Good News: ಕಾರ್-ಬೈಕ್ ಪ್ರಿಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ

Nitin Gadkari on Electric Vehicle: ನೀವೂ ಕೂಡ ಕಾರ್ ಅಥವಾ ಬೈಕ್ ಪ್ರಿಯರಾಗಿದ್ದರೆ, ಈ ಸಂತಸದ ಸುದ್ದಿ ನಿಮಗಾಗಿ. ಹೌದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರ ಈ ಹೊಸ ಘೋಷಣೆಯಿಂದ ಕೇವಲ ವಾಯುಮಾಲಿನ್ಯಕ್ಕೆ ಮಾತ್ರವೇ ಬ್ರೇಕ್ ಬೀಳದೆ, ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿಯೂ ಕೂಡ ಭಾರಿ ಇಳಿಕೆಯಾಗಲಿದೆ.  

Written by - Nitin Tabib | Last Updated : Jun 18, 2022, 01:07 PM IST
  • ಕಾರ್-ಬೈಕ್ ಪ್ರಿಯರಿಗೆ ಭಾರಿ ಸಂತಸದ ಸುದ್ದಿ
  • ಒಂದು ವರ್ಷದೊಳಗೆ ಪೆಟ್ರೋಲ್ ವಾಹನಗಳ ಬೆಲೆಗೆ ಸಮನಾಗಲಿದೆ ಇಲೆಕ್ಟ್ರಿಕ್ ವಾಹನಗಳ ಬೆಲೆ
  • ಇದರಿಂದ ಪೆಟ್ರೋಲ್-ಡಿಸೇಲ್ ಬೆಲೆ ಕೂಡ ಇಳಿಕೆಯಾಗಲಿದೆ ಎಂದ ಕೇಂದ್ರ ಸಚಿವ ನಿತೀನ್ ಗಡ್ಕರಿ
Good News: ಕಾರ್-ಬೈಕ್ ಪ್ರಿಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ title=
Nitin Gadkari on Electric Vehicle

Nitin Gadkari on Electric Vehicle: ನೀವೂ ಕೂಡ ಕಾರ್ ಹಾಗೂ ಬೈಕ್ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ ಸ್ವಲ್ಪ ನಿರೀಕ್ಷೆ ಮಾಡಿ. ಏಕೆಂದರೆ, ನಿಮ್ಮ ನಿರೀಕ್ಷೆ ನಿಮಗೆ ಬಂಪರ್ ಲಾಭ ನೀಡಲಿದೆ. ಹೌದು, ಕೇಂದ್ರ ಸಚಿವ ನಿತೀನ್ ಗಡ್ಕರಿ ಮಾಡಿರುವ ಒಂದು ಮಹತ್ವದ ಘೋಷಣೆಯ ಪ್ರಕಾರ ಮುಂದಿನ ಒಂದು ವರ್ಷದೊಳಗೆ ಎಲೆಕ್ಟ್ರಿಕ್ ವಾಹನಗಳ ಪೆಲೆ ಪೆಟ್ರೋಲ್ ಕಾರುಗಳ ಬೆಲೆಗೆ ಸಮನಾಗಲಿದೆ. ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಈ ಮಹತ್ವದ ಘೋಷಣೆ ಮಾಡಿದ್ದಾರೆ. 

ಪೆಟ್ರೋಲ್-ಡಿಸೇಲ್ ಬೆಲೆ ಕೂಡ ಇಳಿಕೆಯಾಗಲಿದೆ
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿರುವ ಕೇಂದ್ರ ಸಚಿವ ನಿತೀನ್ ಗಡ್ಕರಿ, ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಬದಲಿಗೆ ಬೆಳೆಗಳಿಂದ ಉಳಿದ ಅವಶೇಷಗಳಿಂದ ತಯಾರಿಸಲಾಗುವ ಇಥೆನಾಲ್ ಉತ್ಪಾದನೆಯನ್ನು ಹೆಚ್ಚಿಸಲು ಒತ್ತು ನೀಡುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿಯೂ ಕೂಡ ಇಳಿಕೆಯಾಗಲಿದೆ. ಶುಕ್ರವಾರ ಸುದ್ದಿ ಮಾಧ್ಯಮ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. 

ಕಾರುಗಳ ಬೆಲೆಯಲ್ಲಿ ಶೇ.35 ರಿಂದ 40 ವೆಚ್ಚ ಬ್ಯಾಟರಿ ವೆಚ್ಚವಾಗಿರುತ್ತದೆ
'ದೇಶಾದ್ಯಂತ ಮಾರಾಟವಾಗುವ ಇಲೆಕ್ಟ್ರಿಕ್ ವಾಹನಗಳ ಬೆಲೆ, ಪೆಟ್ರೋಲ್-ಡಿಸೇಲ್ ವಾಹನಗಳಿಗೆ ಸಮನಾಗಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ಇದರಿಂದ ಪೆಟ್ರೋಲ್-ಡಿಸೇಲ್ ಇತ್ಯಾದಿಗಳ ಮೇಲೆ ವೆಚ್ಚ ಕಡಿಮೆಯಾಗಲಿದ್ದು ನಾವು ವಿದೇಶಿ ಭಂಡಾರವನ್ನು ಉಳಿತಾಯ ಮಾಡಬಹುದು' ಎಂದು ಗಡ್ಕರಿ ಹೇಳಿದ್ದಾರೆ. 'ಪ್ರಸ್ತುತ ಬ್ಯಾಟರಿಗಳ ಬೆಲೆ ದುಬಾರಿಯಾಗಿರುವ ಕಾರಣ ಇಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚಾಗಿದೆ. ಒಂದು ಕಾರಿನ ಒಟ್ಟು ಬೆಲೆಯಲ್ಲಿ ಶೇ.35 ರಿಂದ ಶೇ 40 ರಷ್ಟು ವೆಚ್ಚ ಬ್ಯಾಟರಿ ವೆಚ್ಚವಾಗಿರುತ್ತದೆ' ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ-Credit Card Users: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸಿಗುವ ಈ ಪ್ರಯೋಜನಗಳ ಬಗ್ಗೆ ತಿಳಿದಿದೆಯೇ?

ಹಸಿರು ಇಂಧನಕ್ಕೆ ಸರ್ಕಾರದ ಉತ್ತೇಜನ
ಈ ಸಂದರ್ಭದಲ್ಲಿ ಸರ್ಕಾರ ಹಸಿರು ಇಂಧನದ ಉತ್ಪಾದನೆಯನ್ನು ಹೆಚ್ಚಿಸಲು ಉತ್ತೇಜನ ನೀಡುತ್ತಿದೆ. ಇದಲ್ಲದೆ, ರಸ್ತೆ ಸಾರಿಗೆಗಿಂತ ಜಲ ಸಾರಿಗೆ ಒಂದು ಅಗ್ಗದ ಆಯ್ಕೆಯಾಗಿದ್ದು, ಈ ಕುರಿತು ಕೂಡ ವೇಗದಿಂದ ಕಾರ್ಯ ನಡೆಯುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ. 

ಇದನ್ನೂ ಓದಿ-SBI ಗ್ರಾಹಕರಿಗೆ ಭಾರಿ ಸಂತಸದ ಸುದ್ದಿ, FD ಬಡ್ಡಿ ದರಗಳಲ್ಲಿ ಹೆಚ್ಚಳ

ಫೋಟೋ ಕಳುಹಿಸುವವರಿಗೆ 500 ರೂ.ಬಹುಮಾನ
ನಿತೀನ್ ಗಡ್ಕರಿ ಹಾಗೂ ಅವರ ಸಚಿವಾಲಯ ಸಾರಿಗೆ ವ್ಯವಸ್ಥೆಯನ್ನು ನಿರಂತರವಾಗಿ ಸುಧಾರಿಸುವ ಕೆಲಸದಲ್ಲಿ ತೊಡಗಿದೆ ಮತ್ತು ವಾಯು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ನಿರಂತರ ಶ್ರಮಿಸುತ್ತಿದೆ. ಇತ್ತೀಚೆಗಷ್ಟೇ ವಾಹನ ದಟ್ಟನೆ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಗಡ್ಕರಿ ಒಂದು ಮಹತ್ವ ಘೋಷಣೆ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಅವರು ತಪ್ಪಾದ ಜಾಗಗಳಲ್ಲಿ ಪಾರ್ಕ್ ಮಾಡಲಾಗಿರುವ ವಾಹನಗಳ ಫೋಟೋ  ಕ್ಲಿಕ್ಕಿಸಿ ಕಳುಹಿಸುವವರಿಗೆ ಸರ್ಕಾರ 500 ರೂ.ಬಹುಮಾನ ನೀಡಲಿದ್ದು, ಶೀಘ್ರದಲ್ಲಿಯೇ ಈ ಕುರಿತಾದ ಸಾರಿಗೆ ನಿಯಮ ಜಾರಿಗೆ ತರಲಾಗುವುದು ಎಂದು ಅವರು ಹೇಳಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News