ಅತ್ಯಂತ ಸರಳವಾಗಿತ್ತು 2022ರಲ್ಲಿ ನಡೆದ ಅಂಬಾನಿ ಕುಡಿಯ ವಿವಾಹ : ಪ್ರಚಾರ, ಆಡಂಬರ ಇರಲೇ ಇಲ್ಲ !ಫೋಟೋ ಇಲ್ಲಿವೆ

ಅಂಬಾನಿ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿವೆ.ಆಂಟಿಲಿಯಾದಲ್ಲಿ ವಿವಿಧ ಕಾರ್ಯಕ್ರಮಗಳಿಗಾಗಿ ಅತಿಥಿಗಳ ಆಗಮನ ಭರದಿಂದ ಸಾಗುತ್ತಿದೆ. ಬಾಲಿವುಡ್ ತಾರೆಯರಿಂದ ಹಿಡಿದು ಉದ್ಯಮ ಮತ್ತು ರಾಜಕೀಯದ ದೊಡ್ಡ ದೊಡ್ಡ ವ್ಯಕ್ತಿಗಳು ಕೂಡಾ ಈ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗುತ್ತಿದ್ದಾರೆ.ಜುಲೈ 12 ರಂದು ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅದ್ಧೂರಿ ವಿವಾಹ ನಡೆಯಲಿದೆ. ಈ ವಿವಾಹಕ್ಕೆ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತಿದೆ. ಆದರೆ ಅಂಬಾನಿ ಕುಟುಂಬದ ಈ ವಿವಾಹ ಅತ್ಯಂತ ಸರಳವಾಗಿ ನಡೆದಿತ್ತು. 

mbani Wedding : ಅಂಬಾನಿ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿವೆ.ಆಂಟಿಲಿಯಾದಲ್ಲಿ ವಿವಿಧ ಕಾರ್ಯಕ್ರಮಗಳಿಗಾಗಿ ಅತಿಥಿಗಳ ಆಗಮನ ಭರದಿಂದ ಸಾಗುತ್ತಿದೆ. ಬಾಲಿವುಡ್ ತಾರೆಯರಿಂದ ಹಿಡಿದು ಉದ್ಯಮ ಮತ್ತು ರಾಜಕೀಯದ ದೊಡ್ಡ ದೊಡ್ಡ ವ್ಯಕ್ತಿಗಳು ಕೂಡಾ ಈ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗುತ್ತಿದ್ದಾರೆ.ಜುಲೈ 12 ರಂದು ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅದ್ಧೂರಿ ವಿವಾಹ ನಡೆಯಲಿದೆ. ಈ ವಿವಾಹಕ್ಕೆ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತಿದೆ. ಆದರೆ ಅಂಬಾನಿ ಕುಟುಂಬದ ಈ ವಿವಾಹ ಅತ್ಯಂತ ಸರಳವಾಗಿ ನಡೆದಿತ್ತು. 

ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

1 /10

ಅಂಬಾನಿ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿವೆ. ಆಂಟಿಲಿಯಾದಲ್ಲಿ ವಿವಾಹ ಪೂರ್ವ ಕಾರ್ಯಗಳು ನಡೆಯುತ್ತಿವೆ.ಈ ಮದುವೆಗೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದೆ. 

2 /10

ಜಾಮ್‌ನಗರ ಮತ್ತು ಇಟಲಿಯಲ್ಲಿ ವಿವಾಹಪೂರ್ವ ಕಾರ್ಯಕ್ರಮಗಳ ಜೊತೆಗೆ ಮುಂಬೈನಲ್ಲಿ ಅದ್ಧೂರಿ ಮದುವೆಗೆ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ.ಪ್ರಪಂಚದಾದ್ಯಂತದ ಪ್ರಸಿದ್ಧ ವ್ಯಕ್ತಿಗಳು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ. 

3 /10

ಮುಖೇಶ್ ಅಂಬಾನಿ ಪುತ್ರನ ಮದುವೆ ಇಷ್ಟು ಅದ್ದೂರಿಯಾಗಿ ನಡೆದು ವಿಶ್ವ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆದರೆ ಅಂಬಾನಿ ಕುಟುಂಬದ ಪುತ್ರ ಜೈ ಅನ್ಮೋಲ್ ಅಂಬಾನಿ ಮದುವೆ ಅತ್ಯಂತ ಸರಳವಾಗಿ ನೆರವೇರಿತು.   

4 /10

 ಹಲವು ವರ್ಷಗಳ ಡೇಟಿಂಗ್ ನಂತರ, ಅನ್ಮೋಲ್ ಮತ್ತು ಕ್ರಿಶಾ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಕ್ರಿಶಾ ಷಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು,ತಮ್ಮ ಕುಟುಂಬದ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.    

5 /10

ಜೈ ಅನ್ಮೋಲ್  ರಿಲಯನ್ಸ್ ಮ್ಯೂಚುವಲ್ ಫಂಡ್‌ನ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ಸಾಲದ ಸುಳಿಯಲ್ಲಿರುವ ಅನಿಲ್ ಅಂಬಾನಿ ಕಂಪನಿಯನ್ನು  ಮೇಲಕ್ಕೆತ್ತಲು  ಹಗಲಿರುಳು ಶ್ರಮಿಸುತ್ತಿದ್ದಾರೆ.   

6 /10

ಕ್ರಿಶಾ ಷಾ ನೀಲಂ ಮತ್ತು ನಿಕುಂಜ್ ಶಾ ಅವರ ಕಿರಿಯ ಮಗಳು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ರಾಜಕೀಯ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಗಳಿಸಿದ ನಂತರ, ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಸಾಮಾಜಿಕ ನೀತಿ ಮತ್ತು ಅಭಿವೃದ್ಧಿಯಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. ಕೆಲವು ವರ್ಷಗಳ ಕಾಲ ಬ್ರಿಟನ್‌ನಲ್ಲಿ ಆಕ್ಸೆಂಚರ್‌ನಲ್ಲಿ ಕೆಲಸ ಮಾಡಿದ ನಂತರ, ಅವರು ಭಾರತಕ್ಕೆ ಮರಳಿದರು. 

7 /10

ಅನ್ಮೋಲ್ ಅಂಬಾನಿ ಪತ್ನಿ ಕ್ರಿಶಾ ಶಾ ಸೌಂದರ್ಯದಲ್ಲಿ ಬಾಲಿವುಡ್ ನಟಿಯರನ್ನು ಮೀರಿಸುತ್ತಾರೆ.ಕ್ರಿಶಾ ಫ್ಯಾಶನ್ ಮತ್ತು ಸ್ಟೈಲಿಂಗ್ ನಲ್ಲಿ ಎಲ್ಲರನ್ನೂ ಹಿಂದೆ ಸರಿಸುತ್ತಾರೆ.  ತನ್ನದೇ ಆದ ಡಿಸ್ಕೋ ಕಂಪನಿಯನ್ನು ನಡೆಸುತ್ತಾಳೆ. ಅದು ಸಾಮಾಜಿಕ ನೆಟ್‌ವರ್ಕಿಂಗ್ ವೇದಿಕೆಯಾಗಿದೆ.    

8 /10

ಅನ್ಮೋಲ್ ಮತ್ತು ಕ್ರಿಶಾ ಅವರ ವಿವಾಹವು ಅವರ ಆಪ್ತರು, ಸಂಬಂಧಿಕರು ಮತ್ತು ಸ್ನೇಹಿತರ ನಡುವೆ ನಡೆದಿತ್ತು. ಅಲ್ಲಿ ಯಾವುದೇ ರೀತಿಯ ಆಡಂಬರವಿರಲಿಲ್ಲ. ಅಂಬಾನಿ ಕುಟುಂಬದ ವಿಶೇಷ ಸ್ನೇಹಿತರು ಮತ್ತು ಸಂಬಂಧಿಕರು ಭಾಗವಹಿಸಿದ್ದರು.    

9 /10

ಕ್ರಿಶಾ ಅವರ ತಂದೆ ನಿಕುಂಜ್ ಷಾ ಮುಂಬೈನಲ್ಲಿ ಯಶಸ್ವಿ ಉದ್ಯಮವಾಗಿರುವ ನಿಕುಂಜ್ ಎಂಟರ್‌ಪ್ರೈಸಸ್‌ನ ಸಿಎಂಡಿ ಆಗಿದ್ದರು.ತಾಯಿ ನೀಲಂ ಶಾ ಫ್ಯಾಶನ್ ಡಿಸೈನರ್.ಕ್ರಿಶಾ ತನ್ನ ಸಹೋದರನೊಂದಿಗೆ ಕಂಪನಿಯನ್ನು ನೋಡಿಕೊಳ್ಳುತ್ತಾರೆ. ಸಹೋದರಿ ನೃತಿ ಶಾ ಬ್ಯೂಟಿ ಮತ್ತು ಫುಡ್ ಬ್ಲಾಗರ್.

10 /10

ಅನಿಲ್ ಅಂಬಾನಿ ಅವರ ಮಗ ಮತ್ತು ಸೊಸೆ ಲೈಮ್ ಲೈಟ್ ನಿಂದ ದೂರ ಇರಲು ಇಷ್ಟಪಡುತ್ತಾರೆ.ಅವರು ಕುಟುಂಬದೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ.