ಈಗ ಲಭ್ಯವಿಲ್ಲ ಆಧಾರ್ ಗೆ ಸಂಬಂಧಿಸಿದ ಈ ಸೇವೆ , ಬಳಕೆದಾರರ ಮೇಲೆ ಆಗಲಿದೆ ಪರಿಣಾಮ
ಈ ಹಿಂದೆ ಆಧಾರ್ ಕಾರ್ಡ್ ಮರುಮುದ್ರಣ ಸೇವೆಯ ಸ್ವರೂಪವು ವಿಭಿನ್ನವಾಗಿತ್ತು. ಈಗ ಅದು ಬದಲಾಗಿದೆ. ಯುಐಡಿಎಐ ಈಗ ಪಿವಿಸಿ ಆಧಾರ್ ಕಾರ್ಡ್ ಅನ್ನು ವಿತರಿಸುತ್ತಿದೆ.
ನವದೆಹಲಿ : ಯಾವುದೇ ಸರ್ಕಾರಿ ಕೆಲಸಗಳಿಗೂ ಆಧಾರ್ ಕಾರ್ಡ್ (Aadhaar card) ಕಡ್ಡಾಯವಾಗಿ ಬೇಕೇ ಬೇಕು. ಇದಿಲ್ಲದೇ, ಯಾವುದೇ ಮಹತ್ವದ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯೊಂದಿಗೆ ಅಪ್ಡೇಟ್ ಆಗಿರುವುದು ಮುಖ್ಯವಾಗಿದೆ. ಈ ಮಧ್ಯೆ, ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಪ್ರಮುಖ ಸೇವೆಯನ್ನು UIDAI ಸ್ಥಗಿತಗೊಳಿಸಿದೆ.
ಮರು ಮುದ್ರಣವಾಗುತ್ತಿಲ್ಲ ಆಧಾರ್ ಕಾರ್ಡ್ :
ಈ ಹಿಂದೆ ಆಧಾರ್ ಕಾರ್ಡ್ (aadhaar card) ಮರುಮುದ್ರಣ ಸೇವೆಯ ಸ್ವರೂಪವು ವಿಭಿನ್ನವಾಗಿತ್ತು. ಈಗ ಅದು ಬದಲಾಗಿದೆ. ಯುಐಡಿಎಐ ಈಗ ಪಿವಿಸಿ ಆಧಾರ್ ಕಾರ್ಡ್ (PVC Aadhaar cad) ಅನ್ನು ವಿತರಿಸುತ್ತಿದೆ. ಇದು ಸಾಕಷ್ಟು ಆಕರ್ಷಕವಾಗಿದ್ದು, ಡೆಬಿಟ್ ಕಾರ್ಡ್‌ನ ಗಾತ್ರದಲ್ಲಿ ಬರುತ್ತದೆ. ಈ ಹೊಸ ಕಾರ್ಡ್ ಅನ್ನು ಸುಲಭವಾಗಿ ಪಾಕೆಟ್ ಅಥವಾ ವ್ಯಾಲೆಟ್ ನಲ್ಲಿ ಇಡಬಹುದು.
ಇದನ್ನೂ ಓದಿ : Indian Railways: ಬದಲಾಗಲಿದೆ ರೈಲ್ವೆ ವರ್ಕ್ ಕಲ್ಚರ್ , ಪ್ರಯಾಣಿಕರಿಗೆ ಸಿಗಲಿದೆ ಈ ಲಾಭ ..!
ಪಿವಿಸಿ ಆಧಾರ್ ಕಾರ್ಡ್ :
ಆಧಾರ್ ಕಾರ್ಡ್ ಮರು-ಮುದ್ರಿಸುವ ಕುರಿತಂತೆ ಬಳಕೆದಾರರು ಕೇಳಿದ ಪ್ರಶ್ನೆಗೆ, ಉತ್ತರಿಸಿದ ಆಧಾರ್ ಸಹಾಯ ಕೇಂದ್ರವು ಈ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ. ಆದರೆ ಆನ್‌ಲೈನ್ (Online) ಮೂಲಕ ಪಿವಿಸಿ ಆಧಾರ್ ಕಾರ್ಡ್ (PVC Aadhaar cad)ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು. ಮತ್ತೊಂದೆಡೆ, ಇ-ಆಧಾರ್‌ನ ಪ್ರಿಂಟ್ ಔಟ್ ಅನ್ನು ಕೂಡಾ ಪಡೆಯಬಹುದು.
ಪಿವಿಸಿ ಆಧಾರ್ ಕಾರ್ಡ್ ಮಾಡುವುದು ಹೇಗೆ? :
1. ಪಿವಿಸಿ ಆಧಾರ್ ಕಾರ್ಡ್ ಪಡೆಯಲು, ಮೊದಲು ಯುಐಡಿಎಐ ವೆಬ್‌ಸೈಟ್ uidai.gov.in ಅಥವಾ resident.uidai.gov.in ಹೋಗಿ.
2. ನಂತರ 'My Aadhaar' ಮೇಲೆ ಕ್ಲಿಕ್ ಮಾಡಿ.
3. ಈಗ ಇಲ್ಲಿ 'Order Aadhaara PVC Card' ಮೇಲೆ ಕ್ಲಿಕ್ ಮಾಡಿ. ನಂತರ, ಹೊಸ ಪೇಜ್ ತೆರೆದುಕೊಳ್ಳುತ್ತದೆ.
4. ಇದರ ಮೇಲೆ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ವರ್ಚುವಲ್ ಐಡಿ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸಿ.
5. ಈಗ ನೀವು ಕ್ಯಾಪ್ಚಾ ಕೋಡ್ ಅಥವಾ ಸೆಕ್ಯೂರಿಟಿ ಕೋಡ್ ಅನ್ನು ನಮೂದಿಸಬೇಕು, ಅದು ಆಲ್ಫಾನ್ಯೂಮರಿಕ್ ಆಗಿರುತ್ತದೆ.
6. ಇಲ್ಲಿ ನೀವು 'ಮೊಬೈಲ್ ಸಂಖ್ಯೆ ನೋಂದಣಿಯಾಗಿಲ್ಲ' ಎಂದು ಬರೆದಿರುವ ಕಾಲಮ್ ಕಾಣಿಸುತ್ತದೆ. ಇದನ್ನು ಟಿಕ್ ಮಾಡಿ.
7. ಈಗ ನೀವು ಯಾವುದೇ ಪರ್ಯಾಯ ಸಂಖ್ಯೆಯನ್ನು ನಮೂದಿಸಿದರೂ ಅದಕ್ಕೆ OTP ಬರುತ್ತದೆ.
8. OTP ನಮೂದಿಸಿದ ನಂತರ, ನಿಮ್ಮ ಆಧಾರ್ ಮರು ಮುದ್ರಣವಾಗುತ್ತದೆ.
9. ಇದರ ಹೊರತಾಗಿ, ನೀವು ರೂ .50 ಶುಲ್ಕವನ್ನು ಪಾವತಿಸಿ ಅದನ್ನು ಮನೆಗೆ ತರಿಸಿಕೊಳ್ಳಬಹುದು .
ಇದನ್ನೂ ಓದಿ : Kingfisher House Sold: ಕೊನೆಗೂ ಹರಾಜಾದ ವಿಜಯ್ ಮಲ್ಯಗೆ ಸೇರಿದ Kingfisher House, ಎಷ್ಟು ಬೆಲೆ ಬಂತು ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.