Fuel Saving Tips And Tricks: ದುಬಾರಿ ಪೆಟ್ರೋಲ್-ಡಿಸೇಲ್ ಬೆಲೆಯಿಂದ ಕಂಗಾಲಾಗಿದ್ದೀರಾ, ಈ 6 ಟ್ರಿಕ್ ಬಳಸಿ ಉತ್ತಮ ಮೈಲೇಜ್ ಪಡೆಯಿರಿ
Fuel Saving Tips - ಇಂದು ಪೆಟ್ರೋಲ್ ಬೆಲೆ ರೂ.100 ಮತ್ತು ಪ್ರಿಮಿಯಂ ಪೆಟ್ರೋಲ್ ಬೆಲೆ ಅದಕ್ಕಿಂತಲೂ ಹೆಚ್ಚಾಗಿದೆ. ಡಿಸೇಲ್ ಬೆಲೆಯೂ ಕೂಡ ತನ್ನ ಗರಿಷ್ಟ ಮಟ್ಟವನ್ನು ತಲುಪಿದೆ. ಒಂದು ವೇಳೆ ನೀವೂ ಕೂಡ ದಿನದಿಂದ ದಿನಕ್ಕೆ ಗಗನ ಮುಖಿಯಾಗುತ್ತಿರುವ ತೈಲ ಬೆಲೆಯಿಂದ ಕಂಗಾಲಾಗಿದ್ದರೆ, ಈ ಕೆಳಗೆ ನೀಡಿದ ಸಲಹೆಗಳನ್ನು ಅನುಸರಿಸಿ ನೀವೂ ಕೂಡ ಉತ್ತಮ ಮೈಲೇಜ್ ಪಡೆದುಕೊಳ್ಳಬಹುದು
Fuel Saving Tricks and Tips: ಇಂದು ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಶತಕ ದಾಟಿದೆ. ಡೀಸೆಲ್ ಬೆಲೆಯೂ ಕೂಡ ಸಾರ್ವಕಾಲಿಕ ಗರಿಷ್ಟ ಮಟ್ಟಕ್ಕೆ ತಲುಪಿದೆ. ಆದರೆ, ಸರ್ಕಾರದ ಪ್ರಯತ್ನದಿಂದ ಇವುಗಳ ಬೆಲೆಯಲ್ಲಿ ಕೊಂಚ ನೆಮ್ಮದಿ ಸಿಕ್ಕಂತಾಗಿದೆ, ಆದರೂ ಕೂಡ ಬೆಲೆಗಳು ಏರಿಕೆಗೆ ತಕ್ಕಂತೆ ಇಳಿಕೆಯಾಗಿಲ್ಲ ಎಂಬುದು ಜನರ ಅಭಿಪ್ರಾಯ. ಅಂದರೆ, ಕಾರನ್ನು ನಿರ್ವಹಿಸುವುದು ಇದೀಗ ಬಜೆಟ್‌ಗೆ ಸ್ಪಾಯ್ಲರ್ ಆಗಿ ಮಾರ್ಪಟ್ಟಿದೆ, ವಿಶೇಷವಾಗಿ ನಾಲ್ಕು ಚಕ್ರದ ವಾಹನಗಳ ನಿರ್ವಹಣೆ ಕಷ್ಟಕರವಾಗಿದೆ. ಇಂದು ಸತತ ಒಂದು ತಿಂಗಳು ಕಾರನ್ನು ಓಡಿಸುವುದು ಜನರ ಜೇಬಿನ ಮೇಲೆ ಭಾರಿ ಹೊಡೆತ ನೀಡುತ್ತಿದೆ. ಓಲಾ ಅಥವಾ ಉಬರ್ ಅಥವಾ ನಿಮ್ಮ ಸ್ವಂತ ವಾಣಿಜ್ಯ ಕಾರ್ ಆಗಿರಲಿ, ಇಂಧನದ ಹೆಚ್ಚಿದ ವೆಚ್ಚದಿಂದ ಚಾಲಕರು ಸಹ ಬೇಸ್ತುಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನಾವು ನಿಮಗೆ ಕೆಲವು ಸುಲಭವಾದ ಸಲಹೆಗಳು ಮತ್ತು ತಂತ್ರಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವುಗಳನ್ನು ಅನುಸರಿಸುವ ಮೂಲಕ ನೀವು ಒಂದು ತಿಂಗಳಲ್ಲಿ ಸಾಕಷ್ಟು ಪೆಟ್ರೋಲ್ ಅನ್ನು ಉಳಿತಾಯ ಮಾಡಬಹುದು.
ಪೆಟ್ರೋಲ್-ಡಿಸೇಲ್ ಉಳಿತಾಯಕ್ಕೆ 6 ಸುಲಭ ಸಲಹೆಗಳು
1. ಎಸಿ ಬಳಕೆಯನ್ನು ಕಡಿಮೆ ಮಾಡಿ
ಬೇಸಿಗೆಯಲ್ಲಿ, ನಮಗೆಲ್ಲರಿಗೂ ಏರ್ ಕಂಡಿಷನರ್ ಅಗತ್ಯವಿರುತ್ತದೆ. ಅದರಲ್ಲಿಯೂ ವಿಶೇಷವಾಗಿ ಕಾರಿನಲ್ಲಿ, ನಾವು ಸಾಮಾನ್ಯವಾಗಿ ಎಸಿಯನ್ನು ನಿರಂತರವಾಗಿ ಆನ್ ಮಾಡುತ್ತೇವೆ. ಆದರೆ, ಕಾರಿನ ಕ್ಯಾಬಿನ್ ತಣ್ಣಗಾದಾಗ ಎಸಿ ಆಫ್ ಮಾಡಿ. ಈ ಕುಶಲತೆಯು ತುಂಬಾ ಪರಿಣಾಮಕಾರಿಯಾಗಿದೆ ಮತ್ತು ಕಾರಿನ ಬಹಳಷ್ಟು ಇಂಧನವನ್ನು ಅದು ಉಳಿತಾಯ ಮಾಡುತ್ತದೆ.
2. ಕೆಂಪು ಲೈಟ್ ಸಿಗ್ನಲ್ ಬಳಿ ಎಂಜಿನ್ ಅನ್ನು ಆಫ್ ಮಾಡಿ
ವಿಶ್ವಾದ್ಯಂತದ ಹಲವು ಶಕ್ತಿ ಆಯೋಗಗಳ ಸಲಹೆಯ ಪ್ರಕಾರ, ಟ್ರಾಫಿಕ್ ಲೈಟ್‌ನಲ್ಲಿ ಅಥವಾ ಇನ್ನಾವುದೇ ಕಾರಣಕ್ಕಾಗಿ 10 ಸೆಕೆಂಡುಗಳಿಗಿಂತ ಹೆಚ್ಚು ಕಾಯಬೇಕಾದರೆ, ತಕ್ಷಣವೇ ವಾಹನದ ಎಂಜಿನ್ ಅನ್ನು ಆಫ್ ಮಾಡಬೇಕು ಎನ್ನಲಾಗಿದೆ. ಏಕೆಂದರೆ, ಎಂಜಿನ್ ಚಾಲ್ತಿಯಲ್ಲಿರುವ ಒಂದು ನಿಂತುಕೊಂಡ ವಾಹನ ಒಂದು ಗಂಟೆಗೆ ಒಂದು ಗ್ಯಾಲನ್ ತೈಲವನ್ನು ಸುಡುತ್ತದೆ. ಹೀಗಾಗಿ ಕೆಂಪು ಸಿಗ್ನಲ್ ನಲ್ಲಿ ವಾಹನ ನಿಂತುಹೋದ ಸಂದರ್ಭದಲ್ಲಿ ತಡಮಾಡದೆ ತಕ್ಷಣವೇ ವಾಹನವನ್ನು ನಿಲ್ಲಿಸಿ. ಹೀಗೆ ಮಾಡುವುದರಿಂದ ನೀವು ಆದಷ್ಟು ಹೆಚ್ಚು ಇಂಧನ ಉಳಿತಾಯ ಮಾಡಬಹುದು.
3. ಓವರ್ಲೋಡ್ ಮಾಡುವುದನ್ನು ತಪ್ಪಿಸಿ
ಕಾರಿನ ಮೇಲೆ ಹೆಚ್ಚಿನ ತೂಕ ಹಾಕುವುದು ಎಂದರೆ ಇಂಜಿನ್ ಮೇಲೆ ತೂಕ ಹೆಚ್ಚಿಸಿದಂತೆ, ಇದು ಹೆಚ್ಚು ಇಂಧನ ಸುಡಲು ಕಾರಣವಾಗುತ್ತದೆ. ಇದೇ ವೇಳೆ ವಾಹನದೊಳಗೆ ಅನಗತ್ಯ ಬಿಡಿಭಾಗಗಳನ್ನು ಹಾಕದಂತೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ಇದು ವಾಹನಕ್ಕೆ ಹೆಚ್ಚಿನ ತೂಕವನ್ನು ನೀಡುತ್ತದೆ, ಇದು ಇಂಧನ ಉಳಿತಾಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಕಾರನ್ನು ಏರೋಡೈನಾಮಿಕ್ಸ್ ಪ್ರಕಾರ ತಯಾರಿಸಲಾಗುತ್ತದೆ, ಆದರೆ ಕೆಲವು ವಿಷಯಗಳು ಗಾಳಿಯ ನಿಖರವಾದ ಹರಿವನ್ನು ತಡೆಯುತ್ತದೆ, ಇದು ಕಾರಿನ ಮೇಲೆ ಗಾಳಿಯ ಒತ್ತಡವನ್ನು ಹೆಚ್ಚಿಸುತ್ತದೆ. ಇದರರ್ಥ ಕಾರಿನ ಮೈಲೇಜ್ ಕಡಿಮೆಯಾಗುತ್ತದೆ. ನಿಮ್ಮ ಕಾರಿನಲ್ಲಿ ಪ್ರತ್ಯೇಕವಾಗಿ ಸ್ಥಾಪಿಸಲಾದ ರೂಫ್ ಬಾರ್‌ಗಳು, ಬಾಕ್ಸ್‌ಗಳು ಮತ್ತು ಫ್ಲ್ಯಾಗ್‌ಗಳು ನಿಮ್ಮ ಕಾರಿನ ಏರೋಡೈನಾಮಿಕ್ಸ್‌ನ ಪರಿಣಾಮವನ್ನು ಕಡಿಮೆ ಮಾಡುತ್ತದೆ, ಆದ್ದರಿಂದ ಉತ್ತಮ ಮೈಲೇಜ್‌ಗಾಗಿ, ಕಾರಿನಲ್ಲಿ ಪ್ರತ್ಯೇಕ ಮೈಲೇಜ್ ಡಿಗ್ರೇಡಿಂಗ್ ಐಟಂ ಅನ್ನು ಸ್ಥಾಪಿಸಬೇಡಿ.
4. ಕ್ರೂಸ್ ನಿಯಂತ್ರಣವನ್ನು ಬಳಸಿ
ನಿಮ್ಮ ಕಾರು ತಯಾರಕರು ಕ್ರೂಸ್ ನಿಯಂತ್ರಣ ವೈಶಿಷ್ಟ್ಯವನ್ನು ನೀಡಿದ್ದರೆ, ಅದನ್ನು ಬಳಸುವುದನ್ನು ಮುಂದುವರಿಸಿ. ಇದನ್ನು ಬಳಸುವುದರಿಂದ, ಕಾರು ಸ್ಥಿರ ವೇಗದಲ್ಲಿ ಚಲಿಸುತ್ತದೆ ಮತ್ತು ಮೈಲೇಜ್ ಸುಧಾರಿಸುತ್ತದೆ. ಇದಲ್ಲದೆ, ಚಾಲಕನು ಯಾವುದೇ ತೊಂದರೆಯಿಲ್ಲದೆ ಸ್ವಲ್ಪ ವಿಶ್ರಾಂತಿ ಪಡೆಯುತ್ತಾನೆ, ಈ ವೈಶಿಷ್ಟ್ಯವು ದೂರದ ಪ್ರಯಾಣ ಮಾಡುವಾಗ ಸಾಕಷ್ಟು ಪೆಟ್ರೋಲ್ ಅನ್ನು ಉಳಿಸುತ್ತದೆ.
5.ನಿಯಮಿತ ಕಾಲಾವಧಿಯಲ್ಲಿ ಏರ್ ಫಿಲ್ಟರ್ ಅನ್ನು ಬದಲಾಯಿಸಿ
ಕಾರಿನ ಏರ್ ಫಿಲ್ಟರ್ ಕೊಳೆಯಾಗಿದ್ದರೆ ಮತ್ತು ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದರೆ ಅದು ಎಂಜಿನ್ ಮೇಲೆ ಅನಗತ್ಯ ಒತ್ತಡ ಹೆಚ್ಚಿಸುತ್ತದೆ, ಇದೂ ಕೂಡ ಮೈಲೇಜ್ ಇಳಿಕೆಗೆ ಕಾರಣವಾಗುತ್ತದೆ. ನೀವು ಕಾಲಕಾಲಕ್ಕೆ ಕಾರಿನ ಫಿಲ್ಟರ್ ಅನ್ನು ಬದಲಾಯಿಸುತ್ತಿದ್ದರೆ, ಎಂಜಿನ್‌ಗೆ ಸರಿಯಾದ ಗಾಳಿಯ ಹರಿವು ಲಭ್ಯವಾಗುತ್ತದೆ ಮತ್ತು ಎಂಜಿನ್ ಯಾವುದೇ ತೊಂದರೆಯಿಲ್ಲದೆ ಕಾರ್ಯನಿರ್ವಹಿಸುತ್ತದೆ ಮತ್ತು ಉತ್ತಮ ಮೈಲೇಜ್ ನೀಡುತ್ತದೆ.
ಇದನ್ನೂ ಓದಿ-Good News: ಕಾರ್-ಬೈಕ್ ಪ್ರಿಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ
6. ಟೈರ್ ಗಳಲ್ಲಿ ಗಾಳಿಯ ಒತ್ತಡ ಮತ್ತು ವೇಗದ ಮಿತಿಗಳನ್ನು ನಿರ್ವಹಿಸಿ
ವಾಹನ ತಯಾರಕರು ಶಿಫಾರಸು ಮಾಡಿದ ಟೈರ್ ಗಾಳಿ ಒತ್ತಡವನ್ನು ನೀವು ನಿರ್ವಹಿಸಿದರೆ, ಇಂಧನ ದಕ್ಷತೆಯಲ್ಲಿ ನೀವು ಗಮನಾರ್ಹ ಹೆಚ್ಚಳವನ್ನು ಗಮನಿಸಬಹುದು. ಕಡಿಮೆ ಟೈರ್ ಒತ್ತಡವು ಎಂಜಿನ್ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ. ಆದ್ದರಿಂದ, ಟೈರ್ ಒತ್ತಡವನ್ನು ಸರಿಯಾಗಿ ನಿರ್ವಹಿಸಲು ಪ್ರಯತ್ನಿಸಿ
ಇದನ್ನೂ ಓದಿ-Nitin Gadkari Master Plan: ತಪ್ಪಾದ ಜಾಗಗಳಲ್ಲಿ ಪಾರ್ಕ್ ಆದ ವಾಹನಗಳ ಫೋಟೋ ಕಳುಹಿಸುವವರಿಗೆ 500 ರೂ. ಬಹುಮಾನ !
ಮೇಲಿನ ಈ ಎಲ್ಲಾ ಸಲಹೆಗಳನ್ನು ನೀವು ಚಾಚು ತಪ್ಪದೆ ಅನುಸರಿಸಿದರೆ, ಪ್ರತಿ ತಿಂಗಳಿಗೆ ನೀವು ಸಾಕಷ್ಟು ಇಂಧನದ ಉಳಿತಾಯ ಮಾಡಬಹುದು ಮತ್ತು ನಿಮ್ಮ ಜೇಬಿನ ಮೇಲಿನ ಭಾರವನ್ನು ಕಡಿಮೆ ಮಾಡಿಕೊಳ್ಳಬಹುದು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.