TV, Fridge, AC ಬೆಲೆಗಳು ಮತ್ತೆ ಏರಿಕೆ! ಯಾವಾಗ, ಎಷ್ಟು ಹೆಚ್ಚಾಗಲಿದೆ ಎಂದು ತಿಳಿಯಿರಿ
Consumer Appliance Price Rise: ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸ್‌ನ ವರದಿಯ ಪ್ರಕಾರ, 2021 ರಲ್ಲಿ ಸರಕುಗಳ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಇದು ಉಪಕರಣಗಳ ಬೆಲೆಯ ಮೇಲೂ ಪರಿಣಾಮ ಬೀರುತ್ತದೆ.
ನವದೆಹಲಿ: Consumer Appliance Price Rise: ನೀವು ಕೂಡ ಟಿವಿ, ಫ್ರಿಜ್, ಎಸಿ ಮತ್ತು ಇತರ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಆದಷ್ಟು ಬೇಗ ಖರೀದಿಸಿದರೆ ಒಳ್ಳೆಯದು. ಏಕೆಂದರೆ ಅವುಗಳ ಬೆಲೆಗಳು ಮತ್ತೊಮ್ಮೆ ಹೆಚ್ಚಾಗಲಿವೆ. ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸ್‌ನ ವರದಿಯ ಪ್ರಕಾರ, 2021 ರಲ್ಲಿ ಸರಕುಗಳ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಇದು ಉಪಕರಣಗಳ ಬೆಲೆಯ ಮೇಲೂ ಪರಿಣಾಮ ಬೀರಲಿದೆ ಎಂದು ತಿಳಿದುಬಂದಿದೆ.
ಟಿವಿ, ಫ್ರಿಜ್, ಎಸಿ 10-15% ರಷ್ಟು ದುಬಾರಿಯಾಗಲಿದೆ:
ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸ್‌ನ ವರದಿಯ ಪ್ರಕಾರ, ಏಪ್ರಿಲ್ 2021 ರಲ್ಲಿ, ಕೋರ್ ಕಮೊಡಿಟಿ ಸಿಆರ್ಬಿ ಸೂಚ್ಯಂಕವು (CoreCommodity CRB index) ಶೇಕಡಾ 70 ರಷ್ಟು ಏರಿಕೆಯಾಗಿದೆ. ಹಣದುಬ್ಬರದ ಮೇಲೆ ಇದರ ಪರಿಣಾಮ ಕಂಡುಬರುತ್ತದೆ ಎಂದು ವರದಿ ಹೇಳಿದೆ. ಈ ಉತ್ಪನ್ನಗಳನ್ನು ತಯಾರಿಸಲು ಬಳಸುವ ಸರಕುಗಳ ಬೆಲೆಯಲ್ಲಿನ ಹೆಚ್ಚಳದಿಂದಾಗಿ, ಟಿವಿ, ಫ್ರಿಡ್ಜ್, ಎಸಿ, ವಾಷಿಂಗ್ ಮೆಷಿನ್ (Washing Machine), ವಾಟರ್ ಹೀಟರ್ ಸೇರಿದಂತೆ ಅನೇಕ ಗೃಹೋಪಯೋಗಿ ವಸ್ತುಗಳ ಬೆಲೆ 10-15% ರಷ್ಟು ಹೆಚ್ಚಾಗಲಿದೆ. ವರದಿಯ ಪ್ರಕಾರ, ಈ ವರ್ಷದ ಜುಲೈ ಮಧ್ಯದಿಂದ ಬೆಲೆಗಳು ಹೆಚ್ಚಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ - 'ITR E-ಫೈಲಿಂಗ್' : ಆದಾಯ ತೆರಿಗೆದಾರರಿಗೊಂದು ಮಹತ್ವದ ಮಾಹಿತಿ!
ಕಚ್ಚಾ ವಸ್ತುಗಳ ಬೆಲೆ ಸ್ಥಿರವಾಗಿ ಏರಿತು:
ಈ ಉಪಕರಣಗಳನ್ನು ತಯಾರಿಸುವ ಕಂಪನಿಗಳು ಫೆಬ್ರವರಿಯಲ್ಲಿ ಕೆಲವು ಅಗತ್ಯ ಘಟಕಗಳ ಕೊರತೆ ಮತ್ತು ಲೋಹದ ಬೆಲೆಗಳ ಹೆಚ್ಚಳದಿಂದಾಗಿ ಬೆಲೆಗಳನ್ನು ಹೆಚ್ಚಿಸಿವೆ. ಲೌಕ್ಡೌನ್‌ನಿಂದಾಗಿ ಈಗ ಅವುಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ. ವಾಸ್ತವವಾಗಿ, ಕರೋನಾ ಸಾಂಕ್ರಾಮಿಕ ರೋಗವನ್ನು ಹೋಗಲಾಡಿಸುವ ಸಲುವಾಗಿ, ರಾಜ್ಯಗಳಲ್ಲಿನ ಲಾಕ್ ಡೌನ್ ಜಾರಿಗೆ ತರಲಾಗಿದೆ. ಇದರಿಂದಾಗಿ ಗ್ರಾಹಕ ಬಳಕೆ ಸೇರಿದಂತೆ ಅನಿವಾರ್ಯವಲ್ಲದ ವಸ್ತುಗಳ ಮಾರಾಟವು ಸ್ವಲ್ಪ ಸಮಯದವರೆಗೆ ಸ್ಥಗಿತಗೊಂಡಿತು, ಮತ್ತೊಂದೆಡೆ, ಸರಕುಗಳ ಬೆಲೆಗಳು ಏರುತ್ತಲೇ ಇದ್ದವು.
ಗ್ರಾಹಕರ ಮೇಲೆ ಹಣದುಬ್ಬರದ ಹೊರೆ :
ಬೇಸಿಗೆ ಕಾಲದಲ್ಲಿ, ಗ್ರಾಹಕರು ಫ್ರಿಜ್ ಮತ್ತು ಹವಾನಿಯಂತ್ರಣ (AC)ದಂತಹ ಹೆಚ್ಚಿನ ಉಪಕರಣಗಳನ್ನು ಖರೀದಿಸಿದಾಗ ಪೂರೈಕೆ ಸರಪಳಿಯಲ್ಲಿ ಈ ಅಡಚಣೆ ಉಂಟಾಯಿತು. ಸರಕು ಬೆಲೆಗಳು ಏರಿಳಿತವನ್ನು ಮುಂದುವರೆಸಿದಾಗ, ಸರಕುಗಳ ಬೆಲೆಗಳು ಏರಿಕೆಯಾಗುತ್ತವೆ, ಅದರ ಹೊರೆ ಗ್ರಾಹಕರಿಗೆ ತಲುಪುತ್ತದೆ ಎಂದು ಬಜಾಜ್ ಎಲೆಕ್ಟ್ರಿಕಲ್ಸ್‌ನ (Bajaj Electricals) ಮುಖ್ಯ ಹಣಕಾಸು ಅಧಿಕಾರಿ ಅನಂತ್ ಪುರಂದರೆ ಹೇಳುತ್ತಾರೆ. ಜಿಎಸ್‌ಟಿಯನ್ನು ಕಡಿತಗೊಳಿಸುವ ಮೂಲಕ ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡಬಹುದು ಎಂದು ನಾವು ಸರ್ಕಾರಕ್ಕೆ ಸ್ವಲ್ಪ ಮನವಿ ಮಾಡಿದ್ದೇವೆ. ಆದರೆ ಇದಕ್ಕೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಉದ್ಯಮಗಳು ಅನಿವಾರ್ಯವಾಗಿ ಬೆಲೆಗಳನ್ನು ಹೆಚ್ಚಿಸಬೇಕಾಗುತ್ತದೆ. ಇದು ನಮಗೆ ಕಷ್ಟದ ವರ್ಷ, ಆದರೆ ನಾವು ವ್ಯವಹಾರವನ್ನು ನಡೆಸಬೇಕಾಗಿದೆ ಎಂದು ಉಪಕರಣಗಳ ಕಂಪನಿಯ ಹಿರಿಯ ಉಪಾಧ್ಯಕ್ಷ ತಿಳಿಸಿದ್ದಾರೆ.
ಇದನ್ನೂ ಓದಿ - Aadhar Card ನಲ್ಲಿದ್ದ 'ಮೊಬೈಲ್ ನಂಬರ್' ಬಂದ್ ಆಗಿದೆಯಾ? ಹೊಸ ನಂಬರ್ ಅಪ್ಡೇಟ್ ಮಾಡುವುದು ಹೇಗೆ ಇಲ್ಲಿದೆ ನೋಡಿ!
ಸಿದ್ಧ ಉತ್ಪನ್ನ ಆಮದುಗಳು ಮೊದಲಿಗಿಂತ ಹೆಚ್ಚು ವೆಚ್ಚವಾಗುತ್ತವೆ:
ಪ್ರಸ್ತುತ, ಸಿದ್ಧಪಡಿಸಿದ ಉತ್ಪನ್ನಗಳನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳಲು ಸರ್ಕಾರವು 20% ಆಮದು ಸುಂಕವನ್ನು ವಿಧಿಸಿರುವುದರಿಂದ ಸಿದ್ಧಪಡಿಸಿದ ಉತ್ಪನ್ನವನ್ನು ಆಮದು ಮಾಡಿಕೊಳ್ಳುವುದು ದುಬಾರಿಯಾಗಿದೆ. ಈಗ ಆಮದು ಮಾಡುವ ಆಯ್ಕೆ ಮುಗಿದ ನಂತರ, ಬೆಲೆಗಳನ್ನು ಹೆಚ್ಚಿಸುವುದು ಅನಿವಾರ್ಯ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.