UPI Credit Line: ನೀವು ಕೂಡಾ UPI ಬಳಸುತ್ತಿದ್ದರೆ,ಈ ಸುದ್ದಿ ನಿಮಗೆ ಉಪಯುಕ್ತವಾಗಿರಲಿದೆ. UPI ಬಳಕೆದಾರರು ಮೊದಲ ಬಾರಿಗೆ ವಿಶೇಷ  ಸೌಲಭ್ಯ ಪಡೆಯಲಿದ್ದಾರೆ. ಈ ಸೌಲಭ್ಯದ ಅಡಿಯಲ್ಲಿ ನಿಮ್ಮ ಬಳಿ ಹಣವಿದ್ದರೂ ಇಲ್ಲದಿದ್ದರೂ ಯುಪಿಐ ಮೂಲಕ ಮುಕ್ತವಾಗಿ ಖರ್ಚು ಮಾಡಲು ಸಾಧ್ಯವಾಗುತ್ತದೆ.ಹೌದು,ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುಪಿಐ ಮೂಲಕ ದೇಶದಲ್ಲಿ ಹೊಸ ವ್ಯವಸ್ಥೆಯನ್ನು ತರುತ್ತಿದೆ. ಈ ವಿಧಾನವು ಕ್ರೆಡಿಟ್ ಕಾರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆ. ಸಂಪೂರ್ಣ ಸಿಸ್ಟಮ್ ಬೈ ನೌ, ಪೇ ಲೇಟರ್ ಅನ್ನು ಆಧರಿಸಿರುತ್ತದೆ.


COMMERCIAL BREAK
SCROLL TO CONTINUE READING

ಆರ್‌ಬಿಐ ಅನುಮತಿಯೊಂದಿಗೆ  ಸೌಲಭ್ಯ ಆರಂಭಿಸಿದ ಈ ಬ್ಯಾಂಕ್‌ಗಳು : 
ಮೂಲಗಳ ಪ್ರಕಾರ, UPI ಮೂಲಕ ಗ್ರಾಹಕರಿಗೆ ಕ್ರೆಡಿಟ್ ಲೈನ್‌ಗಳನ್ನು ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ.ಆಕ್ಸಿಸ್ ಬ್ಯಾಂಕ್,ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಪಿಎನ್‌ಬಿ ಸೇರಿದಂತೆ ಹಲವು ಬ್ಯಾಂಕ್‌ಗಳು ಈ ಹೊಸ ಸೌಲಭ್ಯವನ್ನು ಒದಗಿಸುತ್ತಿವೆ.ಕ್ರೆಡಿಟ್ ಲೈನ್‌ನಲ್ಲಿ, ಗ್ರಾಹಕರು ನಿಗದಿತ ಮಿತಿಯವರೆಗೆ ಸಾಲವನ್ನು ಪಡೆಯುವುದು ಸಾಧ್ಯವಾಗುತ್ತದೆ. ಇಲ್ಲಿ ಗ್ರಾಹಕರು ಖರ್ಚು ಮಾಡಿದ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. UPI ಯ ಈ ಹೊಸ ಸೌಲಭ್ಯದಲ್ಲಿ,ಬ್ಯಾಂಕ್ ಖಾತೆಯಿಂದ ನೇರವಾಗಿ ಹಣವನ್ನು ಕಡಿತಗೊಳಿಸದೆಯೇ ಶಾಪಿಂಗ್ ಮಾಡಬಹುದು.


ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಜಾಕ್ ಪಾಟ್! ಜಾರಿಯಾಗುವುದು 8ನೇ ವೇತನ ಆಯೋಗ! ಬಜೆಟ್ ನಲ್ಲಿ ಆಗಲಿದೆ ಘೋಷಣೆ


ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ :
ಈ ಸೌಲಭ್ಯವು ಕ್ರೆಡಿಟ್ ಕಾರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದನ್ನು ನಿಗದಿತ ಸಮಯದಲ್ಲಿ ಪಾವತಿಸಬೇಕು.ಪ್ರಸ್ತುತ ಈ ಕ್ರೆಡಿಟ್ ಅನ್ನು ಅಂಗಡಿಗಳಲ್ಲಿ ಶಾಪಿಂಗ್ ಮಾಡಲು ಮಾತ್ರ ಬಳಸಬಹುದು.ಗ್ರಾಹಕರು ಈ ಸೌಲಭ್ಯವನ್ನು ಬಳಸಿದಾಗ,ಅಂಗಡಿ ಮಾಲೀಕರು ಈ ಸೇವೆಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.ಹೊಸ ಸೌಲಭ್ಯಕ್ಕಾಗಿ ನೀವು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.ಇದು UPI ಯ ಹೊಸ ವೈಶಿಷ್ಟ್ಯವಾಗಿದೆ.  ಇದನ್ನು ಬಳಸಲು ಯಾವುದೇ ಹೊಸ ಸಿಸ್ಟಮ್ ಅಥವಾ ಹೊಸ ಪ್ರಕ್ರಿಯೆಯ ಅಗತ್ಯವೂ ಇಲ್ಲ. 


ಶಾಪಿಂಗ್‌ಗಾಗಿ ಬಹಳಷ್ಟು ಹಣ ಖರ್ಚು ಮಾಡುವವರು ಇದ್ದಾರೆ : 
ಸುಮಾರು 53% ಜನರು ಆನ್‌ಲೈನ್ ಶಾಪಿಂಗ್‌ಗಾಗಿ UPI ಅನ್ನು ಬಳಸುತ್ತಾರೆ.  ಇದಲ್ಲದೆ, 30% ಜನರು ಆನ್‌ಲೈನ್ ಪಾವತಿಗಾಗಿ ಡಿಜಿಟಲ್ ವ್ಯಾಲೆಟ್ ಅಥವಾ ಕಾರ್ಡ್ (ಕ್ರೆಡಿಟ್ ಅಥವಾ ಡೆಬಿಟ್) ಬಳಸುತ್ತಾರೆ.ಮತ್ತೊಂದೆಡೆ, ಸುಮಾರು 75% ಜನರು ಇನ್ನೂ ಅಂಗಡಿಗೆ ಹೋಗುವಾಗ ಮತ್ತು ಸರಕುಗಳನ್ನು ಖರೀದಿಸುವಾಗ ಹಣವನ್ನು ಬಳಸುತ್ತಾರೆ.ಆದರೆ 25% ಜನರು ಅಂಗಡಿಯಲ್ಲಿ UPI ಮೂಲಕ ಪಾವತಿಸುತ್ತಾರೆ. 20% ಜನರು ಡಿಜಿಟಲ್ ವ್ಯಾಲೆಟ್ ಅಥವಾ ಕಾರ್ಡ್ ಅನ್ನು ಬಳಸುತ್ತಾರೆ.


ಇದನ್ನೂ ಓದಿ : ಅತ್ಯಂತ ಸರಳವಾಗಿತ್ತು 2022ರಲ್ಲಿ ನಡೆದ ಅಂಬಾನಿ ಕುಡಿಯ ವಿವಾಹ : ಪ್ರಚಾರ, ಆಡಂಬರ ಇರಲೇ ಇಲ್ಲ !ಫೋಟೋ ಇಲ್ಲಿವೆ


ಕಳೆದ ಕೆಲವು ವರ್ಷಗಳಲ್ಲಿ, UPI ಅನ್ನು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡಲು NPCI ನಿಂದ ಅನೇಕ ಸೌಲಭ್ಯಗಳನ್ನು ಪ್ರಾರಂಭಿಸಲಾಗಿದೆ. ಮೊದಲಿಗೆ, UPI ಲೈಟ್ ಅನ್ನು ಪ್ರಾರಂಭಿಸಲಾಯಿತು. ಇದರಲ್ಲಿ, ನಿಮ್ಮ ಬ್ಯಾಂಕ್ ಖಾತೆಯಿಂದ ಒಂದು ನಿರ್ದಿಷ್ಟ ಮೊತ್ತವನ್ನು ವರ್ಚುವಲ್ ವ್ಯಾಲೆಟ್‌ಗೆ ವರ್ಗಾಯಿಸಲಾಗುತ್ತದೆ. ಆ ಹಣವನ್ನು ಸಣ್ಣ ಪಾವತಿಗಳನ್ನು ಮಾಡಲು ಬಳಸಬಹುದು.


ಇದರ ನಂತರ, NPCI ರುಪೇ ಕಾರ್ಡ್ ಹೊಂದಿರುವವರಿಗೆ ತಮ್ಮ ಕಾರ್ಡ್ ಅನ್ನು UPI ಅಪ್ಲಿಕೇಶನ್‌ಗೆ ಸೇರಿಸಲು ಮತ್ತು UPI QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಕ್ರೆಡಿಟ್ ಕಾರ್ಡ್‌ನಂತೆ ಪಾವತಿ ಮಾಡುವ ಸೌಲಭ್ಯವನ್ನು ಒದಗಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇತ್ತೀಚೆಗೆ ಬಿಡುಗಡೆ ಮಾಡಿದ ಡಿಜಿಟಲ್ ರೂಪಾಯಿಯನ್ನು UPI ಯೊಂದಿಗೆ ಸಹ ಬಳಸಬಹುದು. ಈಗ ನೀವು ನಿಮ್ಮ ಇ-ರೂಪಾಯಿ ವ್ಯಾಲೆಟ್‌ನಿಂದ UPI QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪೇಮೆಂಟ್ ಮಾಡಬಹುದು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ