Second Hand Cars: ಅಗ್ಗದ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೂ ಕೂಡ ಬೈಕ್‌ಗಿಂತ ಕಾರಿನಲ್ಲಿ ಪ್ರಯಾಣಿಸುವುದು ಯಾವಾಗಲೂ ನಿಮಗೆ ಹೆಚ್ಚು ಆರಾಮದಾಯಕವಾಗಿರುತ್ತದೆ. ಅಗ್ಗದ ದರದ ಕಾರೆ ಆಗಲಿ ಅಥವಾ ದುಬಾರಿ ಬೆಲೆಯ ಐಷಾರಾಮಿ ಕಾರೆ ಇರಲಿ, ಬೇಸಿಗೆಯಲ್ಲಿ ಬಿಸಿಲಿನಿಂದ, ಮಳೆಗಾಲದಲ್ಲಿ ಮಳೆಯಿಂದ ಮತ್ತು ಚಳಿಗಾಲದಲ್ಲಿ ಚಳಿಯಿಂದ ಅದು ನಿಮ್ಮನ್ನು ರಕ್ಷಿಸುತ್ತದೆ. ನೀವು ಬೈಕು ಅಥವಾ ಸ್ಕೂಟರ್ ಖರೀದಿಸಲು ಹೊರಟಿದ್ದೀರಿ ಎಂದು ಊಹಿಸಿ ಮತ್ತು ಯಾರಾದರೂ ನಿಮಗೆ ಬೈಕು ಅಥವಾ ಸ್ಕೂಟರ್ ಖರೀದಿಸುವ ಮೊತ್ತದಲ್ಲಿ ನೀವು ಕಾರನ್ನು ಖರೀದಿಸಬಹುದು ಎಂದು ಹೇಳಿದರೆ ನೀವು ನಂಬುವಿರಾ? ನಂಬಲು ಕಷ್ಟವಾದರೂ ಕೂಡ  ಇದು ನಿಜ ಮತ್ತು ಅದು ಸಂಭವಿಸುವ ಸಾಧ್ಯತೆ ಇದೆ. ಇಂದು ನಾವು ನಿಮಗೆ ಹೋಂಡಾ ಆಕ್ಟಿವಾ ಸ್ಕೂಟರ್ (ಸುಮಾರು 60 ಸಾವಿರ) ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿರುವ ಕೆಲವು ಉಪಯೋಗಿಸಿದ ಕಾರುಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್‌ನಲ್ಲಿ ನಾವು ಈ ಕಾರುಗಳನ್ನು ಗಮನಿಸಿದ್ದೇವೆ.


COMMERCIAL BREAK
SCROLL TO CONTINUE READING

ಮಾರುತಿ ಆಲ್ಟೊ ಎಲ್ ಎಕ್ಸ್ ಐಗೆ 65 ಸಾವಿರ ರೂಪಾಯಿ ಬೇಡಿಕೆ ಇಡಲಾಗಿದೆ. ಈ ಕಾರು 192302 ಕಿಮೀ ಓಡಿದೆ. ಇದು ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಫರಿದಾಬಾದ್‌ನಲ್ಲಿ ಮಾರಾಟಕ್ಕೆ ಲಭ್ಯವಿರುವ ಇದು ಸಿಂಗಲ್ ಓನರ್ ಕಾರ್ ಆಗಿದೆ. ಕಾರಿನ ಸಂಖ್ಯೆಯೂ ಕೂಡ ಫರಿದಾಬಾದ್ ಸಂಖ್ಯೆಯಾಗಿದ್ದು, ಇದು 2009 ಮಾಡೆಲ್ ಕಾರಾಗಿದೆ.


ಮಾರುತಿ ಆಲ್ಟೊ ಎಲ್ ಎಕ್ಸ್ ಐ ಅನ್ನು ಕೂಡ ಕೇವಲ ರೂ.65 ಸಾವಿರಕ್ಕೆ ಬೇಡಿಕೆ ಇಡಲಾಗಿದೆ. ಇದು ಮಲ್ಲಾಪುರದಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದರ ಸಂಖ್ಯೆಯೂ ಕೂಡ ಮಲ್ಲಾಪುರದ ಕಾರಾಗಿದೆ. ಕಾರು 100146 ಕಿಮೀ ಚಲಿಸಿದೆ. ಇದು ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಆದರೆ ಇದು ಥರ್ಡ್ ಓನರ್ ಕಾರಾಗಿದ್ದು. ಇದು 2008ರ ಮಾಡೆಲ್ ಕಾರು.


ಮಾರುತಿ ಜೆನ್ ಎಸ್ಟಿಲೊ ಎಲ್ ಎಕ್ಸ್ ಐಗೆ 65 ಸಾವಿರ ರೂಪಾಯಿ ಬೇಡಿಕೆಯೂ ಇದೆ. ಕಾರು 95283 ಕಿಮೀ ಚಲಿಸಿದೆ. ಇದು ಪೆಟ್ರೋಲ್ ಎಂಜಿನ್ ಮತ್ತು ಮ್ಯಾನುವಲ್ ಟ್ರಾನ್ಸ್ಮಿಷನ್ ಅನ್ನು ಸಹ ಹೊಂದಿದೆ. ಆದರೆ, ಇದು ಐದನೇ ಓನರ್ ಕಾರ ಆಗಿದೆ ಮತ್ತು ಆಗ್ರಾದಲ್ಲಿ ಆಗ್ರಾ ನಂಬರ್ ಪ್ಲೇಟ್ ನೊಂದಿಗೆ ಮಾರಾಟಕ್ಕೆ ಲಭ್ಯವಿದೆ. ಇದು 2008ರ ಮಾಡೆಲ್ ಕಾರಾಗಿದೆ.


ಇದನ್ನೂ ಓದಿ-EPFO Alert: ಪಿಎಫ್ ಖಾತೆ ಹೊಂದಿದವರು ಈ ಸುದ್ದಿಯನ್ನು ತಪ್ಪದೆ ಓದಿ


ಆಗ್ರಾದಲ್ಲಿ ಮತ್ತೊಂದು Zen Estilo LXI ಕೂಡ ಮಾರಾಟಕ್ಕೆ ಇಡಲಾಗಿದೆ, ಇದಕ್ಕೆ ಕೇವಲ 65 ಸಾವಿರ ರೂಪಾಯಿಗಳ ಬೇಡಿಕೆ ಸಲ್ಲಿಸಲಾಗಿದೆ ಆದರೆ ಇದು ಐದನೆ ಓನರ್ ಅಲ್ಲ  ಎರಡನೇ ಓನರ್ ಕಾರಾಗಿದೆ. ಈ ಕಾರು 106644 ಕಿಮೀ ಚಲಿಸಿದೆ. ಇದು ಪೆಟ್ರೋಲ್ ಎಂಜಿನ್ ಮತ್ತು ಮ್ಯಾನುವಲ್ ಟ್ರಾನ್ಸ್ಮಿಷನ್ ಅನ್ನು ಒಳಗೊಂಡಿದೆ. ಇದು ಕೂಡ 2008ರ ಮಾಡೆಲ್ ಕಾರಾಗಿದೆ.


ಇದನ್ನೂ ಓದಿ-Arecanut today price: ಕರ್ನಾಟಕದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೀಗಿದೆ ನೋಡಿ

(ಹಕ್ಕುತ್ಯಾಗ- ನಾವು ಯಾರಿಗೂ ಕೂಡ ಹಳೆ ಕಾರನ್ನು ಖರೀದಿಸಲು ಸಲಹೆಯನ್ನು ನೀಡುತ್ತಿಲ್ಲ. ಈ ಸುದ್ದಿಯನ್ನು ಕೇವಲ ನಿಮಗೆ ಮಾಹಿತಿಯನ್ನು ತಲುಪಿಸುವ ಉದ್ದೇಶದಿಂದ ಬರೆಯಲಾಗಿದೆ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.