Aadhaar Lock: ಪ್ರಸ್ತುತ ಭಾರತದಲ್ಲಿ ಆಧಾರ್ ಕಾರ್ಡ್ ಪ್ರತಿ ನಾಗರೀಕರಿಗೆ ಅತ್ಯಗತ್ಯ ದಾಖಲೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯಊ ಸಹ ಆಧಾರ್ ನಲ್ಲಿ ತನ್ನ ಡೇಟಾದ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾನೆ. ಇದನ್ನು ಗಮನದಲ್ಲಿಟ್ಟುಕೊಂಡು ಯುಐಡಿಎಐ ಆಧಾರ್ ಸಂಖ್ಯೆಗಳ ಭದ್ರತೆಯನ್ನು ಹೆಚ್ಚಿಸಲು ಮತ್ತು ವ್ಯಕ್ತಿಗೆ ಹೆಚ್ಚಿನ ನಿಯಂತ್ರಣವನ್ನು ಒದಗಿಸಲು ಆಧಾರ್ ಸಂಖ್ಯೆಗಳನ್ನು (UID) ಲಾಕ್ ಮಾಡಲು ಮತ್ತು ಅನ್‌ಲಾಕ್ ಮಾಡಲು ಅವಕಾಶವನ್ನು ಕಲ್ಪಿಸಿದೆ. 


COMMERCIAL BREAK
SCROLL TO CONTINUE READING

ಯುಐಡಿಎಐ  ವೆಬ್‌ಸೈಟ್ ( www.myaadhaar.uidai.gov.in ) ಅಥವಾ mAadhaar ಅಪ್ಲಿಕೇಶನ್ ಅನ್ನು ಬಳಸಿಕೊಂಡು ಆಧಾರ್ ಬಳಕೆದಾರರು ಬಹಳ ಸುಲಭವಾಗಿ ತಮ್ಮ  UID (ವಿಶಿಷ್ಟ ಗುರುತಿನ ಸಂಖ್ಯೆ)  ಅನ್ನು ಲಾಕ್ ಮತ್ತು ಅನ್‌ಲಾಕ್ ಮಾಡಬಹುದು.  ಆಧಾರ್ ಲಾಕ್ ಮಾಡುವುದರಿಂದ ಬಯೋಮೆಟ್ರಿಕ್ಸ್, ಡೆಮೊಗ್ರಾಫಿಕ್ಸ್ ಮತ್ತು OTP ವಿಧಾನಗಳಿಗಾಗಿ UID, UID ಟೋಕನ್ ಮತ್ತು VID (ವರ್ಚುವಲ್ ID) ಬಳಸಿಕೊಂಡು ಯಾವುದೇ ರೀತಿಯ ದೃಢೀಕರಣವನ್ನು ಕೈಗೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. 


ಆಧಾರ್ ಅನ್ನು ಲಾಕ್ ಮಾಡುವ ಸುಲಭ ವಿಧಾನ: 
ನೀವು ನಿಮ್ಮ ಆಧಾರ್ ಅನ್ನು ಲಾಕ್ ಮಾಡಲು  16-ಅಂಕಿಯ VID ಸಂಖ್ಯೆಯನ್ನು ಹೊಂದಿರುವುದು ಬಹಳ ಮುಖ್ಯ. ಒಂದೊಮ್ಮೆ ನೀವು ವಿ‌ಐ‌ಡಿ ಸಂಖ್ಯೆಯನ್ನು ಹೊಂದಿಲ್ಲದಿದ್ದರೆ SMS ಅಥವಾ UIDAI ವೆಬ್‌ಸೈಟ್ ( www.myaadhaar.uidai.gov.in) ಬಳಸಿಕೊಂಡು ಇದನ್ನು ಪಡೆಯಬಹುದು. 


ಇದನ್ನೂ ಓದಿ- ಕೇಂದ್ರ ಸರ್ಕಾರ ನೀಡುತ್ತಿದೆ ಉಚಿತ ಗ್ಯಾಸ್ ಸಿಲಿಂಡರ್ : ಲಾಭ ಪಡೆಯಬೇಕಾದರೆ ಇಂದೇ ಅರ್ಜಿ ಸಲ್ಲಿಸಿ


ಎಸ್‌ಎಮ್‌ಎಸ್ ಮೂಲಕ,  ವಿ‌ಐ‌ಡಿಯನ್ನು ಪಡೆಯಲು, GVID ಎಂದು ಟೈಪ್ ಮಾಡಿ  ಸ್ಪೇಸ್‌ ನೀಡಿ UIDಯ ಅಂತಿಮ ನಾಲ್ಕು ಅಥವಾ ಎಂಟು ಅಂಕೆಗಳನ್ನು  1947 ಗೆ ಎಸ್‌ಎಮ್‌ಎಸ್ ಕಳುಹಿಸಿ. ಉದಾಹರಣೆ: GVID 1234. 
* UIDAI ವೆಬ್‌ಸೈಟ್‌ಗೆ ಭೇಟಿ ನೀಡಿ ( https://resident.uidai.gov.in/aadhaar-lockunlock ). ನಂತರ, ಮೈ ಆಧಾರ್ ಪುಟದಿಂದ, ಆಧಾರ್ ಲಾಕ್ ಮತ್ತು ಅನ್‌ಲಾಕ್ ಸೇವೆಗಳನ್ನು ಆಯ್ಕೆಮಾಡಿ. 
* ಇದರ ನಂತರ, UID ಲಾಕ್ ರೇಡಿಯೊ ಬಟನ್ ಅನ್ನು ಆಯ್ಕೆ ಮಾಡಿ, ಇತ್ತೀಚಿನ ವಿವರಗಳಲ್ಲಿ ವಿವರಿಸಿದಂತೆ ನಿಮ್ಮ UID ಸಂಖ್ಯೆ, ಪೂರ್ಣ ಹೆಸರು ಮತ್ತು ಪಿನ್ ಕೋಡ್ ಅನ್ನು ನಮೂದಿಸಿ ಮತ್ತು ನಿಮ್ಮ ಭದ್ರತಾ ಕೋಡ್ ಅನ್ನು ನಮೂದಿಸಿ. 
* OTP (ಒಂದು-ಬಾರಿಯ ಪಾಸ್‌ವರ್ಡ್) ಕಳುಹಿಸು ಆಯ್ಕೆಯನ್ನು ಕ್ಲಿಕ್ ಮಾಡಿ ಅಥವಾ * TOTP (ಸಮಯ ಆಧಾರಿತ ಒಂದು-ಬಾರಿ ಪಾಸ್‌ವರ್ಡ್) ಆಯ್ಕೆಮಾಡಿ ಮತ್ತು ನಂತರ ಸಲ್ಲಿಸಿ. ನಿಮ್ಮ ಬಳಕೆದಾರ ಐಡಿ ಯಶಸ್ವಿಯಾಗಿ ಲಾಕ್ ಆಗುತ್ತದೆ.
 
ನಿಮ್ಮ UID ಅನ್‌ಲಾಕ್ ಮಾಡುವುದು ಹೇಗೆ?
ಯಾವುದೇ ಒಬ್ಬ ವ್ಯಕ್ತಿಯು ತನ್ನ UID ಅನ್ನು ಅನ್ಲಾಕ್ ಮಾಡಲು ಬಯಸಿದರೆ, UIDAI ವೆಬ್‌ಸೈಟ್‌ನಲ್ಲಿ ತೀರಾ ಇತ್ತೀಚಿನ VID ಅನ್ನು ನಮೂದಿಸುವ ಮೂಲಕ ಅಥವಾ mAadhaar ಅಪ್ಲಿಕೇಶನ್  ಗೆ ಹೋಗಿ ಸುಲಭವಾಗಿ  UID ಅನ್‌ಲಾಕ್ ಮಾಡಬಹುದು. 


ಇದಲ್ಲದೆ, ಎಸ್‌ಎಮ್‌ಎಸ್ ಮೂಲಕವೂ,  UID ಅನ್ನು ಅನ್‌ಲಾಕ್ ಮಾಡಬಹುದು. ಅದಕ್ಕಾಗಿ,  RVID  ಎಂದು ಟೈಪ್ ಮಾಡಿ ಸ್ಪೇಸ್  ಕೊಟ್ಟು UID ಯ ಕೊನೆಯ 4 ಅಥವಾ 8 ಅಂಕೆಗಳನ್ನು  ನಮೂದಿಸಿ 1947 ಸಂಖ್ಯೆಗೆ SMS ಕಳುಹಿಸಬಹುದು. ಉದಾಹರಣೆಗೆ- RVID 1234  ನಂತರ  ಕೂಡಲೇ ಅವರ UID ಅನ್‌ಲಾಕ್ ಮಾಡಲಾಗುವುದು. 


ಇದನ್ನೂ ಓದಿ- ಸರ್ಕಾರಿ ನೌಕರರ ಮೂಲ ವೇತನದಲ್ಲೇ ಹೆಚ್ಚಳ ! ಈ ದಿನದಿಂದ 9000 ರೂ.ಯಷ್ಟು ಹೆಚ್ಚಳವಾಗುವುದು ಸ್ಯಾಲರಿ


ಅಥವಾ UID ಅನ್‌ಲಾಕ್ ಮಾಡಲು, UIDAI ವೆಬ್‌ಸೈಟ್ https://resident.uidai.gov.in/aadhaar-lockunlock ಗೆ ಭೇಟಿ ನೀಡಿ, ಅನ್‌ಲಾಕ್ ರೇಡಿಯೋ ಬಟನ್ ಅನ್ನು ಆಯ್ಕೆ ಮಾಡಿ, ಇತ್ತೀಚಿನ VID ಮತ್ತು ಭದ್ರತಾ ಕೋಡ್ ಅನ್ನು ನಮೂದಿಸಿ ಮತ್ತು Send OTP ಆಯ್ಕೆಯನ್ನು ಕ್ಲಿಕ್ ಮಾಡಿ ಅಥವಾ TOTP ಆಯ್ಕೆಮಾಡಿ ಮತ್ತು ಸಲ್ಲಿಸು ಕ್ಲಿಕ್ ಮಾಡಿದರೆ ನಿಮ್ಮ UID ಅನ್ನು ಯಶಸ್ವಿಯಾಗಿ ಅನ್‌ಲಾಕ್ ಮಾಡಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.