ವೇತನ ವರ್ಗ ಮತ್ತು ಉದ್ಯಮಿಗಳಿಗೆ ಈ ಬಾರಿಯ ಬಜೆಟ್ ನಲ್ಲಿ ಸಿಗಲಿದೆ ಭರ್ಜರಿ ಕೊಡುಗೆ!

Nirmala Sitharaman Budget:ಗರಿಷ್ಠ ಆದಾಯ ತೆರಿಗೆಯು ವೇತನ ವರ್ಗದಿಂದಲೇ ಬರುತ್ತದೆ. ಈ ನಿಟ್ಟಿನಲ್ಲಿ ವಿತ್ತ ಸಚಿವರು ತೆರಿಗೆ ಮಿತಿ ಹೆಚ್ಚಳ ಘೋಷಣೆ ಮಾಡಿದರೂ ಅಚ್ಚರಿಯಿಲ್ಲ. ಇದಲ್ಲದೇ ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಹೆಚ್ಚಾಗುವ ನಿರೀಕ್ಷೆ ಇದೆ. 

Written by - Ranjitha R K | Last Updated : Jan 31, 2023, 02:42 PM IST
  • ಹೆಚ್ಚಾಗಲಿದೆ ತೆರಿಗೆ ಮಿತಿ
  • ಸ್ಟ್ಯಾಂಡರ್ಡ್ ಡಿಡೆಕ್ಶನ್ ನಲ್ಲಿ ಬದಲಾವಣೆ
  • ನಿವೃತ್ತಿ ಜೀವನ್ಕಾಗಿ ಮಾಡುವ ಹೂಡಿಕೆ
ವೇತನ ವರ್ಗ ಮತ್ತು ಉದ್ಯಮಿಗಳಿಗೆ ಈ ಬಾರಿಯ ಬಜೆಟ್ ನಲ್ಲಿ ಸಿಗಲಿದೆ ಭರ್ಜರಿ ಕೊಡುಗೆ!  title=

Budget 2023 : ನಾಳೆ  ಬಜೆಟ್ ಮಂಡನೆಯಾಗಲಿದೆ.  ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ವೇತನ  ವರ್ಗಕ್ಕೆ ದೊಡ್ಡ ಉಡುಗೊರೆಯನ್ನೇ ನೀಡುವ ನಿರೀಕ್ಷೆ ಇದೆ ಎನ್ನಲಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯಮ ವರ್ಗದ ಜನರಿಗೂ ಪರಿಹಾರ ನೀಡುವ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ನಲ್ಲಿ 5 ಪ್ರಮುಖ ಘೋಷಣೆಗಳು ಹೊರ ಬೀಳಲಿವೆ ಎನ್ನುವ ಭರವಸೆ ಕೂಡಾ ವ್ಯಕ್ತವಾಗುತ್ತಿದೆ. ಗರಿಷ್ಠ ಆದಾಯ ತೆರಿಗೆಯು ವೇತನ ವರ್ಗದಿಂದಲೇ ಬರುತ್ತದೆ. ಈ ನಿಟ್ಟಿನಲ್ಲಿ ವಿತ್ತ ಸಚಿವರು ತೆರಿಗೆ ಮಿತಿ ಹೆಚ್ಚಳ ಘೋಷಣೆ ಮಾಡಿದರೂ ಅಚ್ಚರಿಯಿಲ್ಲ. ಇದಲ್ಲದೇ ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಹೆಚ್ಚಾಗುವ ನಿರೀಕ್ಷೆ ಇದೆ.         

ಹೆಚ್ಚಾಗಲಿದೆ ತೆರಿಗೆ ಮಿತಿ :
ಜನ ಸಾಮಾನ್ಯರು ದಿನದಿಂದ ದಿನಕ್ಕೆ ಬೆಲೆ ಏರಿಕೆ ಬಿಸಿಯಿಂದ ತತ್ತರಿಸುತ್ತಿದ್ದಾರೆ. ಜೀವನ ವೆಚ್ಚವೂ ಹೆಚ್ಚುತ್ತಿದೆ. ಈ ನಡುವೆ, ಸರ್ಕಾರವು ಆದಾಯ ತೆರಿಗೆ ಪಾವತಿದಾರರಿಗೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಐದು ಲಕ್ಷ ರೂಪಾಯಿಗಳ ಆದಾಯ ತೆರಿಗೆ ವಿನಾಯಿತಿ ನೀಡಬಹುದು. ಪ್ರಸ್ತುತ 2.5ರಿಂದ 5 ಲಕ್ಷ ಆದಾಯದ ಮೇಲೆ ಶೇ.5ರಷ್ಟು ತೆರಿಗೆ ಹಾಗೂ 5ರಿಂದ 7.5 ಲಕ್ಷ ಆದಾಯದ ಮೇಲೆ ಶೇ.20ರಷ್ಟು ತೆರಿಗೆ ಪಾವತಿಸಬೇಕಿದೆ.  

ಇದನ್ನೂ ಓದಿ : ಹೇಗಿರಲಿದೆ ಈ ಬಾರಿಯ ಬಜೆಟ್? ಪ್ರಧಾನಿ ಮೋದಿ ಹೇಳಿದ್ದೇನು ?

ಸ್ಟ್ಯಾಂಡರ್ಡ್ ಡಿಡೆಕ್ಶನ್ ನಲ್ಲಿ ಬದಲಾವಣೆ : 
ವೇತನ ವರ್ಗವು ಪ್ರತಿ ವರ್ಷ ಸ್ಟ್ಯಾಂಡರ್ಡ್ ಡಿಡಕ್ಷನ್ ಅಡಿಯಲ್ಲಿ 50,000 ರೂ.ಗಳ ವಿನಾಯಿತಿಯನ್ನು ಪಡೆಯಬಹುದು. ಆದಾಯ ತೆರಿಗೆಯ ಸೆಕ್ಷನ್ 16 (IA) ನಲ್ಲಿ ಸರ್ಕಾರವು ಬಕೆಲವು ದಲಾವಣೆಗಳನ್ನು ಮಾಡಬಹುದು ಎನ್ನಲಾಗಿದೆ.   ಸ್ಟ್ಯಾಂಡರ್ಡ್ ಡಿಡೆಕ್ಶನ್  ಮಿತಿಯನ್ನು 50,000 ರೂ.ನಿಂದ 75,000 ರೂ.ಗೆ ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ. 

80C ನಲ್ಲಿ ವಿನಾಯಿತಿ :
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ, ತೆರಿಗೆದಾರರು 1.5 ಲಕ್ಷ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ತೆರಿಗೆ ವಿನಾಯಿತಿ ಪಡೆಯಬಹುದು. ಈ ಮಿತಿಯನ್ನು ಹೆಚ್ಚಿಸಲು ತೆರಿಗೆದಾರರು ಕೂಡಾ ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಂಡರೆ ತೆರಿಗೆದಾರರಿಗೆ ದೊಡ್ಡ ಮಟ್ಟದ ರಿಲೀಫ್ ಸಿಗಲಿದೆ. ಈ ಹೂಡಿಕೆಯನ್ನು EPF, PPF, ELSS, NSC, NPS, ಬ್ಯಾಂಕ್ FD ಗಳಲ್ಲಿ ಮಾಡಬಹುದು. 

ಇದನ್ನೂ ಓದಿ : ಮನೆ ಖರೀದಿಸುವವರಿಗೆ ಈ ಬಾರಿ ಆಗುವುದು ಲಾಭ! ಬಜೆಟ್ ಮುನ್ನಾ ದಿನ ಹೊರ ಬಿತ್ತು ಮಾಹಿತಿ!

ನಿವೃತ್ತಿ ಜೀವನ್ಕಾಗಿ ಮಾಡುವ ಹೂಡಿಕೆ : 
ಉದ್ಯೋಗಿಗಳು ಯಾವಾಗಲೂ ನಿವೃತ್ತಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಸರ್ಕಾರವು ಇಲ್ಲಿ ಕೂಡಾ ತೆರಿಗೆ ವಿನಾಯಿತಿಯ ಮಿತಿಯನ್ನು ಹೆಚ್ಚಿಸಬಹುದು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ ಸರ್ಕಾರ ಈ ಮಿತಿಯನ್ನು ಒಂದು ಲಕ್ಷ ರೂಪಾಯಿಗೆ ಹೆಚ್ಚಿಸಬಹುದು ಎನ್ನುವುದು ತಜ್ಞರ ಅಭಿಪ್ರಾಯ.   

ಆರೋಗ್ಯ ವಿಮೆ :
ಸದ್ಯ ಆರೋಗ್ಯ ವಿಮೆ ಕ್ಲೇಮ್ ಅಡಿಯಲ್ಲಿ 25 ಸಾವಿರ ರೂ.ವರೆಗೆ ವಿನಾಯಿತಿ ನೀಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಈ ಮಿತಿಯನ್ನು 50 ಸಾವಿರ ರೂ.ಗೆ ಹೆಚ್ಚಿಸಲಿದೆ ಎನ್ನಲಾಗಿದೆ. ವೃದ್ಧರಿಗೆ ಈ ಮಿತಿಯನ್ನು 50 ಸಾವಿರದಿಂದ 75 ಸಾವಿರ ರೂ.ಗೆ ಹೆಚ್ಚಿಸುವ ನಿರೀಕ್ಷೆ ಇದೆ. 

ಇನ್ನು ವ್ಯಾಪಾರ ವರ್ಗವೂ ಕೂಡಾ ಈ ಬಾರಿಯ ಬಜೆಟ್ ಮೇಲೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. 
-GST ತೆರಿಗೆ ವ್ಯವಸ್ಥೆಯ ಸಂಪೂರ್ಣ ವಿಮರ್ಶೆ.
- ಆದಾಯ ತೆರಿಗೆ ದರಗಳನ್ನು ಕಡಿಮೆ ಮಾಡುವ ಘೋಷಣೆ 
- ಚಿಲ್ಲರೆ ವ್ಯಾಪಾರಕ್ಕೆ ಅನ್ವಯವಾಗುವ ಎಲ್ಲಾ ಕಾನೂನುಗಳು ಮತ್ತು ನಿಬಂಧನೆಗಳ ಸಂಪೂರ್ಣ ಪರಿಶೀಲನೆ 
- ಒಂದು ರಾಷ್ಟ್ರ-ಒಂದು ತೆರಿಗೆಯ ರೀತಿಯಲ್ಲಿ ಒಂದು ರಾಷ್ಟ್ರ-ಒಂದು ಪರವಾನಗಿ ನೀತಿ 
-ವ್ಯಾಪಾರಿಗಳಿಗೆ ಪರಿಣಾಮಕಾರಿ ಪಿಂಚಣಿ ಯೋಜನೆ 
-ಉತ್ತರ ಪ್ರದೇಶ ರಾಜ್ಯದ ಮಾದರಿಯಲ್ಲಿ ದೇಶಾದ್ಯಂತ ಎಲ್ಲಾ ವ್ಯಾಪಾರಿಗಳಿಗೂ ವಿಮಾ ಯೋಜನೆ ಜಾರಿಯಾಗಬೇಕು.
- ಸಣ್ಣ ವ್ಯವಹಾರಗಳಿಗೆ ಪ್ರತ್ಯೇಕ ಕ್ರೆಡಿಟ್ ರೇಟಿಂಗ್ ಮಾನದಂಡ
- ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಮೂಲಕ ವ್ಯಾಪಾರಿಗಳಿಗೆ ಸುಲಭ ಸಾಲ ಸೌಲಭ್ಯ 
- ಉದ್ಯಮಿಗಳು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ ಸಾಲ ಪಡೆಯಲು ಅನುವು ಮಾಡಿಕೊಡುವುದು.
-ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 138 ರ ಅಡಿಯಲ್ಲಿ ವ್ಯಾಪಾರಿಗಳ ನಡುವಿನ ಪರಸ್ಪರ ಪಾವತಿ ಮತ್ತು ಚೆಕ್ ಬೌನ್ಸ್‌ನಂತಹ ವಿವಾದಗಳಿಗೆ ತ್ವರಿತ ನ್ಯಾಯಾಲಯದ ಸ್ಥಾಪನೆ.
- ವಿಶೇಷ ಆರ್ಥಿಕ ವಲಯದ ಮಾದರಿಯಲ್ಲಿ ಹಳ್ಳಿಗಳ ಬಳಿ ವಿಶೇಷ ವ್ಯಾಪಾರ ವಲಯ ನಿರ್ಮಾಣದ ಘೋಷಣೆ.
-ಆಂತರಿಕ ಮತ್ತು ಬಾಹ್ಯ ವ್ಯಾಪಾರವನ್ನು ಉತ್ತೇಜಿಸಲು ದೇಶ ಮತ್ತು ಪ್ರಪಂಚದಾದ್ಯಂತ ಭಾರತೀಯ ಉತ್ಪನ್ನಗಳ ವ್ಯಾಪಾರ ಮೇಳಗಳು ಮತ್ತು ಪ್ರದರ್ಶನಗಳ ಸಂಘಟನೆ.
- ವ್ಯಾಪಾರ ಸಮುದಾಯದಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಮತ್ತು ಅಳವಡಿಸಿಕೊಳ್ಳಲು ವಿವಿಧ ಪ್ರೋತ್ಸಾಹಕಗಳ ಘೋಷಣೆ.
- ಗ್ರಾಹಕರ ಕಾನೂನಿನಡಿಯಲ್ಲಿ ಇ-ಕಾಮರ್ಸ್ ನಿಯಮಗಳ ತ್ವರಿತ ಅನುಷ್ಠಾನ.
ಇ-ಕಾಮರ್ಸ್ ನೀತಿಯನ್ನು ಕೂಡಲೇ ಪ್ರಕಟಿಸಬೇಕು.
ಇ-ಕಾಮರ್ಸ್‌ಗೆ ನಿಯಂತ್ರಣ ಪ್ರಾಧಿಕಾರ ರಚನೆಗೆ ಘೋಷಣೆಯಾಗಬೇಕು.
- ಚಿಲ್ಲರೆ ವ್ಯಾಪಾರಕ್ಕೆ ರಾಷ್ಟ್ರೀಯ ವ್ಯಾಪಾರ ನೀತಿ ಪ್ರಕಟಿಸಬೇಕು.
ಕೇಂದ್ರ ಮತ್ತು ರಾಜ್ಯಗಳಲ್ಲಿ ಆಂತರಿಕ ವ್ಯಾಪಾರಕ್ಕಾಗಿ ಪ್ರತ್ಯೇಕ ಸಚಿವಾಲಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News