ನವದೆಹಲಿ: ನಿಮ್ಮ ಮನೆಯಲ್ಲಿನ್ನೂ ಗ್ಯಾಸ್ ಸಂಪರ್ಕ ಇಲ್ಲವೇ.  ಎಲ್ ಪಿಜಿ (Liquefied Petroleum Gas) ಸಂಪರ್ಕ ಪಡೆಯಲು ಹಣಕಾಸು ತೊಂದರೆಯೆ..? ನೀವು ಬಿಪಿಎಲ್ (Below Poverty Line) ಕೆಟಗೆರಿಗೆ ಬರುತ್ತೀರಾ..? ಹಾಗಾದರೆ ನಿಮಗೊಂದು ಗುಡ್  ನ್ಯೂಸ್ ಇದೆ. ಕೇಂದ್ರ ಸರಕಾರ ಈಗ  ಉಜ್ವಲಾ ಯೋಜನೆಯಡಿ  ಗ್ಯಾಸ್ ಸಂಪರ್ಕ ನೀಡುವಾಗ 1600 ಕೂಡಾ ನೀಡುತ್ತದೆ. ಒಂದು ಕೋಟಿ ಗ್ರಾಹಕರಿಗೆ ಉಜ್ವಲಾ ಯೋಜನೆ (Ujjwala Yojana) ಮುಟ್ಟಿಸಲು ಕೇಂದ್ರ ಸರಕಾರ  ಈ ಬಜೆಟ್ ನಲ್ಲಿ ಗುರಿ ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ನೀವು  ಉಜ್ವಲಾ ಗ್ಯಾಸ್ ಕೊಂಡರೆ 1600 ರೂಪಾಯಿ ಸಿಗಲಿದೆ.


COMMERCIAL BREAK
SCROLL TO CONTINUE READING

ಇಲ್ಲಿದೆ ನೋಡಿ ಮಾಹಿತಿ. 
1. ಈ ಯೋಜನೆಯ ಲಾಭ ಬಿಪಿಎಲ್ (BPL) ಪರಿವಾರದ ಯಾರಾದರೂ ಓರ್ವ ಮಹಿಳೆ ಪಡೆಯಬಹುದು.
2. ಇದನ್ನು ಪಡೆಯಲು ನಿಮ್ಮ ಹತ್ತಿರದ  ಗ್ಯಾಸ್ ಏಜೆನ್ಸಿಗೆ  ಹೋಗಿ. ಕೆವೈಸಿ (KYC)  ಫಾರ್ಮ್ ಭರ್ತಿ ಮಾಡಿ ಸಲ್ಲಿಕೆ ಮಾಡಿ. 
3. ಇದರ ಜೊತೆ ಉಜ್ವಲಾ ಗ್ಯಾಸ್ ಯೋಜನೆಯ ಲಾಭ ಪಡೆಯಲು ಪ್ರಧಾನಮಂತ್ರಿ ಉಜ್ವಲ ಗ್ಯಾಸ್ ಯೋಜನೆಯ ವೆಬ್ ಸೈಟಿಗೆ (website) ಹೋಗಿ ಆದರ ಫಾರ್ಮ್ ಡೌನ್ ಲೋಡ್ (download) ಮಾಡಿ. ಅದನ್ನು ಭರ್ತಿ ಮಾಡಿ ಗ್ಯಾಸ್ ಏಜೆನ್ಸಿಗೆ ಸಲ್ಲಿಸಿ. 
4. ಎರಡು ರೀತಿಯ ಸಿಲಿಂಡರ್ ಇರುತ್ತದೆ. ಒಂದು 14.2 ಕಿ.ಗ್ರಾಂ ಮತ್ತೊಂದು 5 ಕಿ. ಗ್ರಾಂ. ನಿಮಗೆ ಯಾವ ಸಿಲಿಂಡರ್ ಬೇಕು ಅನ್ನೋದನ್ನು ಲಿಖಿತ ರೂಪದಲ್ಲಿ ಕೊಡಿ. 
5. ಗ್ಯಾಸ್ ಏಜನ್ಸಿಯವನಿಗೆ ನಿಮ್ಮ ಬಿಪಿಎಲ್ ಕಾರ್ಡ್ (BPL Card), ಪಡಿತರ ಚೀಟಿ (Ration Card), ಆಧಾರ್ ಕಾರ್ಡ್ (Aadhaar Card), ವೋಟರ್ ಐಡಿ(EPIC card), ಮತ್ತು ಬ್ಯಾಂಕ್ ಸ್ಟೇಟ್ ಮೆಂಟ್ (Bank Statement) ಜಮೆ ಮಾಡಬೇಕಾಗುತ್ತದೆ. ಒಂದು ಪಾಸ್ ಪೋರ್ಟ್ ಸೈಜ್ ಫೋಟೋ ಕೂಡಾ ನೀಡಬೇಕಾಗುತ್ತದೆ. ಇದರ ಬಳಿಕವೇ ನಿಮಗೆ  ಉಜ್ವಲಾ ಯೋಜನೆಯ ಪ್ರಯೋಜನ ಸಿಗುತ್ತದೆ. 


ಇದನ್ನೂ ಓದಿ : PF ಖಾತೆಯಲ್ಲಿ ಆರಂಭವಾಗಿದೆ ಈ ಆನ್‌ಲೈನ್ ಸೌಲಭ್ಯ


ಉಜ್ವಲಾ ಯೋಜನೆಯಡಿ ಇನ್ನೂ ಇದೆ ಲಾಭ..!
ಉಜ್ವಲಾ ಯೋಜನೆಯಡಿ ಗ್ಯಾಸ್ ಸಂಪರ್ಕ ಕೊಳ್ಳುವಾಗ ಬಿಪಿಎಲ್ ಪರಿವಾರಕ್ಕೆ 1600 ರೂಪಾಯಿ ದುಡ್ಡು ಕೂಡಾ ನೀಡಲಾಗುತ್ತದೆ. ಇಷ್ಟೇಅಲ್ಲ ಗ್ಯಾಸ್ ಒಲೆ (Gas stove) ಖರೀದಿಸಲು ಮತ್ತು ಮೊದಲ ಸಲ ಗ್ಯಾಸ್ ಸಿಲಿಂಡರ್ ಭರಿಸಲು ತಗಲುವ ಖರ್ಚುಗಳನ್ನು ಕಂತಿನಲ್ಲೂ ಪಾವತಿಸುವ ವ್ಯವಸ್ಥೆ ಇದೆ.  ಎಷ್ಟು ಸಾಧ್ಯವೋ ಅಷ್ಟು ಜನರು ಅಡುಗೆ ಅನಿಲ (LPG) ಬಳಸಲಿ ಎಂಬ ಉದ್ದೇಶದಿಂದ ಸರ್ಕಾರ   ಈ ನೆರವನ್ನು ನೀಡುತ್ತಿದೆ. 


ನೀವೂ ಬಿಪಿಎಲ್ ಕೆಟಗರಿಯಲ್ಲಿ ಬರುತ್ತಿದ್ದರೆ, ನಿಮ್ಮ ಮನೆಗೆ ಇನ್ನೂ ಗ್ಯಾಸ್ ಸಂಪರ್ಕ ಸಿಕ್ಕಿರದಿದ್ದರೆ ಇಂದೇ ಗ್ಯಾಸ್ ಏಜೆನ್ಸಿಯವನ ಬಳಿಗೆ ಹೋಗಿ..


ಇದನ್ನೂ ಓದಿ : ನಿಮ್ಮ LPG ಸಂಪರ್ಕವನ್ನು ಆಧಾರ್‌ಗೆ ಲಿಂಕ್ ಮಾಡಲು ಇಲ್ಲಿದೆ 5 ಸುಲಭ ವಿಧಾನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.