Union Budget 2024: ಅಸಂಘಟಿತ ವಲಯದ ಕಾರ್ಮಿಕರಿಗೊಂದು ಗುಡ್ ನ್ಯೂಸ್!

Union Budget 2024: ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರಮುಖ ಪಿಂಚಣಿ ಯೋಜನೆಯಡಿ ಪಿಂಚಣಿ ವ್ಯಾಪ್ತಿಯನ್ನು ಸರ್ಕಾರ ಹೆಚ್ಚಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಬನ್ನಿ ಈ ಕುರಿತಾಗಿ ವಿಸ್ತೃತ ಮಾಹಿತಿ ಪಡೆದುಕೊಳ್ಳೋಣ, (Business News In Kannada / Budget 2024 News In Kannada)  

Written by - Nitin Tabib | Last Updated : Jan 15, 2024, 07:36 PM IST
  • ಅಟಲ್ ಪಿಂಚಣಿ ಅಡಿಯಲ್ಲಿ ನೋಂದಾಯಿಸಲಾದ ಚಂದಾದಾರರ ಸಂಖ್ಯೆಯನ್ನು ಒಂದೊಮ್ಮೆ ಗಮನಿಸಿದರೆ,
  • ಅದು ನಿರಂತರವಾಗಿ ಹೆಚ್ಚುತ್ತಿದೆ. ಪಿಎಫ್ಆರ್ಡಿಎ ಯಿಂದ ದೊರೆತ ಮಾಹಿತಿಯ ಪ್ರಕಾರ,
  • ಈ ಚಂದಾದಾರರು 31 ಮಾರ್ಚ್ 2021 ರವರೆಗೆ 28 ​​ಮಿಲಿಯನ್ ಅಂದರೆ 2.8 ಕೋಟಿಗಳಷ್ಟಾಗಿದ್ದರು, ಇದು 31 ಮಾರ್ಚ್ 2022 ರ ವೇಳೆಗೆ 3.62 ಕೋಟಿಗೆ ಏರಿಕೆಯಾಗಿದೆ.
Union Budget 2024: ಅಸಂಘಟಿತ ವಲಯದ ಕಾರ್ಮಿಕರಿಗೊಂದು ಗುಡ್ ನ್ಯೂಸ್!  title=

Union Budget 2024:  ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31 ರಿಂದ ಆರಂಭವಾಗಲಿದ್ದು, ರಾಷ್ಟ್ರಪತಿಗಳ ಭಾಷಣದೊಂದಿಗೆ ಔಪಚಾರಿಕವಾಗಿ ಬಜೆಟ್ ಅಧಿವೇಶನಕ್ಕೆ ಚಾಲನೆ ಸಿಗಲಿದೆ. 2024 ರ ಮಧ್ಯಂತರ ಬಜೆಟ್ ಅನ್ನು ಮರುದಿನ ಅಂದರೆ ಫೆಬ್ರವರಿ 1 ರಂದು ಮಂಡಿಸಲಾಗುತ್ತದೆ. ಆದರೆ, ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಹೆಚ್ಚು ಜನಪರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎನ್ನಲಾಗುತ್ತಿದೆ. ಅದೇನೇ ಇದ್ದರೂ, ಈ ಬಾರಿಯ ಬಜೆಟ್ ಕೆಲವು ಕ್ಷೇತ್ರಗಳಿಗೆ ಪರಿಹಾರ ಮತ್ತು ಉಡುಗೊರೆಗಳನ್ನು ತರಬಹುದು. ಅಸಂಘಟಿತ ವಲಯದ ಉದ್ಯೋಗಿಗಳು ಅಥವಾ ಕಾರ್ಮಿಕರು ಸಹ ಈ ನಿಟ್ಟಿನಲ್ಲಿ ಪ್ರಯೋಜನಗಳನ್ನು ಪಡೆಯಬಹುದು ಎನ್ನಲಾಗುತ್ತಿದೆ. (Business News In Kannada / Budget 2024 News In Kannada)

ಪಿಂಚಣಿಯ ವ್ಯಾಪ್ತಿಯು ಹೆಚ್ಚಾದರೆ ಹೆಚ್ಚಿನ ಪಿಂಚಣಿ ಸಿಗಲಿದೆ
ಈ ಬಾರಿ, ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ನೀಡುವ ಕನಿಷ್ಠ ಪಿಂಚಣಿ ವ್ಯಾಪ್ತಿಯನ್ನು ಹೆಚ್ಚಿಸಬಹುದು ಎನ್ನಲಾಗುತ್ತಿದೆ. ಅಟಲ್ ಪಿಂಚಣಿ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರಮುಖ ಪಿಂಚಣಿ ಯೋಜನೆಯಾಗಿದೆ. ಆಂಗ್ಲ ಮಾಧ್ಯಮದ ವಾಣಿಜ್ಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. 2024ರ ಮಧ್ಯಂತರ ಬಜೆಟ್‌ನಲ್ಲಾಗಲಿ ಅಥವಾ ಅದರ ಹೊರತಾಗಲಿ ಇದಕ್ಕೆ ಬಂದಿರುವ ಪ್ರಸ್ತಾವನೆ ಕುರಿತು ನಿರ್ಧಾರ ಕೈಗೊಳ್ಳಬಹುದು’ ಎಂದು ಅನಾಮಧೇಯ ಷರತ್ತಿನ ಮೇಲೆ ಸರ್ಕಾರಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ ಎಂದು ವರದಿ ಹೇಳಿದೆ. ಇದು ಸಂಭವಿಸಿದಲ್ಲಿ ಅಟಲ್ ಪಿಂಚಣಿ ಯೋಜನೆಯ ಫಲಾನುಭವಿಗಳು ಹೆಚ್ಚಿನ ಪಿಂಚಣಿ ಪಡೆಯುವ ನಿರೀಕ್ಷೆ ಇದೆ.

ಪಿಎಫ್‌ಆರ್‌ಡಿಎ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು
ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ನೀಡಲಾಗುವ ಪಿಂಚಣಿ ಮಿತಿಯನ್ನು ಹೆಚ್ಚಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದೆ. ಈ ಪಿಂಚಣಿ ಯೋಜನೆಗೆ ಹೆಚ್ಚು ಹೆಚ್ಚು ಜನರು ಚಂದಾದಾರರಾಗಲು ಎಪಿಐ ಅಡಿಯಲ್ಲಿ ಲಭ್ಯವಿರುವ ಖಾತರಿ ಪಿಂಚಣಿ ಮಿತಿಯನ್ನು ಹೆಚ್ಚಿಸಬೇಕು ಎಂದು ಹೇಳಲಾಗಿದೆ.

ಇದನ್ನೂ ಓದಿ-Good News: ನಿಮ್ಮ ಬಳಿಯೂ ಎಲ್ಐಸಿ ಪಾಲಸಿ ಅಥವಾ ಷೇರುಗಳಿವೆಯಾ? ಶೀಘ್ರದಲ್ಲೇ ಸಿಗಲಿದೆ ಭಾರಿ ಧನಲಾಭ!

ಅಟಲ್ ಪಿಂಚಣಿ ಯೋಜನೆಯ ಚಂದಾದಾರರ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ
ಅಟಲ್ ಪಿಂಚಣಿ ಅಡಿಯಲ್ಲಿ ನೋಂದಾಯಿಸಲಾದ ಚಂದಾದಾರರ ಸಂಖ್ಯೆಯನ್ನು ಒಂದೊಮ್ಮೆ ಗಮನಿಸಿದರೆ, ಅದು ನಿರಂತರವಾಗಿ ಹೆಚ್ಚುತ್ತಿದೆ. ಪಿಎಫ್ಆರ್ಡಿಎ ಯಿಂದ ದೊರೆತ  ಮಾಹಿತಿಯ ಪ್ರಕಾರ, ಈ ಚಂದಾದಾರರು 31 ಮಾರ್ಚ್ 2021 ರವರೆಗೆ 28 ​​ಮಿಲಿಯನ್ ಅಂದರೆ 2.8 ಕೋಟಿಗಳಷ್ಟಾಗಿದ್ದರು, ಇದು 31 ಮಾರ್ಚ್ 2022 ರ ವೇಳೆಗೆ 3.62 ಕೋಟಿಗೆ ಏರಿಕೆಯಾಗಿದೆ. ಇದಾದ ನಂತರ 2023ರ ಮಾರ್ಚ್ 31ರ ವೇಳೆಗೆ 4.59 ಕೋಟಿಗೆ ಮತ್ತು 2024ರ ಜನವರಿ 6ಕ್ಕೆ 5.3 ಕೋಟಿಗೆ ಏರಿಕೆಯಾಗಿದೆ. ಅಟಲ್ ಪಿಂಚಣಿ ಯೋಜನೆಯ ಚಂದಾದಾರರ ಸಂಖ್ಯೆ ಹೆಚ್ಚುತ್ತಿದೆ ಎಂಬುದಕ್ಕೆ ಅವರ ನಿರಂತರ ಹೆಚ್ಚಾಗುತ್ತಿರುವ ಸಂಖ್ಯೆಯು ಪುರಾವೆಯಾಗಿದೆ. ಆದರೆ ಸರ್ಕಾರವು ಅವರ ಪಿಂಚಣಿ ಮಿತಿಯನ್ನು ಹೆಚ್ಚಿಸಿದರೆ ಅದು ಇನ್ನೂ ವೇಗವಾಗಿ ಹೆಚ್ಚಾಗಲಿದೆ.

ಇದನ್ನೂ ಓದಿ-Union Budget 2024: ನಿಮ್ಮ ಕೈಯಲ್ಲಿ ಅಧಿಕ ಹಣ ಉಳಿಸಲು, ವಿತ್ತ ಸಚಿವೆ ಸೀತಾರಾಮನ್ ಅವರಿಂದ ಈ ಘೋಷಣೆ ಸಾಧ್ಯತೆ!

ಅಟಲ್ ಪಿಂಚಣಿ ಯೋಜನೆ ಎಂದರೇನು?
ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2015 ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯಡಿಯಲ್ಲಿ, ನೀವು 60 ವರ್ಷ ವಯಸ್ಸಿನ ನಂತರ 1000 ರಿಂದ 5000 ರೂಪಾಯಿಗಳ ಜೀವಮಾನದ ಕನಿಷ್ಠ ಖಾತರಿ ಪಿಂಚಣಿಯನ್ನು ಪಡೆಯುತ್ತೀರಿ. ಭಾರತ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಡಿ, 18 ರಿಂದ 40 ವರ್ಷ ವಯಸ್ಸಿನ ಭಾರತೀಯ ನಾಗರಿಕರು ಖಾತೆಯನ್ನು ತೆರೆಯಬಹುದು. ಈ ಯೋಜನೆಯಡಿಯಲ್ಲಿ, ನೀವು 60 ವರ್ಷಗಳ ನಂತರ 1000 ರಿಂದ 5000 ರೂಗಳ ಜೀವಿತಾವಧಿಯ ಕನಿಷ್ಠ ಖಾತರಿ ಪಿಂಚಣಿಯನ್ನು ಪಡೆಯುತ್ತೀರಿ. ಈ ಯೋಜನೆಯ ಫಲಾನುಭವಿಗಳು ಯಾವುದೇ ಸಮಯದಲ್ಲಿ ಪಿಂಚಣಿ ಮೊತ್ತವನ್ನು ಅಪ್‌ಗ್ರೇಡ್ ಮಾಡಬಹುದು ಅಥವಾ ಡೌನ್‌ಗ್ರೇಡ್ ಮಾಡಬಹುದು ಹಾಗೆಯೇ ಪ್ರೀಮಿಯಂ ಪಾವತಿಯ ಸಮಯವನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕವಾಗಿ ಬದಲಾಯಿಸಬಹುದು. ಆದರೆ, ಅಕ್ಟೋಬರ್ 1, 2022 ರಿಂದ, ಆದಾಯ ತೆರಿಗೆದಾರರಾಗಿರುವ ಭಾರತದ ಯಾವುದೇ ನಾಗರಿಕರು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 

Trending News