7th pay commission : ಕೇಂದ್ರ ಸರ್ಕಾರವು ಇತ್ತೀಚೆಗೆ 49 ಲಕ್ಷ ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಹೆಚ್ಚಿಸಿದ ನಂತರ, ಇದೀಗ ರಾಜಸ್ಥಾನ ಸರ್ಕಾರವು ಉದ್ಯೋಗಿಗಳಿಗೆ ಭರ್ಜರಿ ಸುದ್ದಿ ನೀಡಿದೆ. ರಾಜ್ಯದ ಅಶೋಕ್ ಗೆಹ್ಲೋಟ್ ಸರ್ಕಾರವು ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದೆ. ಇದಾದ ಬಳಿಕ ಈಗಿರುವ ಶೇ.42ರ ಡಿಎ ಶೇ.46ಕ್ಕೆ ಏರಿಕೆಯಾಗಿದೆ. ವಿಶೇಷವೆಂದರೆ ರಾಜಸ್ಥಾನದ ಸರ್ಕಾರಿ ನೌಕರರಿಗೆ ಸರ್ಕಾರ ಕಳುಹಿಸಿದ್ದ ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳದ ಪ್ರಸ್ತಾವನೆಗೂ ಚುನಾವಣಾ ಆಯೋಗ ಅನುಮೋದನೆ ನೀಡಿದೆ.
ನವೆಂಬರ್ 25 ರಂದು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ :
ಸರ್ಕಾರದ ನಿರ್ಧಾರದಿಂದ ರಾಜ್ಯದ 8 ಲಕ್ಷಕ್ಕೂ ಹೆಚ್ಚು ನೌಕರರು ಹಾಗೂ 4 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ನೌಕರನ ಮೂಲ ವೇತನ 10,000 ರೂಪಾಯಿ ಆಗಿದ್ದು, 4200 ರೂಪಾಯಿ ತುಟ್ಟಿಭತ್ಯೆ ಪಡೆಯುತ್ತಿದ್ದರೆ ಈಗ ಅದು 4600 ರೂಪಾಯಿಗೆ ಏರಿಕೆಯಾಗಲಿದೆ. ವಾಸ್ತವವಾಗಿ, ನವೆಂಬರ್ 25 ರಂದು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಚುನಾವಣಾ ಆಯೋಗದಿಂದ ಅನುಮೋದನೆ ಪಡೆಯದೇ ಡಿಎ ಘೋಷಿಸಿದ್ದರೆ ಅದು ನಿಯಮ ಉಲ್ಲಂಘನೆಯಾಗುತ್ತಿತ್ತು.
ಇದನ್ನೂ ಓದಿ : ಏರಿಕೆಯ ಬೆನ್ನಲ್ಲೇ ಮತ್ತೆ ಕುಸಿಯಿತು ಚಿನ್ನದ ಬೆಲೆ ! ಹಬ್ಬಕ್ಕೂ ಮುನ್ನ ಖರೀದಿಸಿಕೊಳ್ಳಿ ಬಂಗಾರ !
ರಾಜ್ಯ ಸರ್ಕಾರ ನೀಡಿರುವ ಮಾಹಿತಿಯಲ್ಲಿ ಜುಲೈ 1 ರಿಂದ ನೌಕರರಿಗೆ ಹೆಚ್ಚಿದ ಡಿಎ ಲಾಭವನ್ನು ನೀಡಲಾಗುವುದು ಎಂದು ಹೇಳಲಾಗಿದೆ. ಉದ್ಯೋಗಿಗಳು ತಮ್ಮ ಅಕ್ಟೋಬರ್ ತಿಂಗಳ ಸಂಬಳದಲ್ಲಿ ಹೆಚ್ಚಿದ ಡಿಎ ಲಾಭವನ್ನು ಪಡೆಯಬಹುದು. ಇದಲ್ಲದೇ ಇದರೊಂದಿಗೆ ಮೂರು ತಿಂಗಳ ಬಾಕಿಯನ್ನು ಕೂಡಾ ಸರ್ಕಾರ ಪಾವತಿಸುವ ನಿರೀಕ್ಷೆ ಇದೆ. ಇದಕ್ಕೂ ಮುನ್ನ ಕರ್ನಾಟಕ, ತಮಿಳುನಾಡು, ಉತ್ತರಪ್ರದೇಶ ಹೀಗೆ ಅನೇಕ ರಾಜ್ಯಗಳು ಡಿಎಯನ್ನು 42 ಪ್ರತಿಶತದಿಂದ 46 ಪ್ರತಿಶತಕ್ಕೆ ಹೆಚ್ಚಿಸಿದೆ.
ಇದನ್ನೂ ಓದಿ : ಜನವರಿಯಲ್ಲಿಯೇ ಸರ್ಕಾರಿ ನೌಕರರ ಎಚ್ ಆರ್ ಎ ಪರಿಷ್ಕರಣೆ ! ನಿಗದಿಯಾಗಿದೆ ದಿನಾಂಕ ! ಹಾಗಿದ್ದರೆ ವೇತನದಲ್ಲಿನ ಹೆಚ್ಚಳ ಎಷ್ಟು ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews