ಸತತ ಒಂದು ತಿಂಗಳವರೆಗೆ ನಿತ್ಯ 8 ಗಂಟೆಗಳಕಾಲ AC ಚಲಾಯಿಸಿದರೆ ಕರೆಂಟ್ ಬಿಲ್ ಎಷ್ಟು ಬರುತ್ತೆ, ಗೊತ್ತಾ!

Electricity Bill: ಮನೆಯಲ್ಲಿ ಎಸಿ ಬಳಸಿದರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ, ಇದರಿಂದ ತಿಂಗಳ ಬಜೆಟ್ ಹೊರೆಯಾಗುತ್ತದೆ ಎಂಬ ಭಯ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಆದರೆ, ಸತತ ಒಂದು ತಿಂಗಳವರೆಗೆ ನಿತ್ಯ 8 ಗಂಟೆಗಳಕಾಲ AC ಚಲಾಯಿಸಿದರೆ ಕರೆಂಟ್ ಬಿಲ್ ಎಷ್ಟು ಬರುತ್ತೆ, ಗೊತ್ತಾ! 

Written by - Yashaswini V | Last Updated : Jun 16, 2023, 09:44 AM IST
  • 1.5ಟನ್ ಎಸಿಯನ್ನು ನಿತ್ಯ 8ಗಂಟೆಗಳ ಕಾಲ ಚಲಾಯಿಸಿದರೆ ನಿಮಗೆ ಸಾಮಾನ್ಯವಾಗಿ ಬರುವುದಕ್ಕಿಂತ ಸ್ವಲ್ಪ ಹೆಚ್ಚುವರಿ ಬಿಲ್ ಪಾವತಿಸಬೇಕಾಗುತ್ತದೆ.
  • ಇದು ನೀವು ಎಷ್ಟು ಸಮಯ ಎಸಿ ಬಳಸುತ್ತೀರಿ ಎಂಬುದನ್ನಷ್ಟೇ ಆಧರಿಸಿರುವುದಿಲ್ಲ.
  • ಬದಲಿಗೆ, ನಿಮ್ಮ ವಿದ್ಯುತ್ ಬಳಕೆ, ನಿಮ್ಮ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಕಂಪನಿಯ ನಿಯಮಗಳನ್ನು ಕೂಡ ಅವಲಂಬಿಸಿರುತ್ತದೆ.
ಸತತ ಒಂದು ತಿಂಗಳವರೆಗೆ ನಿತ್ಯ 8 ಗಂಟೆಗಳಕಾಲ AC ಚಲಾಯಿಸಿದರೆ ಕರೆಂಟ್ ಬಿಲ್ ಎಷ್ಟು ಬರುತ್ತೆ, ಗೊತ್ತಾ!  title=

Electricity Bill Tips: ಬದಲಾದ ಜೀವನಶೈಲಿಯಲ್ಲಿ ಎಸಿ ಕೂಡ ಒಂದು ಅಗತ್ಯ ಸಾಧನವಾಗಿದೆ. ಆದರೆ, ಮನೆಯಲ್ಲಿ ಏರ್ ಕಂಡೀಷನರ್ ಬಳಕೆಯಿಂದ ವಿದ್ಯುತ್ ಬಿಲ್ ಹೆಚ್ಚು ಬರುತ್ತೆ ಅಂತ ಕೆಲವರು ಎಸಿ ಬಳಕೆಗೆ ಹಿಂದೇಟು ಹಾಕುತ್ತಾರೆ. ಇನ್ನೂ ಕೆಲವರು ಸ್ವಲ್ಪ ಸಮಯವಷ್ಟೇ ಎಸಿ ಚಲಾಯಿಸಿ ಅದನ್ನು ಆಫ್ ಮಾಡುತ್ತಾರೆ.  

ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ 1.5ಟನ್ ಎಸಿಯನ್ನು ಬಳಸಲಾಗುತ್ತದೆ. ಆದರೆ, ನಿತ್ಯ 8 ಗಂಟೆ ಎಸಿ ಬಳಸಿದಸ್ರೆ ಇಡೀ ತಿಂಗಳ ಬಿಲ್ ಎಷ್ಟು ಬರಬಹುದು ಎಂಬುದರ ಲೆಕ್ಕಾಚಾರ ನಿಮಗೆ ತಿಳಿದಿದೆಯೇ? 

ಇಡೀ ತಿಂಗಳು  ದಿನಕ್ಕೆ 8 ಗಂಟೆಗಳ ಕಾಲ ಎಸಿ ಬಳಸಿದ್ರೆ ಕರೆಂಟ್ ಬಿಲ್ ಎಷ್ಟು ಬರುತ್ತೆ! 
ಪ್ರತಿದಿನ ರಾತ್ರಿ 10ಗಂಟೆಯಿಂದ ಬೆಳಿಗ್ಗೆ 6ಗಂಟೆವರೆಗೆ (ನಿಮ್ಮ ಅಗತ್ಯಕ್ಕೆ ಅನುಗುಣವಾಗಿ 8 ಗಂಟೆಗಳ ಕಾಲ) ನಿರಂತರವಾಗಿ ರಾತ್ರಿ ವೇಳೆ 1.5ಟನ್ ಎಸಿ ಚಲಾಯಿಸಿದರೆ ನಿಮಗೆ ಸಾಮಾನ್ಯವಾಗಿ ಬರುವುದಕ್ಕಿಂತ ಸ್ವಲ್ಪ ಹೆಚ್ಚುವರಿ ಬಿಲ್ ಪಾವತಿಸಬೇಕಾಗುತ್ತದೆ. ಇದು ನೀವು ಎಷ್ಟು ಸಮಯ ಎಸಿ ಬಳಸುತ್ತೀರಿ ಎಂಬುದನ್ನಷ್ಟೇ ಆಧರಿಸಿರುವುದಿಲ್ಲ. ಬದಲಿಗೆ, ನಿಮ್ಮ ವಿದ್ಯುತ್ ಬಳಕೆ, ನಿಮ್ಮ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಕಂಪನಿಯ ನಿಯಮಗಳನ್ನು ಕೂಡ ಅವಲಂಬಿಸಿರುತ್ತದೆ ಎಂಬುದನ್ನು ತಿಳಿದಿರುವುದು ತುಂಬಾ ಅಗತ್ಯ. 

ಇದನ್ನೂ ಓದಿ- Facebook: ಭಾರತದಲ್ಲಿ ಬ್ಯಾನ್ ಆಗಲಿದೆಯಾ ಫೇಸ್ ಬುಕ್? ಹೈಕೋರ್ಟ್ ಎಚ್ಚರಿಕೆಯ ಬಳಿಕ ಮೇಟಾ ಟೆನ್ಷನ್ ನಲ್ಲಿ ಹೆಚ್ಚಳ

5 ಸ್ಟಾರ್ ಹೊಂದಿರುವ ಏರ್ ಕಂಡಿಷನರ್ ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ. ಒಂದೊಮ್ಮೆ ನೀವು ಬಳಸುವ ಏರ್ ಕಂಡಿಷನರ್ 2 ರಿಂದ ಮೂರು ಸ್ಟಾರ್ ರೇಟಿಂಗ್ ಹೊಂದಿದ್ದರೆ ಅದು ಕೊಂಚ ಹೆಚ್ಚು ವಿದ್ಯುತ್ ಬಳಸುತ್ತದೆ. ಅಂತಹ ಏರ್ ಕಂಡಿಷನರ್ಗಳು ಗಂಟೆಗೆ ಸುಮಾರು 2.5-3.5 kW ವಿದ್ಯುತ್  ಅನ್ನು ಬಳಸುತ್ತವೆ.  ಅರ್ಥಾತ್, ನೀವು 8 ಗಂಟೆಗಳ ಕಾಲ ಈ ರೀತಿಯ ಎಸಿ ಬಳಸುವುದರಿಂದ ಹೆಚ್ಚುವರಿ ಬಿಲ್ ಪಾವತಿಸಬೇಕಾಗುತ್ತಡೇ. 

ನೀವು 5 ಸ್ಟಾರ್ ರೇಟಿಂಗ್ ಹೊಂದಿರುವ 1.5 ಟನ್ ಏರ್ ಕಂಡಿಷನರ್ ಅನ್ನು ಬಳಸುವುದರಿಂದ ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ. ಇದಕ್ಕಾಗಿಯೇ ನೀವು ಎಸಿ ಖರೀದಿಸುವಾಗ ಕೆಲವು ಅಂಶಗಳನ್ನು ಗಮನಿಸುವುದು ತುಂಬಾ ಅಗತ್ಯವಾಗಿದೆ. ಅವುಗಳೆಂದರೆ... 

* ಎಸಿ ವ್ಯಾಟೇಜ್: 
ನೀವು ಎಸಿ ಖರೀದಿಸುವಾಗ ಮೊದಲು ಎಸಿ ವ್ಯಾಟೇಜ್ ಎಷ್ಟು ಎಂಬುದನ್ನು ಗುರುತಿಸಿ.  1.5 ಟನ್, 5 ಸ್ಟಾರ್ ಏರ್ ಕಂಡಿಷನರ್ ಗಂಟೆಗೆ ಸುಮಾರು 840 ವ್ಯಾಟ್ ವಿದ್ಯುತ್ ಅನ್ನು ಬಳಸುತ್ತದೆ. 

* ವಿದ್ಯುತ್ ಬಳಕೆ ಲೆಕ್ಕಾಚಾರ: 
ನೀವು 5 ಸ್ಟಾರ್ ರೇಟಿಂಗ್ ಹೊಂದಿರುವ 1.5 ಟನ್ ಎಸಿಯನ್ನು ನಿತ್ಯ 8 ಗಂಟೆಗಳ ಕಾಲ ಚಲಾಯಿಸುವುದರಿಂದ ನಿಮ್ಮ ದೈನಂದಿನ ಬಳಕೆ ಸುಮಾರು 6.5 ಯೂನಿಟ್‌ಗಳು (840Watts = 0.84kWh, ಸರಾಸರಿ 0.84 x 8 = 6.72kWh) ಆಗಿರುತ್ತದೆ. 

ಇದನ್ನೂ ಓದಿ- YouTube: ಹೊಸ ಬಳಕೆದಾರರಿಗೂ ಲಕ್ಷಾಂತರ ರೂ. ಸಂಪಾದಿಸುವ ಅವಕಾಶ

* ವಿದ್ಯುತ್ ದರ: 
ನಿಮ್ಮ ಪ್ರದೇಶದಲ್ಲಿ ವಿದ್ಯುತ್ ದರ ಪ್ರತಿ ಯೂನಿಟ್‌ಗೆ 8ರೂ.ಗಳಾಗಿದ್ದರೆ ನಿಮ್ಮ ದೈನಂದಿನ ಬಳಕೆ  ದೈನಂದಿನ ಬಳಕೆ 6.5 ಯೂನಿಟ್‌ಗಳು x ರೂ.8 = 52 ರೂ. ಆಗಿರುತ್ತದೆ.
ಎಂದರೆ ನೀವು ದಿನದಲ್ಲಿ 8 ಗಂಟೆಗಳ ಎಸಿ ಬಳಕೆಗೆ 52 ರೂಪಾಯಿಗಳ ವಿದ್ಯುತ್ ಬಿಲ್ ಬರುತ್ತದೆ. 

* ತಿಂಗಳ ವಿದ್ಯುತ್ ಬಳಕೆ ಲೆಕ್ಕಾಚಾರ: 
ನೀವು ಸತತ ತಿಂಗಳವರೆಗೆ ನಿತ್ಯ 8 ಗಂಟೆಗಳ ಕಾಲ ಎಸಿ ಬಳಸುವುದರಿಂದ ನಿಮಗೆ ತಗಲುವ ಮಾಸಿಕ ಹೆಚ್ಚುವರಿ ವಿದ್ಯುತ್ ವೆಚ್ಚ 30 x 52  ರೂ = 1560 ರೂ.ಗಳಾಗಿರುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News