ಬೆಂಗಳೂರು : ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಭರ್ಜರಿ ಗಿಫ್ಟ್ ನೀಡಿದೆ. 2022-23ರ ಆರ್ಥಿಕ ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ (ಇಪಿಎಫ್‌ಒ) ಅಡಿಯಲ್ಲಿ ಠೇವಣಿಗಳ ಮೇಲೆ ಶೇಕಡಾ 8.15 ಬಡ್ಡಿಯನ್ನು ಮೋದಿ ಸರ್ಕಾರ ಅನುಮೋದಿಸಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಅವರ ಭವಿಷ್ಯ ಭದ್ರವಾಗಲಿದೆ.  ಸದಸ್ಯರ ಖಾತೆಗಳಿಗೆ ಶೇಕಡಾ 8.15 ರ ಬಡ್ಡಿಯೊಂದಿಗೆ ಜಮಾ ಮಾಡಬೇಕು ಎಂದು ಇಪಿಎಫ್‌ಒ ಸೋಮವಾರ ಹೊರಡಿಸಿದ ಅಧಿಕೃತ ಆದೇಶದಲ್ಲಿ ತಿಳಿಸಿದೆ. 


COMMERCIAL BREAK
SCROLL TO CONTINUE READING

ಮಾರ್ಚ್ 2022 ರಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) 2021-22 ರ EPF ಠೇವಣಿಗಳ ಮೇಲಿನ ಬಡ್ಡಿ ದರವ 8.5 ಶೇಕಡಾದಿಂದ 8.10 ಶೇಕಡಾಕ್ಕೆ  ಹೆಚ್ಚಿಸಿತ್ತು. ಇಪಿಎಫ್ ಮೇಲಿನ ಬಡ್ಡಿ ದರವು 1977-78ರಲ್ಲಿ ಶೇಕಡಾ 8 ರಷ್ಟಿತ್ತು. ಇದುವರೆಗಿನ ಅತ್ಯಂತ ಕಡಿಮೆ ದರ ಅದಾಗಿತ್ತು. 


ಇದನ್ನೂ ಓದಿ : ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ ! ವೇತನ ಹೆಚ್ಚಳದೊಂದಿಗೆ ಕೈ ಸೇರುವುದು ಈ ತಿಂಗಳ ಸ್ಯಾಲರಿ


ಪಿಂಚಣಿ ನಿಧಿ ಸಂಸ್ಥೆ (EPFO) 2022-2023 ವರ್ಷಕ್ಕೆ ನೌಕರರ ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನು 8.15 ಪ್ರತಿಶತಕ್ಕೆ ಹೆಚ್ಚಿಸಿದೆ. ಇದು ಉದ್ಯೋಗಿಗಳಿಗೆ ಸಂತಸದ ಸುದ್ದಿಯಾಗಿದೆ. ಮಾರ್ಚ್‌ನಲ್ಲಿ ಇಪಿಎಫ್‌ಒ  ಅಧಿಕಾರಿಗಳು ಅನುಮೋದಿಸಿದ ಬಡ್ಡಿ ದರವನ್ನು ಹಣಕಾಸು ಸಚಿವಾಲಯ ಅನುಮೋದಿಸಿದ ನಂತರ ಈ ಆದೇಶ ಬಂದಿದೆ . ಈಗ EPFO ​​ನ ಪ್ರಾದೇಶಿಕ ಕಚೇರಿಗಳು ಗ್ರಾಹಕರ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡುತ್ತವೆ.


ಬಡ್ಡಿ ಪಾವತಿ ದಿನಾಂಕವನ್ನು ಸರ್ಕಾರ ಇನ್ನೂ ಅಧಿಕೃತವಾಗಿ ಪ್ರಕಟಿಸಬೇಕಿದೆ. ಆದರೆ, ಈ ಕುರಿತು ಸರ್ಕಾರ ಶೀಘ್ರದಲ್ಲೇ ಘೋಷಣೆ ಮಾಡಲಿದೆ ಎನ್ನಲಾಗಿದೆ. ಸರ್ಕಾರವು ಇಪಿಎಫ್ ಬಡ್ಡಿಯನ್ನು ಉದ್ಯೋಗಿಯ ಖಾತೆಗೆ ಜಮಾ ಮಾಡಿದಾಗ ಖಾತೆಗೆ ಒಂದು ದೊಡ್ಡ ಮೊತ್ತ ಬರುತ್ತದೆ. 


ಪರಿಶೀಲಿಸುವುದು ಹೇಗೆ ? : 
ಪಿಎಫ್ ಬಡ್ಡಿ ಮೊತ್ತವನ್ನು ಸರ್ಕಾರಿ ನೌಕರರ ಖಾತೆಗೆ ಜಮಾ ಮಾಡಿದ ನಂತರ, ಅದು ಅವರ ಖಾತೆಗೆ ತಲುಪಿದೆಯೇ ಎನ್ನುವುದನ್ನು ನೌಕರರು ಖಚಿತಪಡಿಸಿಕೊಳ್ಳಬೇಕು. ಹಾಗಿದ್ದರೆ ಇದನ್ನು ಪರಿಶೀಲಿಸುವುದು ಹೇಗೆ ?


ಇದನ್ನೂ ಓದಿ : ಏರಿಕೆಯ ಬೆನ್ನಲ್ಲೇ ಮತ್ತೆ ಕುಸಿಯಿತು ಚಿನ್ನದ ಬೆಲೆ ! ಹಬ್ಬಕ್ಕೂ ಮುನ್ನ ಖರೀದಿಸಿಕೊಳ್ಳಿ ಬಂಗಾರ !


ನೀವು ಈ ರೀತಿಯಲ್ಲಿ ಮೊತ್ತವನ್ನು ಪರಿಶೀಲಿಸಬಹುದು : 
ಪಿಎಫ್ ಚಂದಾದಾರರು ಬಡ್ಡಿಯಾಗಿ ಪಡೆದ ಮೊತ್ತವನ್ನುಈ ಕೆಳಗಿನ ವಿಧಾನಗಳಲ್ಲಿ ಪರಿಶೀಲಿಸಬಹುದು.


1. ಉಮಾಂಗ್ ಅಪ್ಲಿಕೇಶನ್ ಮೂಲಕ
2. ಇಪಿಎಫ್‌ಒ ವೆಬ್‌ಸೈಟ್ ಮೂಲಕ
3. ಮಿಸ್ಟ್ ಕಾಲ್ ನೀಡುವ ಮೂಲಕ
4. ಎಸ್‌ಎಂಎಸ್ ಕಳುಹಿಸುವ ಮೂಲಕ


1. ಉಮಂಗ್ ಆ್ಯಪ್:
ಇಪಿಎಫ್ ಖಾತೆಯಲ್ಲಿ ಸರ್ಕಾರ ಎಷ್ಟು ಮೊತ್ತವನ್ನು ಠೇವಣಿ ಮಾಡಿದೆ ಎಂದು ತಿಳಿಯಲು ನೀವು ಎಲ್ಲಿಯೂ ಹೋಗಬೇಕಾಗಿಲ್ಲ. PF ಚಂದಾದಾರರು ಉಮಾಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ, ಕುಳಿತಲ್ಲಿಂದಲೇ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. 


2. EPFO ​​ವೆಬ್‌ಸೈಟ್ : 
ನೀವು EPFO ​​ನ ಅಧಿಕೃತ ವೆಬ್‌ಸೈಟ್‌ಗೆ (epfindia.gov.in) ಭೇಟಿ ನೀಡುವ ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. 


3. ಮಿಸ್ಡ್ ಕಾಲ್ : 
ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಖಾತೆದಾರರ ಮೊಬೈಲ್ ಸಂಖ್ಯೆಯನ್ನು ಇಪಿಎಫ್‌ಒದಲ್ಲಿ ನೋಂದಾಯಿಸಿಕೊಳ್ಳಬೇಕು. ಪಿಎಫ್ ಚಂದಾದಾರರು ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ಮಾಹಿತಿಯನ್ನು ಪಡೆಯಲು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಬೇಕು. ಸ್ವಲ್ಪ ಸಮಯದ ನಂತರ, ಖಾತೆಯ ಮಾಹಿತಿಯನ್ನು ನಿಮ್ಮ ಮೊಬೈಲ್‌ಗೆ SMS ಮೂಲಕ ಕಳುಹಿಸಲಾಗುತ್ತದೆ.


ಇದನ್ನೂ ಓದಿ : ಜನವರಿಯಲ್ಲಿಯೇ ಸರ್ಕಾರಿ ನೌಕರರ ಎಚ್ ಆರ್ ಎ ಪರಿಷ್ಕರಣೆ ! ನಿಗದಿಯಾಗಿದೆ ದಿನಾಂಕ ! ಹಾಗಿದ್ದರೆ ವೇತನದಲ್ಲಿನ ಹೆಚ್ಚಳ ಎಷ್ಟು ?


4. ಎಸ್‌ಎಂಎಸ್ : 
ಪಿಎಫ್ ಬ್ಯಾಲೆನ್ಸ್ ಅನ್ನು ಎಸ್‌ಎಂಎಸ್ ಮೂಲಕ ಪರಿಶೀಲಿಸಲು, ಇಪಿಎಫ್‌ಒದಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ 7738299899 ಗೆ ಎಸ್‌ಎಂಎಸ್ ಕಳುಹಿಸಬೇಕು. EPFO ​​UAN LAN ಎಂದು ಟೈಪ್ ಮಾಡಿ. ಇಲ್ಲಿ LAN ಎಂದರೆ ಭಾಷೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews