National Pension Scheme Update: ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ದೇಶದ ಕೋಟ್ಯಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಆಗ್ರಹದ ನಡುವೆ. ಕೆಲ ರಾಜ್ಯ ಸರ್ಕಾರಗಳು ಈ ಕುರಿತು ನೌಕರರ ಬೇಡಿಕೆಗಳನ್ನು ಒಪ್ಪಿಕೊಂಡಿವೆ. ಆದರೆ ಕೇಂದ್ರ ಸರ್ಕಾರ ಹಳೆಯ ಮತ್ತು ಹೊಸ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಧ್ಯ ಮಾರ್ಗವನ್ನು ಕಂಡು ಹಿಡಿಯಲು ಯತ್ನಿಸುತ್ತಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಹಣಕಾಸು ಮಸೂದೆಯನ್ನು ಮಂಡಿಸುವಾಗ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು (ಎನ್‌ಪಿಎಸ್) ಸುಧಾರಿಸುವ ಅಗತ್ಯವಿದೆ ಎಂದು ಲೋಕಸಭೆಯಲ್ಲಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಹಣಕಾಸು ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು.
ಸರ್ಕಾರಿ ನೌಕರರ ಪಿಂಚಣಿಗೆ ಸಂಬಂಧಿಸಿದ ವಿಷಯದಲ್ಲಿ ಎನ್‌ಪಿಎಸ್ ಸುಧಾರಿಸಲು ಸಮಿತಿಯ ರಚನೆಯನ್ನು ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ. ಹಣಕಾಸು ಕಾರ್ಯದರ್ಶಿ ನೇತೃತ್ವದಲ್ಲಿ ಈ ಸಮಿತಿಯನ್ನು ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ. ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಸ್ಥಾಪಿಸಬೇಕೆಂಬ ನೌಕರರ ಬಹುದಿನಗಳ ಬೇಡಿಕೆಯ ನಡುವೆ ಮಧ್ಯ ಮಾರ್ಗವನ್ನು ಕಂಡುಹಿಡಿಯಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದು ಇದೀಗ ಜನರ ಮುಂದೆ ಇರುವ ಪ್ರಶ್ನೆಯಾಗಿದೆ. ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಾಗದಂತೆ ಮತ್ತು ನೌಕರರು ನೆಮ್ಮದಿಯಿಂದ ಇರಲು ಮಾರ್ಗೋಪಾಯ ಕಂಡುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ-DA Hike Approved: ಸರ್ಕಾರಿ ನೌಕರರಿಗೆ ಭಾರಿ ಸಂತಸದ ಸುದ್ದಿ, ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಮೋದಿ ಸಂಪುಟ ಅನುಮೋದನೆ


ಮಧ್ಯ ಮಾರ್ಗ ಕಂಡುಹಿಡಿಯುವ ಪ್ರಯತ್ನ
ಹಳೆಯ ಪಿಂಚಣಿ (ಒಪಿಎಸ್) ಬೇಡಿಕೆಗೆ ಮಧ್ಯ ಮಾರ್ಗ ಹುಡುಕಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮೂಲಗಳು ಹೇಳಿವೆ.  ಇದಕ್ಕಾಗಿ ಸರ್ಕಾರ ಎರಡು ಆಯ್ಕೆಗಳನ್ನು ಪರಿಗಣಿಸುತ್ತಿದೆ. ಮೊದಲ ಆಯ್ಕೆಯಾಗಿ, ಸರ್ಕಾರಿ ನೌಕರರಿಗೆ ಎನ್‌ಪಿಎಸ್ ಅಡಿಯಲ್ಲಿ ಪಡೆದ ಕೊನೆಯ ಸಂಬಳದ ಸುಮಾರು 50% ರಷ್ಟು ಖಾತರಿ ಪಿಂಚಣಿ ನೀಡಬೇಕು ಎಂಬುದಾಗಿದೆ. ಈ ನಿಯಮ ಜಾರಿಯಿಂದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗದಂತೆ ಈಗಿರುವ ಎನ್ ಪಿಎಸ್ ನಲ್ಲಿ ಬದಲಾವಣೆ ಮಾಡಬಹುದು.


ಇದನ್ನೂ ಓದಿ-BIG Update: ಆದಾಯ ತೆರಿಗೆ ಪಾವತಿದಾರರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ! ಇಲ್ಲಿದೆ ವಿವರ


NPS ನಲ್ಲಿ ಈ ರೀತಿಯ ಬದಲಾವಣೆಗಳು ಸಾಧ್ಯ
ನಿವೃತ್ತಿಯ ನಂತರ ಉದ್ಯೋಗಿಯು ಒಟ್ಟು ಮೊತ್ತದ 41.7% ಮೊತ್ತವನ್ನು ಪಡೆಯುವ ರೀತಿಯಲ್ಲಿ ಎನ್‌ಪಿಎಸ್‌ನಲ್ಲಿ ಬದಲಾವಣೆಯಾಗಬಹುದು ಎಂದು ಹಣಕಾಸು ಸಚಿವಾಲಯಕ್ಕೆ ಸಂಬಂಧಿಸಿದ ಮೂಲಗಳು ಹೇಳಿವೆ. ಉಳಿದ 58.3% ಮೊತ್ತವನ್ನು ವರ್ಷಾಶನದ ಆಧಾರದ ಮೇಲೆ ನೀಡಲಾಗುವುದು. ಕೇಂದ್ರ/ರಾಜ್ಯ ಸರ್ಕಾರದ ಕೊಡುಗೆ (14%) ಯಿಂದ ನಿರ್ಮಾಣಗೊಂಡ 58.3% ಕಾರ್ಪಸ್ ಅನ್ನು ಅನ್ಯೂಟೈಸ್ ಮಾಡಿದರೆ, NPS ನಲ್ಲಿನ ಪಿಂಚಣಿಯು ಕೊನೆಯದಾಗಿ ಪಡೆದ ಸಂಬಳದ ಸುಮಾರು 50% ಆಗಿರಬಹುದು ಎಂದು ವಿಶ್ಲೇಷಣೆಯಿಂದ ತಿಳಿದುಬಂದಿದೆ. ಆದರೆ ಇದುವರೆಗೆ ಸರ್ಕಾರದಿಂದ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಹೇಳಿಕೆ ಪ್ರಕಟಗೊಂಡಿಲ್ಲ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.