ಹಳೆ ಪಿಂಚಣಿ ಯೋಜನೆ ಬಗ್ಗೆ ಹೊರ ಬಿತ್ತು ಅಪ್ಡೇಟ್ !ಸರ್ಕಾರಿ ನೌಕರರಿಗೆ ಸರ್ಕಾರದಿಂದ ಸಿಕ್ಕಿತ್ತು ಗ್ಯಾರಂಟಿ
Old Pension Update :ರಾಷ್ಟ್ರೀಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡುವ ನೌಕರರಿಗೆ ನಿವೃತ್ತಿಯ ನಂತರ ಅವರ ಮಾಸಿಕ ವೇತನದ 50% ಅನ್ನು ಪಿಂಚಣಿಯಾಗಿ ನೀಡಲಾಗುವುದು ಎಂದು ಸರ್ಕಾರ ಹೇಳುತ್ತಿದೆ.
Old Pension Update : ನಿವೃತ್ತಿಯ ನಂತರ ಪಿಂಚಣಿಗಾಗಿ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುತ್ತಿದ್ದರೆ,ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ.ಹೌದು, ಹಳೆಯ ಪಿಂಚಣಿ ಯೋಜನೆಯನ್ನು (OPS) ಮರುಸ್ಥಾಪಿಸುವಂತೆ ಕೇಂದ್ರ ನೌಕರರು ಮತ್ತು ವಿವಿಧ ರಾಜ್ಯ ಸರ್ಕಾರಿ ನೌಕರರು ಬಹಳ ದಿನಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ.ಸರ್ಕಾರಿ ನೌಕರರ ಬೇಡಿಕೆಗಳನ್ನು ಒಪ್ಪಿಕೊಂಡು,ಹಿಮಾಚಲ ಪ್ರದೇಶ,ಛತ್ತೀಸ್‌ಗಢ, ಪಂಜಾಬ್,ರಾಜಸ್ಥಾನ ಮತ್ತು ಜಾರ್ಖಂಡ್‌ನಲ್ಲಿಯೂ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ.ಆದರೆ, ಕೇಂದ್ರ ಸರ್ಕಾರ ಮಾತ್ರ ಅದನ್ನು ಮರುಸ್ಥಾಪಿಸಲು ನಿರಾಕರಿಸಿತ್ತು.
ನೌಕರರಿಗೆ ಶೇ.50ರಷ್ಟು ಪಿಂಚಣಿ ನೀಡುವುದಾಗಿ ಸರ್ಕಾರ ಭರವಸೆ :
ನಿವೃತ್ತಿಯ ನಂತರ,ಎನ್‌ಪಿಎಸ್ ಅಡಿಯಲ್ಲಿ ಯಾವುದೇ ನಿಶ್ಚಿತ ಪ್ರಯೋಜನವಿಲ್ಲ ಎಂದು ನೌಕರರ ಸಂಘಗಳು ಬೇಸರ ವ್ಯಕ್ತಪಡಿಸುತ್ತವೆ. ಆದರೆ, ಒಪಿಎಸ್‌ನಲ್ಲಿ ಉದ್ಯೋಗಿಗೆ ಸ್ಥಿರ ಪಿಂಚಣಿ ಸಿಗುತ್ತದೆ.ಇಂತಹ ಪರಿಸ್ಥಿತಿಯಲ್ಲಿ,ಎನ್‌ಪಿಎಸ್ ವ್ಯಾಪ್ತಿಗೆ ಒಳಪಡುವ ಕೇಂದ್ರ ಉದ್ಯೋಗಿಗಳಿಗೆ ನಿವೃತ್ತಿಯ ನಂತರ ಒಪಿಎಸ್‌ಗೆ ಸಮಾನವಾದ ಪ್ರಯೋಜನಗಳು ಸಿಗುತ್ತವೆ ಎನ್ನುವ ಭರವಸೆಯನ್ನು ನೀಡುವುದಕ್ಕೆ ಸರ್ಕಾರ ಮುಂದಾಗಿದೆ.ರಾಷ್ಟ್ರೀಯ ಪಿಂಚಣಿ ಯೋಜನೆ (NPS ) ವ್ಯಾಪ್ತಿಗೆ ಒಳಪಡುವ ನೌಕರರಿಗೆ ನಿವೃತ್ತಿಯ ನಂತರ ಅವರ ಮಾಸಿಕ ವೇತನದ 50% ಅನ್ನು ಪಿಂಚಣಿಯಾಗಿ ನೀಡಲಾಗುವುದು ಎಂದು ಸರ್ಕಾರ ಹೇಳುತ್ತಿದೆ.
ಇದನ್ನೂ ಓದಿ : ರತನ್ ಟಾಟಾ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತ ಕುಟುಂಬದ ಹೆಣ್ಣು ಮಕ್ಕಳಿವರು!ಪ್ರಚಾರದಿಂದ ದೂರ ಉಳಿದ ಸುಂದರಿಯರ ಫೋಟೋ ಇಲ್ಲಿವೆ !
ಪ್ರಸ್ತುತ ಯೋಜನೆಯಲ್ಲಿ ನೌಕರರಿಗೆ ಉತ್ತಮ ಆದಾಯ :
ನಿವೃತ್ತಿಯ ನಂತರ ಸಮರ್ಪಕವಾಗಿ ಪಿಂಚಣಿ ಸಿಗುತ್ತದೆಯೋ ಇಲ್ಲವೋ ಎನ್ನುವ ಚಿಂತೆ ನೌಕರರನ್ನು ಕಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. 2004ರ ನಂತರ ನೇಮಕಗೊಂಡ ನೌಕರರು ಈ ಯೋಜನೆಯಲ್ಲಿ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ.ಆದರೆ, ಅದಕ್ಕಾಗಿ 25-30 ವರ್ಷಗಳವರೆಗೆ ಠೇವಣಿಯಿಂದ ಒಂದೇ ಒಂದು ಪೈಸೆ ಹಿಂಪಡೆಯುವಂತಿಲ್ಲ.
ಒಪಿಎಸ್‌ಗೆ ಹಿಂತಿರುಗದಿರಲು ನಿರ್ಧಾರ:
ಮೂಲಗಳ ಪ್ರಕಾರ,ಹಳೆಯ ಪಿಂಚಣಿ ಯೋಜನೆಗೆ (ಒಪಿಎಸ್) ಹಿಂತಿರುಗದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಆದರೆ,ಮನಮೋಹನ್ ಸಿಂಗ್ ಸರ್ಕಾರದ ನಿರ್ಧಾರದಲ್ಲಿ ಕಾಂಗ್ರೆಸ್ ಬದಲಾವಣೆಯನ್ನು ಘೋಷಿಸುವ ಸಮಯದಲ್ಲಿ ಸರ್ಕಾರವು ಒಂದು ನಿರ್ದಿಷ್ಟ ಮಟ್ಟದ ಸಹಾಯಕ್ಕಾಗಿ ಒಂದು ಒಪ್ಶನ್ ಇಟ್ಟಿತ್ತು. ಹಳೆಯ ಪಿಂಚಣಿ ಯೋಜನೆ (OPS) ಅಡಿಯಲ್ಲಿ, ನಿವೃತ್ತಿಯ ನಂತರ ಪ್ರತಿ ತಿಂಗಳು ಪಡೆಯುವ ಕೊನೆಯ ಸಂಬಳದ ಅರ್ಧದಷ್ಟನ್ನು ಪಿಂಚಣಿಯಾಗಿ ನೀಡಲಾಗುವುದು.ವೇತನ ಆಯೋಗದ ಶಿಫಾರಸಿನ ಆಧಾರದ ಮೇಲೆ ಈ ಪಿಂಚಣಿ ಕೂಡಾ ಕಾಲಕಾಲಕ್ಕೆ ಹೆಚ್ಚಾಗುತ್ತದೆ. ಆದರೆ ಹೊಸ ಪಿಂಚಣಿ ಯೋಜನೆಯಲ್ಲಿ (NPS),ಸರ್ಕಾರಿ ನೌಕರರು ಮೂಲ ವೇತನದ 10% ವನ್ನು ಠೇವಣಿ ಮಾಡುತ್ತಾರೆ.ಸರ್ಕಾರವು ತನ್ನ ಕಡೆಯಿಂದ 14% ರಷ್ಟು ಕೊಡುಗೆ ನೀಡುತ್ತದೆ.
ಇದನ್ನೂ ಓದಿ : Gruha Lakshmi Scheme: ಇಂತಹವರಿಗೆ ಸಿಗಲ್ಲ ʼಗೃಹಲಕ್ಷ್ಮಿʼ ಯೋಜನೆಯ ಹಣ..!
50% ಗ್ಯಾರಂಟಿ ನೀಡುವ ಬಗ್ಗೆ ಸರ್ಕಾರ ಚಿಂತನೆ :
ನಿವೃತ್ತಿಯ ನಂತರ ಠೇವಣಿ ಇಡುವ ಮೊತ್ತದ ಆಧಾರದ ಮೇಲೆ ಮಾತ್ರ ನೌಕರರು ಪಿಂಚಣಿ ಪಡೆಯುತ್ತಾರೆ. ಸೋಮನಾಥನ್ ಸಮಿತಿಯು ಪ್ರಪಂಚದಾದ್ಯಂತದ ದೇಶಗಳ ಪಿಂಚಣಿ ಯೋಜನೆಗಳು ಮತ್ತು ಆಂಧ್ರಪ್ರದೇಶ ಸರ್ಕಾರ ಮಾಡಿದ ಬದಲಾವಣೆಗಳ ಮೇಲೆ ಅಧ್ಯಯನ ನಡೆಸಿದೆ.ಇಷ್ಟೇ ಅಲ್ಲದೆ, ಪಿಂಚಣಿಯಾಗಿ ಸರ್ಕಾರ ನಿಗದಿತ ಮೊತ್ತವನ್ನು ಖಾತರಿಪಡಿಸಿದರೆ ಅದರ ಪರಿಣಾಮ ಏನಾಗಬಹುದು ಎನ್ನುವ ಬಗ್ಗೆಯೂ ಈ ಸಮಿತಿ ಅಧ್ಯಯನ ನಡೆಸುತ್ತಿದೆ. ಈ ಪ್ರಕಾರ 40-45ರಷ್ಟು ಪಿಂಚಣಿ ನೀಡುವುದು ಸಾಧ್ಯ ಎನ್ನುವುದನ್ನು ಸಂತಿ ಕಂಡುಕೊಂಡಿದೆ. ಆದರೆ ಇದರಿಂದ 25-30 ವರ್ಷಗಲವರೆಗೆ ಕೆಲಸ ಮಾಡುವ ನೌಕರರ ಚಿಂತೆ ದೂರವಾಗುವುದಿಲ್ಲ.ಹೀಗಾಗಿ ಸರ್ಕಾರ ಈಗ ಶೇ.50ರಷ್ಟು ಪಿಂಚಣಿಯ ಗ್ಯಾರಂಟಿ ನೀದುವ ಬಗ್ಗೆ ಚಿಂತನೆ ನಡೆಸಿದೆ.
ಹೊಸ ವ್ಯವಸ್ಥೆಯಲ್ಲಿ ಸರ್ಕಾರ ನಿಧಿ ರಚಿಸಲಿದೆ :
ಇದರ ಅರ್ಥ ಒಂದು ವೇಳೆ ಪಿಂಚಣಿಗೆ ನೀಡುವ ಹಣ ಕಡಿಮೆಯಾದರೆ ಸರ್ಕಾರ ಅದನ್ನು ಸರಿದೂಗಿಸಬೇಕಾಗುತ್ತದೆ.ಬಹುಶಃ ಸರ್ಕಾರವು ಹೊಸ ವ್ಯವಸ್ಥೆಯಲ್ಲಿ ನಿವೃತ್ತ ನಿಧಿಯನ್ನು ರಚಿಸಬಹುದು. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ನಿವೃತ್ತಿ ಪ್ರಯೋಜನಗಳಿಗಾಗಿ ಹಣವನ್ನು ರಚಿಸುವಂತೆಯೇ ಪ್ರತಿ ವರ್ಷವೂ ಸರ್ಕಾರ ಈ ನಿಧಿಯಲ್ಲಿ ಹಣವನ್ನು ಠೇವಣಿ ಮಾಡಬೇಕಾಗುತ್ತದೆ.
ಇದನ್ನೂ ಓದಿ: LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಹಿಸುದ್ದಿ: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.