Budget 2023 : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು,  ಫೆಬ್ರವರಿ 1 ರಂದು ಲೋಕಸಭೆಯಲ್ಲಿ ದೇಶದ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಹೊಸ ವೇತನ ಆಯೋಗ ಘೋಷಣೆ ಮಾಡುವ ಸಾಧ್ಯತೆ ಇದೆ. 8 ವರ್ಷಗಳ ಹಿಂದೆ 7ನೇ ವೇತನ ಆಯೋಗ ಜಾರಿಗೆ ಬಂದಿತ್ತು. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ 8ನೇ ವೇತನ ಆಯೋಗವನ್ನು ಪ್ರಕಟಿಸಲಿದೆಯೇ ಅಥವಾ ಅದರ ಜಾಗದಲ್ಲಿ ಹೊಸ ವ್ಯವಸ್ಥೆತನ್ನು ಜಾರಿಗೊಳಿಸಲಿದೆಯೇ ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.   


COMMERCIAL BREAK
SCROLL TO CONTINUE READING

ಘೋಷಣೆಯಾಗುವುದೇ  8ನೇ ವೇತನ ಆಯೋಗ : 
ರಾಜಕೀಯ ವಿಶ್ಲೇಷಕರ ಪ್ರಕಾರ, ಮುಂದಿನ ವರ್ಷ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕೇಂದ್ರ ನೌಕರರ ನಿಲುವು ಬಹಳ ಮುಖ್ಯ. ಆದ್ದರಿಂದ ಸರ್ಕಾರ ಈ ವರ್ಗದ ಓಲೈಕೆ ಮಾಡದೇ ಇರದು. ಮುಂದಿನ ಸಂಸತ್ತಿನ ಚುನಾವಣೆಗೂ ಮುನ್ನ ಕೇಂದ್ರ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರ ಖಂಡಿತವಾಗಿಯೂ ದೊಡ್ಡ ಘೋಷಣೆ ಮಾಡಲಿದೆ ಎಂದೇ ಹೇಳಲಾಗುತ್ತಿದೆ. 


ಇದನ್ನೂ ಓದಿ : ವೇತನ ವರ್ಗ ಮತ್ತು ಉದ್ಯಮಿಗಳಿಗೆ ಈ ಬಾರಿಯ ಬಜೆಟ್ ನಲ್ಲಿ ಸಿಗಲಿದೆ ಭರ್ಜರಿ ಕೊಡುಗೆ!


ಜಾರಿಯಗಬಹುದು ಹೊಸ ವ್ಯವಸ್ಥೆ :  
ಇದೇ ವೇಳೆ ನೌಕರರ ಸಂಘಟನೆಗಳು ತಮಗೆ 8ನೇ ವೇತನ ಆಯೋಗ ಘೋಷಣೆ ಮಾಡುವಂತೆ ಒತ್ತಾಯಿಸುತ್ತಿವೆ. 7ನೇ ವೇತನ ಆಯೋಗದಲ್ಲಿ ನೌಕರ ವೇತನ ಅಷ್ಟೊಂದು ಮಟ್ಟದಲ್ಲಿ ಹೆಚ್ಚಳವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಇದರ ಬದಲಾಗಿ ನೌಕರರಿಗೆ  ಆಟೋಮ್ಯಾಟಿಕ್ ಸಿಸ್ಟಮ್ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಪ್ರತಿ ವರ್ಷ ನೌಕರರ ವೇತನ ಆಟೋಮ್ಯಾಟಿಕ್  ಆಗಿ ಪರಿಷ್ಕರಣೆಯಾಗುತ್ತದೆ. ಈ ಬಗ್ಗೆ ಬಜೆಟ್‌ನಲ್ಲಿ ದೊಡ್ಡ ಘೋಷಣೆ ಮಾಡುವ ಸಾಧ್ಯತೆ ಇದೆ. 


ಈಗಾಗಲೇ  ತನ್ನ ನಿಲುವು ಸ್ಪಷ್ಟಪಡಿಸಿದ ಸರ್ಕಾರ :  
ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗವನ್ನು ಘೋಷಿಸುವ ಬದಲು ಖಾಸಗಿ ವಲಯದ ನೌಕರರಂತೆ ಉತ್ತಮ ಇನ್ಕ್ರಿಮೆಂಟ್ ನೀಡಬೇಕು ಎಂಬುದು ಸರ್ಕಾರದ ಉದ್ದೇಶ. ಇದಕ್ಕಾಗಿ ಸರ್ಕಾರದ ಸಮಿತಿಯೂ ಪರಿಶೀಲನೆ ನಡೆಸುತ್ತಿದೆ. ಹೊಸ ವೇತನ ಆಯೋಗವನ್ನು ಸ್ಥಾಪಿಸುವ ಯಾವುದೇ ಪ್ರಸ್ತಾವನೆಯು ಪ್ರಸ್ತುತ ತನ್ನ ಮುಂದೆ ಇಲ್ಲ ಎನ್ನುವುದನ್ನು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಹೊಸ ವೇತನ ಆಯೋಗವನ್ನು ಸ್ಥಾಪಿಸುವ ಸಾಧ್ಯತೆಯು ಪ್ರಸ್ತುತ ಕಡಿಮೆ.  


ಇದನ್ನೂ ಓದಿ : ಹೇಗಿರಲಿದೆ ಈ ಬಾರಿಯ ಬಜೆಟ್? ಪ್ರಧಾನಿ ಮೋದಿ ಹೇಳಿದ್ದೇನು ?


ತುಟ್ಟಿಭತ್ಯೆ ಕುರಿತು ಸರ್ಕಾರದ ನಿಲುವೇನು? :
ಸುಮಾರು 8 ವರ್ಷಗಳ ಹಿಂದೆ ಜಾರಿಗೆ ಬಂದ 7ನೇ ವೇತನ ಆಯೋಗದಲ್ಲಿ ನೌಕರರಿಗೆ ಹಲವು ಸೌಲಭ್ಯಗಳನ್ನು ನೀಡಲಾಗಿತ್ತು. ಇದರ ಅಡಿಯಲ್ಲಿ, ನೌಕರರ ತುಟ್ಟಿ ಭತ್ಯೆಯನ್ನು ಪ್ರತಿ 6 ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಇದರಿಂದಾಗಿ ನೌಕರರ ವೇತನವೂ ತಾನಾಗಿಯೇ ಹೆಚ್ಚುತ್ತಿದೆ. ಈಗ ಹೊಸ ವ್ಯವಸ್ಥೆ ಜಾರಿಯಾದ ನಂತರವೂ ತುಟ್ಟಿಭತ್ಯೆಯ ಸ್ವಯಂಚಾಲಿತ ಪರಿಷ್ಕರಣೆ ಹಿಂದಿನಂತೆಯೇ ಮುಂದುವರಿಯಲಿದೆ ಅಥವಾ ಅದರಲ್ಲಿ ಏನಾದರೂ ಬದಲಾವಣೆ ತರಲಾಗುವುದು ಎಂಬ ಅಂಶದತ್ತ ಕಾರ್ಮಿಕರ ದೃಷ್ಟಿ ನೆಟ್ಟಿದೆ. 



https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.