ಪುತ್ರನ ವಿವಾಹಕ್ಕೂ ಮುನ್ನ ಹೊಸ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ ಮುಖೇಶ್ ಅಂಬಾನಿ !

ಜುಲೈ 12 ರಂದು ನಡೆಯಲಿರುವ ಅನಂತ್ ಮತ್ತು ರಾಧಿಕಾ ಮದುವೆಗೆ ಸಿದ್ಧತೆಗಳು ಭರದಿಂದ ಸಾಗಿವೆ.ಅನಂತ್ ಅಂಬಾನಿ ಮದುವೆಗೂ ಮುನ್ನವೇ ಅಂಬಾನಿ ಕುಟುಂಬದಿಂದ ದೊಡ್ಡ ಸುದ್ದಿ ಹೊರ ಬಿದ್ದಿದೆ. 

Written by - Ranjitha R K | Last Updated : Jul 9, 2024, 01:35 PM IST
  • ಮುಖೇಶ್ ಅಂಬಾನಿ ಮನೆಯಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ.
  • ಅನಂತ್ ಮತ್ತು ರಾಧಿಕಾ ಮದುವೆಗೆ ಸಿದ್ಧತೆಗಳು ಭರದಿಂದ ಸಾಗಿವೆ
  • ಅನಂತ್ ಮದುವೆಗೂ ಮುನ್ನವೇ ಅಂಬಾನಿ ಕುಟುಂಬದಿಂದ ಮತ್ತೊಂದು ದೊಡ್ಡ ಸುದ್ದಿ
ಪುತ್ರನ ವಿವಾಹಕ್ಕೂ ಮುನ್ನ ಹೊಸ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ ಮುಖೇಶ್ ಅಂಬಾನಿ ! title=

Reliance Retail Store Like Decathlon : ಮುಖೇಶ್ ಅಂಬಾನಿ ಮನೆಯಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ.ಜುಲೈ 12 ರಂದು ನಡೆಯಲಿರುವ ಅನಂತ್ ಮತ್ತು ರಾಧಿಕಾ ಮದುವೆಗೆ ಸಿದ್ಧತೆಗಳು ಭರದಿಂದ ಸಾಗಿವೆ.ರಾಜಕೀಯ ವ್ಯಕ್ತಿಗಳಿಂದ ಹಿಡಿದು ದೊಡ್ಡ ಉದ್ಯಮಿಗಳು,ಬಾಲಿವುಡ್ ತಾರೆಯರು ಮತ್ತು ಆಯಾ ಕ್ಷೇತ್ರದ ದಿಗ್ಗಜರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಅನಂತ್ ಮದುವೆಗೂ ಮುನ್ನವೇ ಅಂಬಾನಿ ಕುಟುಂಬದಿಂದ ಮತ್ತೊಂದು ದೊಡ್ಡ ಸುದ್ದಿ ಬರುತ್ತಿದೆ.ವರದಿಯ ಪ್ರಕಾರ, ಮುಖೇಶ್ ಅಂಬಾನಿ ಕಂಪನಿ ರಿಲಯನ್ಸ್ ರಿಟೇಲ್ ಕ್ರೀಡಾ ಸಾಮಗ್ರಿಗಳನ್ನು ಮಾರಾಟ ಮಾಡುವ ಬ್ರ್ಯಾಂಡ್ ಅನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ.ಈ ಬ್ರ್ಯಾಂಡ್ ಫ್ರಾನ್ಸ್‌ನ ಪ್ರಸಿದ್ಧ ಸ್ಪೋರ್ಟ್ಸ್ ಚೈನ್ ಡೆಕಾಥ್ಲಾನ್‌ನೊಂದಿಗೆ ಸ್ಪರ್ಧಿಸಲಿದೆ.

Decathlon ಮಾದರಿಯಲ್ಲಿ ವ್ಯವಹಾರ  ಆರಂಭಿಸಲಿರುವ ರಿಲಯನ್ಸ್ : 
ದೆಹಲಿ-ಮುಂಬೈ ಮತ್ತು ಚೆನ್ನೈನಂತಹ ನಗರಗಳಲ್ಲಿ ಸರಿಯಾದ ಸ್ಥಳದಲ್ಲಿ 8,000 ರಿಂದ 10,000 ಚದರ ಅಡಿ ಪ್ರದೇಶದಲ್ಲಿ ಶೋರೂಮ್‌ಗಳನ್ನು ತೆರೆಯಲು ರಿಲಯನ್ಸ್ ಸಿದ್ದತೆ ನಡೆಸಿದೆ. ಹೊಸ ಬ್ರಾಂಡ್‌ನ ಹೆಸರೇನು ಎಂಬುದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ರಿಲಯನ್ಸ್ ಡೆಕಾಥ್ಲಾನ್‌ನ ಯಶಸ್ವಿ ವ್ಯಾಪಾರ ಮಾದರಿಯನ್ನು ಅನುಸರಿಸಲಿದೆ ಎನ್ನಲಾಗುತ್ತಿದೆ. ಅಂದರೆ ರಿಲಯನ್ಸ್ ರಿಟೇಲ್ ಡೆಕಾಥ್ಲಾನ್ ನಂತಹ ಕ್ರೀಡಾ ಉಡುಪುಗಳು ಮತ್ತು ಕ್ರೀಡೆಗೆ ಸಂಬಂಧಿತ ವಸ್ತುಗಳನ್ನು ಮಾರಾಟ ಮಾದುವ ಯೋಜನೆ ರೂಪಿಸಿದೆ. 

ಇದನ್ನೂ ಓದಿ : PMAY Scheme: ಮನೆ ಇಲ್ಲದವರಿಗೆ ಉಚಿತ ಮನೆ! ಈ ಯೋಜನೆಯಡಿ ಅರ್ಜಿ ಸಲ್ಲಿಸಿರಿ

2009 ರಲ್ಲಿ ಭಾರತದಲ್ಲಿ ಔಟ್ಲೆಟ್ ಪ್ರಾರಂಭ :
ಕ್ರೀಡೆಗೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುವ ಡೆಕಾಥ್ಲಾನ್ ಬ್ರ್ಯಾಂಡ್, 2009 ರಲ್ಲಿ ಭಾರತದಲ್ಲಿ ತನ್ನ ಔಟ್ಲೆಟ್ ಅನ್ನು ಪ್ರಾರಂಭಿಸಿತು. ಅಂದಿನಿಂದ ಅವರ ಗಳಿಕೆ ನಿರಂತರವಾಗಿ ಹೆಚ್ಚುತ್ತಿದೆ. ಕಳೆದ ವರ್ಷ (FY23) ಅದರ ಗಳಿಕೆ 3,955 ಕೋಟಿ ರೂ. FY22 ರ ಹಣಕಾಸು ವರ್ಷದಲ್ಲಿ ಡೆಕಾಥ್ಲಾನ್‌ನ ಈ ಅಂಕಿ ಅಂಶವು ಸುಮಾರು 2,936 ಕೋಟಿ ರೂ.ಯಷ್ಟಾಗಿತ್ತು. ಇಷ್ಟು ಮಾತ್ರವಲ್ಲದೆ, ಕಳೆದ ಕೆಲವು ವರ್ಷಗಳಲ್ಲಿ ಇತರ ಕ್ರೀಡಾ ಬ್ರಾಂಡ್‌ಗಳಾದ Puma, Adidas, Skechers ಮತ್ತು Asics ಗಳ ಗಳಿಕೆಯು ಗಮನಾರ್ಹವಾಗಿ ಹೆಚ್ಚಾಗಿದೆ.

ಡೆಕಾಥ್ಲಾನ್‌ನ ಅಧಿಕಾರಿ ಸ್ಟೀವ್ ಡೈಕ್ಸ್ ಭಾರತವನ್ನು ಪ್ರಮುಖ ಮಾರುಕಟ್ಟೆ ಎಂದು ಬಣ್ಣಿಸಿದ್ದಾರೆ.ಕಂಪನಿಯು ಪ್ರತಿ ವರ್ಷ 10 ಕ್ರೀಡಾ ಸಂಬಂಧಿತ ಸರಕುಗಳ ಮಳಿಗೆಗಳನ್ನು ತೆರೆಯಲು ಯೋಜಿಸಿದೆ ಎಂದು ಅವರು ಹೇಳಿದ್ದಾರೆ. ಈ ಮಳಿಗೆಗಳ ಗಾತ್ರವು ನಗರ ಮತ್ತು ಸ್ಥಳಕ್ಕೆ ಅನುಗುಣವಾಗಿ ಬದಲಾಗುತ್ತದೆ. ನಗರಗಳಿಗೆ ಅನುಗುಣವಾಗಿ ಜನರ ಆದ್ಯತೆಗಳನ್ನು ಪೂರೈಸುವ ಯೋಜನೆ ಇದೆ. ಭಾರತದ ಪ್ರತಿಯೊಂದು ನಗರವೂ ​​ವಿಭಿನ್ನವಾಗಿದ್ದು, ಅದಕ್ಕೆ ತಕ್ಕಂತೆ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತೇವೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : Good News: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ!

ರಿಲಯನ್ಸ್ ರೀಟೇಲ್ ಚೀನಾದ ಫಾಸ್ಟ್-ಫ್ಯಾಶನ್ ಕಂಪನಿ ಶೀನ್ ಅನ್ನು ಕೆಲವೇ ವಾರಗಳಲ್ಲಿ ಭಾರತಕ್ಕೆ ತರುತ್ತಿದೆ ಎಂದು ಹೇಳಲಾಗುತ್ತಿದೆ.ಶೇನ್ ಜಾಗತಿಕ ಲೇಬಲ್‌ನಲ್ಲಿ ಪ್ರಸಿದ್ಧ ಬ್ರಾಂಡ್ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News