Todays Vegetables Price: ರಾಜ್ಯದಲ್ಲಿ ಮಳೆ ಹಿನ್ನಲೆಯಲ್ಲಿ ತರಕಾರಿ ಬೆಲೆಯೂ ಗಗನಮುಖಿ ಆಗಿದ್ದು, ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ಜನರ ಬೇಬಿಗೆ ಕತ್ತರಿ ಬೀಳುತ್ತಿದೆ. 


COMMERCIAL BREAK
SCROLL TO CONTINUE READING

ಮುಂಗಾರು ಆರಂಭಕ್ಕೂ ಮೊದಲೇ  ನಗರದ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಏರಿಕೆ ಆಗಿದ್ದು, ಬೀನ್ಸ್ ಬೆಲೆ ಒಂದೂವರೆ ಶತಕ ಮುಟ್ಟಿದರೆ,  ನುಗ್ಗೆಕಾಯಿ ಪೆಟ್ರೋಲ್‌ ರೇಟ್‌ ತಲುಪಿದೆ. ಇದೇ ವೇಳೆ ಬದನೆಕಾಯಿ ಬೆಲೆ ಶತಕದತ್ತ ಬಂದು ನಿಂತಿದೆ.  


ಇದನ್ನೂ ಓದಿ- ಸತತ ಒಂದು ತಿಂಗಳವರೆಗೆ ನಿತ್ಯ 8 ಗಂಟೆಗಳಕಾಲ AC ಚಲಾಯಿಸಿದರೆ ಕರೆಂಟ್ ಬಿಲ್ ಎಷ್ಟು ಬರುತ್ತೆ, ಗೊತ್ತಾ!


ವಾಸ್ತವವಾಗಿ, ಕಳೆದ ಕೆಲ ದಿನಗಳ ಹಿಂದೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ಬೆಂಗಳೂರಿನ ಸುತ್ತಮುತ್ತ ಸುರಿದ ಮಳೆಯಿಂದ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ಹೀಗಾಗಿ ಇಳುವರಿ ಕಡಿಮೆಯಾಗಿದ್ದು ರಾಜಧಾನಿಗೆ ಪೂರೈಕೆಯಾಗುವ ತರಕಾರಿಗಳ ಬೆಲೆ ಹೆಚ್ಚಳವಾಗಿದೆ. 


ನಗರದ ಕಲಾಸಿಪಾಳ್ಯ, ಕೆ.ಆರ್‌.ಮಾರುಕಟ್ಟೆ ಅಷ್ಟೇ ಅಲ್ಲ, ಹಾಪ್‌ ಕಾಮ್ಸ್‌ನಲ್ಲೂ ಕೆಲ ತರಕಾರಿಗಳ ಬೆಲೆ ನೂರರ ಗಡಿ ದಾಟಿದ್ದು, ತರಕಾರಿ ಖರೀದಿಗೆಂದು ಮಾರುಕಟ್ಟೆ ಬಂದ ಜನ ಶಾಕ್ ಆಗಿದ್ದಾರೆ. 


ಇದನ್ನೂ ಓದಿ- ರಾಜ್ಯದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ ಹವಾ! ಇನ್ಮುಂದೆ ಇಲ್ಲಿ ನಾನ್‌ವೆಜ್‌ ಕೂಡಾ ಸಿಗುತ್ತಾ?


ಸದ್ಯ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಎಷ್ಟಿದೆ ಅನ್ನೋದನ್ನ ನೋಡೋದಾದ್ರೆ,,,
- ಬೀನ್ಸ್ (ಕೆಜಿಗೆ 145 ರೂಪಾಯಿ)
- ಮೂಲಂಗಿ (ಕೆಜಿಗೆ 46 ರೂಪಾಯಿ)
- ಗುಂಡುಬದನೆ (ಕೆಜಿಗೆ 78ರೂಪಾಯಿ)
- ಟೊಮೊಟೋ (ಕೆಜಿಗೆ 46 ರೂಪಾಯಿ)
- ಬಟಾಣಿಗಳು (ಕೆಜಿಗೆ 148 ರೂಪಾಯಿ)
- ಬ್ರೋಕೋಲಿ (ಕೆಜಿಗೆ 200 ರೂಪಾಯಿ)
- ನವಿಲು ಕೋಸು (ಕೆಜಿಗೆ 63 ರೂಪಾಯಿ)
- ನುಗ್ಗೆಕಾಯಿ (ಕೆಜಿಗೆ 80 ರೂಪಾಯಿ)
- ಕೊತ್ತಂಬರಿಸೊಪ್ಪು (ಕೆಜಿಗೆ 106 ರೂಪಾಯಿ)
- ಬೆಂಡೆಕಾಯಿ (ಕೆಜಿಗೆ 54 ರೂಪಾಯಿ)
- ಶುಂಠಿ (ಕೆಜಿಗೆ 230 ರೂಪಾಯಿ)
- ಕ್ಯಾರೆಟ್ (ಕೆಜಿಗೆ 50 ರೂಪಾಯಿ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ