Gold Outlook Today: ಮುಂಬರುವ ದಿನಗಳಲ್ಲಿ ಒಂದು ವೇಳೆ ನೀವೂ ಕೂಡ ಚಿನ್ನವನ್ನು ಖರೀದಿಸಲು ಬಯಸುತ್ತಿದ್ದರೆ ಅಥವಾ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಅದಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ತಿಳಿದುಕೊಳ್ಳಲು ಇದು ಸರಿಯಾದ ಸಮಯ. ಏಕೆಂದರೆ ರಿಸರ್ವ್ ಬ್ಯಾಂಕಿನ ಇತ್ತೀಚಿನ ನಿರ್ಧಾರವು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಭವಿಷ್ಯದಲ್ಲಿ ಚಿನ್ನದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ತಜ್ಞರು ಅಂದಾಜು ವ್ಯಕ್ತಪಡಿಸಿದ್ದಾರೆ. ವಾಸ್ತವದಲ್ಲಿ, RBI 2000 ರೂಪಾಯಿ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಇದಕ್ಕಾಗಿ, 2023 ರ ಮೇ 23 ರಿಂದ ಸೆಪ್ಟೆಂಬರ್ 30 ರವರೆಗೆ ಸಮಯವನ್ನು ನೀಡಲಾಗಿದೆ.


COMMERCIAL BREAK
SCROLL TO CONTINUE READING

ಚಿನ್ನದ ಬೆಲೆ 63000 ರೂ ತಲುಪುವ ಸಾಧ್ಯತೆ
ಆರ್‌ಬಿಐ ನೋಟು ಹಿಂಪಡೆಯುವ ನಿರ್ಧಾರವು ಚಿನ್ನದ ಮಾರುಕಟ್ಟೆಯಲ್ಲಿ ಭೂಕಂಪವನ್ನು ಉಂಟುಮಾಡಲಿದೆ ಎಂದು ಸರಕು ಮಾರುಕಟ್ಟೆ ತಜ್ಞ ಮತ್ತು ಐಐಎಫ್‌ಎಲ್ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಅನುಜ್ ಗುಪ್ತಾ ಹೇಳಿದ್ದಾರೆ. ಇದರ ಬೆಲೆ ದಾಖಲೆ ಮಟ್ಟ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಭೌತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 62000 ರಿಂದ 63000 ರೂಪಾಯಿಗಳಿಗೆ ತಲುಪಬಹುದು ಎಂದು ಅವರು ಹೇಳಿದ್ದಾರೆ. ಏಕೆಂದರೆ 2000 ರೂಪಾಯಿಗಳ ಕರೆನ್ಸಿಯನ್ನು ನಿಷೇಧಿಸುವ ಮೂಲಕ ಜನರು ಅವುಗಳನ್ನು ಬೇಗನೆ ಖರ್ಚು ಮಾಡಲು ಯತ್ನಿಸುತ್ತಾರೆ. 2016 ರಲ್ಲಿ ನೋಟು ಅಮಾನ್ಯೀಕರಣದ ಸಮಯದಲ್ಲಿಯೂ ಕೂಡ ಇದೇ ರೀತಿಯ ಚಿತ್ರಣ ನಿರ್ಮಾಣಗೊಂಡಿತ್ತು. 


ಇದನ್ನೂ ಓದಿ-Two Thousand Note: 2000 ರೂ.ಗಳ ನೋಟನ್ನು ಪ್ರಧಾನಿ ಮೋದಿ ಏಕೆ ಉತ್ತಮ ಕರೆನ್ಸಿ ಎಂದು ಭಾವಿಸುವುದಿಲ್ಲ?


ಚಿನ್ನದ ಪ್ರಿಮಿಯಮ್ ಬೆಲೆ ಹೆಚ್ಚಾಗಿದೆ
2000 ರೂಪಾಯಿ ನೋಟು ಹೊಂದಿರುವ ಖರೀದಿದಾರರು ಅದನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡುವ ಅಥವಾ ಪರಿವರ್ತಿಸುವ ಬದಲು ಚಿನ್ನವನ್ನು ಖರೀದಿಸಲು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಭೌತಿಕ ಚಿನ್ನದ ಬೇಡಿಕೆ ಹೆಚ್ಚಾಗಲಿದೆ. ಖರೀದಿದಾರನು ಭೌತಿಕ ಮಾರುಕಟ್ಟೆಯಲ್ಲಿ ಪ್ರೀಮಿಯಂನಲ್ಲಿಯೂ ಚಿನ್ನವನ್ನು ಖರೀದಿಸಲು ಸಿದ್ಧನಾಗಿರುತ್ತಾನೆ. ಬೇಡಿಕೆ ಹೆಚ್ಚಾದ ಕಾರಣ ಈ ಹಿಂದೆ 1000 ಇದ್ದ ಪ್ರೀಮಿಯಂ ಬೆಲೆಯೂ 1500-2000 ರೂ.ಗೆ ಏರಿಕೆಯಾಗಿದೆ.


ಇದನ್ನೂ ಓದಿ-Currency History: ನಮ್ ದೇಶದಲ್ಲಿ 10000 ರೂ.ಗಳ ನೋಟ್ ಕೂಡ ಚಲಾವಣೆಯಲ್ಲಿತ್ತಂತೆ!


ಚಿನ್ನದ ಬೆಲೆಯಲ್ಲಿ ಏರಿಕೆ
ನಿನ್ನೆ ದೇಶೀಯ ಫ್ಯೂಚರ್ ಮಾರುಕಟ್ಟೆಯಲ್ಲಿ ಬಲವಾದ ಚಲನೆ ಕಂಡುಬಂದಿದೆ. MCX ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ರೂ. 667 ಗಳಷ್ಟು ಹೆಚ್ಚಾಗಿ 60390 ಕ್ಕೆ ತಲುಪಿದೆ. ಬೆಳ್ಳಿ ಬೆಲೆಯೂ ಏರಿಕೆಯಾಗಿದೆ. ಬೆಳ್ಳಿ ಪ್ರತಿ ಕೆಜಿಗೆ ರೂ. 1200 ಗಳಷ್ಟು ದುಬಾರಿಯಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ