ಬೆಂಗಳೂರು : ಹಳೆಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ  ಹಲವು ರೀತಿಯ ಚರ್ಚೆಗಳು ನಡೆಯುತ್ತಲೇ ಇದೆ. ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಿ ನೌಕರರು ಹಾಗೂ ರಾಜ್ಯ ಸರ್ಕಾರಿ ನೌಕರರು  ಒತ್ತಾಯಿಸುತ್ತಿದ್ದಾರೆ. ಇದಕ್ಕಾಗಿ ಹಲವು ಪ್ರತಿಭಟನೆಗಳು ಕೂಡಾ ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿರುವ ಬಹುತೇಕ ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಲಾಗಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ನೌಕರರ ಹಳೆಯ ಪಿಂಚಣಿಯನ್ನು ಹೊಸ ಸೂತ್ರದೊಂದಿಗೆ ಜಾರಿಗೆ ತರುವುದಾಗಿ ಹೇಳಿತ್ತು.


COMMERCIAL BREAK
SCROLL TO CONTINUE READING

ಹಲವು ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರುವುದಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ಹೊಸ ಪಿಂಚಣಿ ಯೋಜನೆ (NPS) ಬಗ್ಗೆ ಅಸಮಾಧಾನ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಅಥವಾ ಎನ್ ಪಿಎಸ್ ಅನ್ನು ಇನ್ನಷ್ಟು ಆಕರ್ಷಕಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.


ಇದನ್ನೂ ಓದಿ :Pension Scheme: ಅರೇ...ವ್ಹಾ....! ಇನ್ಮುಂದೆ ಈ ರಾಜ್ಯದ ವೃದ್ಧರಿಗೆ 50ನೇ ಸಿಗಲಿದೆ ಪಿಂಚಣಿ ಲಾಭ!


ಹಣಕಾಸು ಕಾರ್ಯದರ್ಶಿ ನೇತೃತ್ವದ ಸಮಿತಿಯೊಂದನ್ನು ಸರ್ಕಾರ ರಚಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಎನ್‌ಪಿಎಸ್ ಅನ್ನು ಯಾವ  ರೀತಿಯಲ್ಲಿ  ಸುಧಾರಿಸಬಹುದು ಮತ್ತು ಸರ್ಕಾರಿ ನೌಕರರು ಅದರಿಂದ ಉತ್ತಮ ಆದಾಯವನ್ನು ಪಡೆಯುವಂತೆ ಯಾವ್ ಕ್ರಮ ಕೈಗೊಳ್ಳಬಹುದು ಎನ್ನುವುದರ ಬಗ್ಗೆ ಯೋಜನೆಗಳನ್ನು ರೂಪಿಸಲು ಸಮಿತಿಯನ್ನು ಕೋರಲಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್‌ಪಿಎಸ್) ನೇರ ಆರ್ಥಿಕ ನೆರವು ನೀಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಬಹುದು ಎಂದು ಮೂಲಗಳು ತಿಳಿಸಿವೆ.


ಆಂಧ್ರಪ್ರದೇಶದ ಮಾದರಿ ಉಪಯುಕ್ತ :
ಪಿಂಚಣಿಗಾಗಿ ಆಂಧ್ರಪ್ರದೇಶ ಸರ್ಕಾರ ಪರಿಚಯಿಸಿರುವ ಹೊಸ ಮಾದರಿಯು ತುಂಬಾ ಪರಿಣಾಮಕಾರಿಯಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲಿ, ರಾಜ್ಯ ಸರ್ಕಾರಿ ನೌಕರರಿಗೆ ಯಾವುದೇ ಕಡಿತವಿಲ್ಲದೆ ಅವರ ಕೊನೆಯ ಮೂಲ ವೇತನದ ಶೇಕಡಾ 33 ಕ್ಕೆ ಸಮಾನವಾದ ಖಾತರಿ ಪಿಂಚಣಿ ನೀಡುವ ಬಗ್ಗೆ  ಪ್ರಸ್ತಾಪಿಸಲಾಗಿದೆ.ಇದನ್ನು ಮೊದಲು ಏಪ್ರಿಲ್ 2022 ರಲ್ಲಿ ಪರಿಚಯಿಸಲಾಯಿತು.


ಇದನ್ನೂ ಓದಿ : Ram Mandir: ಅಂಬಾನಿಯಿಂದ ಹಿಡಿದು ಅಡಾಣಿವರೆಗೆ ರಾಮ ಮಂದಿರಕ್ಕೆ ಯಾರು ಎಷ್ಟು ದೇಣಿಗೆ ನೀಡಿದ್ದಾರೆ?


ಖಾತರಿಯ ಕನಿಷ್ಠ ಆದಾಯವನ್ನು ಒದಗಿಸುವ ಚಿಂತನೆ :
ಎನ್‌ಪಿಎಸ್‌ನ ಚಂದಾದಾರರಿಗೆ ಈ ಯೋಜನೆಯನ್ನು ಹೆಚ್ಚು ಆಕರ್ಷಕವಾಗಿಸುವುದು ಸರ್ಕಾರದ ಉದ್ದೇಶವಾಗಿದೆ. ಈ  ಬಗ್ಗೆ ಯೋಜನೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೂಡಿಕೆದಾರರಿಗೆ ಕನಿಷ್ಠ ಲಾಭವನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ. ಮತ್ತೊಂದೆಡೆ, ಈ ಕನಿಷ್ಠ ಆದಾಯದಲ್ಲಿ ಏನಾದರೂ ಕೊರತೆಯಾದರೆ, ಅದನ್ನು ಸರ್ಕಾರವವೇ ನಿಭಾಯಿಸಬೇಕಾಗುತ್ತದೆ.


NPS ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
ಹಣಕಾಸು ಕಾರ್ಯದರ್ಶಿ ನೇತೃತ್ವದ ಸಮಿತಿಯು ಹೊಸ ಪಿಂಚಣಿ ವ್ಯವಸ್ಥೆಯ ಅಭಿವೃದ್ಧಿಗೆ ಒತ್ತು ನೀಡಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ . ಆರ್ಥಿಕ ನಿರ್ಬಂಧಗಳಿಗೆ ಬದ್ಧವಾಗಿರುವಾಗ ನೌಕರರ ಕಳವಳಗಳನ್ನು ಪರಿಹರಿಸಲು ಸಮಿತಿಯು ಗಮನಹರಿಸುತ್ತದೆ ಎಂದು ಅವರು ಹೇಳಿದ್ದಾರೆ. ಸಂಸತ್ತಿನಲ್ಲಿ ಹಣಕಾಸು ಮಸೂದೆ 2023 ಅನ್ನು ಮಂಡಿಸುವಾಗ, ಹೊಸ ಪಿಂಚಣಿ ಯೋಜನೆಯಲ್ಲಿ ಬದಲಾವಣೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತವೆ ಎಂದು ಹೇಳಿದರು.


ಇದನ್ನೂ ಓದಿ : ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕ ಏರಿಕೆ:ಬಂಗಾರದ ಬೆಲೆಯ ಮೇಲೆ ಆಗುವುದೇ ಪರಿಣಾಮ?


ರಾಷ್ಟ್ರೀಯ ಪಿಂಚಣಿ ಯೋಜನೆ ವಿರುದ್ಧ ಹೊಸ ಪಿಂಚಣಿ ಯೋಜನೆ :
ರಾಷ್ಟ್ರೀಯ ಪಿಂಚಣಿ ಯೋಜನೆ (NPS)


1. NPS ನಲ್ಲಿ, ಉದ್ಯೋಗಿಯ ಮೂಲ ವೇತನ ಮತ್ತು ಭತ್ಯೆಗಳಿಂದ 10 ಪ್ರತಿಶತವನ್ನು ಕಡಿತಗೊಳಿಸಲಾಗುತ್ತದೆ.
2. ರಾಷ್ಟ್ರೀಯ ಪಿಂಚಣಿ ಯೋಜನೆಯು ಷೇರು ಮಾರುಕಟ್ಟೆ ಆಧಾರಿತವಾಗಿದೆ. ಆದ್ದರಿಂದ ಇದು ತುಲನಾತ್ಮಕವಾಗಿ ಕಡಿಮೆ ಸುರಕ್ಷಿತವೆಂದು ಪರಿಗಣಿಸಲಾಗಿದೆ.
3. ಇದರ ಅಡಿಯಲ್ಲಿ, ನಿವೃತ್ತಿಯ ನಂತರ ಪಿಂಚಣಿ ಪಡೆಯಲು 40% NPS ನಿಧಿಯಲ್ಲಿ ಹೂಡಿಕೆ ಮಾಡಬೇಕು.
4. ಈ ಯೋಜನೆಯು ನಿವೃತ್ತಿಯ ನಂತರ ಸ್ಥಿರ ಪಿಂಚಣಿಯನ್ನು ಖಾತರಿಪಡಿಸುವುದಿಲ್ಲ.
5. ಹೊಸ ಪಿಂಚಣಿ ಯೋಜನೆಯಲ್ಲಿ, ಆರು ತಿಂಗಳಿಗೊಮ್ಮೆ  ಡಿಎ ಪಾವತಿಸುವುದಿಲ್ಲ.


ಹಳೆಯ ಪಿಂಚಣಿ ಯೋಜನೆ (OPS):
1. ಇದರ ಅಡಿಯಲ್ಲಿ, ಕೊನೆಯದಾಗಿ ಪಡೆದ ಸಂಬಳದ 50 ಪ್ರತಿಶತವನ್ನು ನಿವೃತ್ತಿಯ ನಂತರ ಒಟ್ಟು ಮೊತ್ತದೊಂದಿಗೆ ಮಾಸಿಕ ಪಿಂಚಣಿಯಾಗಿ ಪಾವತಿಸಲಾಗುತ್ತದೆ.
2. 80 ವರ್ಷಗಳ ನಂತರ ಪಿಂಚಣಿ ಹೆಚ್ಚಿಸುವ ನಿಬಂಧನೆಯೂ ಇದೆ. ಜಿಪಿಎಫ್‌ಗೂ ಅವಕಾಶವಿದೆ.
3. ಇದರ ಅಡಿಯಲ್ಲಿ, 20 ಲಕ್ಷ ರೂಪಾಯಿಗಳವರೆಗೆ ಗ್ರಾಚ್ಯುಟಿ ನೀಡಲಾಗುತ್ತದೆ.
4. ಇದನ್ನು ರಾಜ್ಯದ ಖಜಾನೆಯಿಂದ ಪಾವತಿಸಲಾಗುತ್ತದೆ. ಉದ್ಯೋಗಿಯ ಸಂಬಳದಿಂದ ಹಣವನ್ನು ಕಡಿತಗೊಳಿಸುವುದಿಲ್ಲ.
5. ನಿವೃತ್ತ ನೌಕರನ ಹೆಂಡತಿಗೆ ಅವನ ಮರಣದ ನಂತರ ಪಿಂಚಣಿ ಸಿಗುತ್ತದೆ.  ಇದರ ಅಡಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಡಿಎ ಕೂಡ ನೀಡಲಾಗುತ್ತದೆ. ಹೀಗಾಗಿ ಪಿಂಚಣಿ ಮೊತ್ತ ಹೆಚ್ಚಾಗುತ್ತಲೇ  ಹೋಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ