್ರಾರಂಭಿಸಿದರೆ, ಅದರ ವಿನ್ಯಾಸವನ್ನು ಸಹ ನವೀಕರಣ ಹೊಂದಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ-Good News: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, ಈ ನಿಯಮ ಬದಲಾವಣೆಯಿಂದ ಖಾತೆಗೆ ಸಂಪೂರ್ಣ ವೇತನ ಬರಲಿದೆ

ಆದರೆ, RX100 ನ ರೀಲಾಂಚ್ ಗಾಗಿ ಅಭಿಮಾನಿಗಳು ಮತ್ತಷ್ಟು ಸಮಯ ಕಾಯಬೇಕಾಗಲಿದೆ. ವರದಿಗಳ ಪ್ರಕಾರ ಕಂಪನಿ ಯಮಹಾ RX100 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರೂ ಕೂಡ ಅದು 2025ರ ಮೊದಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಕಂಪನಿಯು ಇದನ್ನು 2026 ಕ್ಕೆ ಬಿಡುಗಡೆ ಮಾಡಲು ಯೋಚಿಸಬಹುದು ಮತ್ತು ಇದಕ್ಕಾಗಿ ಕಂಪನಿಯು ಸಾಕಷ್ಟು ಶ್ರಮಿಸಬೇಕಾಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News