ಕರ್ನಾಟಕ ಸೇರಿದಂತೆ ಈ ರಾಜ್ಯಗಳಲ್ಲಿ ಎದುರಾಗಿದೆ ಪೆಟ್ರೋಲ್ ಡಿಸೇಲ್ ಕೊರತೆ..!

ದೇಶದ ಹಲವೆಡೆ ಪೆಟ್ರೋಲ್, ಡೀಸೆಲ್ ದಾಸ್ತಾನು ಖಾಲಿಯಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ. ಈ ಬಗ್ಗೆ ಸರ್ಕಾರವು ಖಾಸಗಿ ಕಂಪನಿಗಳ ಕಡಿತದಿಂದಾಗಿ ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ಸಂಬಂಧಿಸಿದ ಪೆಟ್ರೋಲ್ ಪಂಪ್‌ಗಳ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಹೇಳಿದೆ.

Written by - Ranjitha R K | Last Updated : Jun 16, 2022, 09:24 AM IST
  • ಹಲವು ರಾಜ್ಯಗಳಲ್ಲಿ ಎದುರಾಗಿದೆ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ
  • ಕಂಪನಿಗಳು ನಷ್ಟದಲ್ಲಿಯೇ ಮಾರಾಟ ಮಾಡುತ್ತಿವೆ ತೈಲ
  • ನಿಮ್ಮ ನಗರದಲ್ಲಿ ಎಷ್ಟಿದೆ ಪೆಟ್ರೋಲ್ ಬೆಲೆ ?
 ಕರ್ನಾಟಕ ಸೇರಿದಂತೆ ಈ ರಾಜ್ಯಗಳಲ್ಲಿ ಎದುರಾಗಿದೆ ಪೆಟ್ರೋಲ್ ಡಿಸೇಲ್ ಕೊರತೆ..!  title=
Petrol Diesel Price (file photo)

ಬೆಂಗಳೂರು : ಸರ್ಕಾರಿ ತೈಲ ಕಂಪನಿಗಳು ಇಂದು ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡಿದೆ. ಇಂದು ಸತತ 27ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಬಾರಿ ಮೇ 21 ರಂದು ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲಾಗಿತ್ತು. 

ಹಲವು ರಾಜ್ಯಗಳಲ್ಲಿ ಎದುರಾಗಿದೆ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ :
ಇದೇ ವೇಳೆ ದೇಶದ ಹಲವೆಡೆ ಪೆಟ್ರೋಲ್, ಡೀಸೆಲ್ ದಾಸ್ತಾನು ಖಾಲಿಯಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ. ಖಾಸಗಿ ಕಂಪನಿಗಳ ಕಡಿತದಿಂದಾಗಿ ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ಸಂಬಂಧಿಸಿದ ಪೆಟ್ರೋಲ್ ಪಂಪ್‌ಗಳ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ಬಿಕ್ಕಟ್ಟನ್ನು ನೀಗಿಸಲು ಸಾಕಷ್ಟು ಪ್ರಮಾಣದ ತೈಲವನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ, ಕರ್ನಾಟಕ, ಗುಜರಾತ್, ಪಂಜಾಬ್ ಮತ್ತು ಹಿಮಾಚಲ ಪ್ರದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಕಂಡುಬಂದಿದೆ.  

ಇದನ್ನೂ ಓದಿ : Gold Price Today : ಭರ್ಜರಿ ಇಳಿಕೆ ಕಂಡ ಬಂಗಾರದ ಬೆಲೆ, ಬೆಳ್ಳಿ ಬೆಲೆ ಕೊಂಚ ಏರಿಕೆ

ನಿಮ್ಮ ನಗರದಲ್ಲಿ ಎಷ್ಟಿದೆ  ದರ ಎಷ್ಟು?
- ದೆಹಲಿ ಪೆಟ್ರೋಲ್ 96.72 ರೂ   ಡೀಸೆಲ್  89.62 ರೂ  ಪ್ರತಿ ಲೀಟರ್
- ಮುಂಬೈ ಪೆಟ್ರೋಲ್ 111.35  ರೂ ಡೀಸೆಲ್ 97.28  ರೂ ಪ್ರತಿ ಲೀಟರ್
- ಚೆನ್ನೈ ಪೆಟ್ರೋಲ್  102.63 ರೂ ಡೀಸೆಲ್ 94.24 ರೂ ಪ್ರತಿ ಲೀಟರ್ ಗೆ 94.24 ರೂ ಪ್ರತಿ ಲೀಟರ್
- ಕೋಲ್ಕತ್ತಾ ಪೆಟ್ರೋಲ್  106.03 ರೂ. ಮತ್ತು ಡಿಸೇಲ್ ಬೆಲೆ ಪ್ರತಿ ಲೀಟರ್ ಗೆ  92.76 ರೂ. 
- ಜೈಪುರದಲ್ಲಿ ಪೆಟ್ರೋಲ್  108.48 ರೂ ಮತ್ತು ಡೀಸೆಲ್ ಲೀಟರ್‌ಗೆ  93.72ರೂ
- ತಿರುವನಂತಪುರದಲ್ಲಿ ಪೆಟ್ರೋಲ್ 107.71 ರೂ  ಮತ್ತು ಡೀಸೆಲ್ ಲೀಟರ್‌ಗೆ  ರೂ 96.52 ರೂ  
- ಬೆಂಗಳೂರಿನಲ್ಲಿ ಪೆಟ್ರೋಲ್  101.94 ರೂ ಮತ್ತು ಡೀಸೆಲ್ ಲೀಟರ್‌ಗೆ 87.89 ರೂ
- ಭುವನೇಶ್ವರದಲ್ಲಿ ಪೆಟ್ರೋಲ್  103.19 ರೂ. ಮತ್ತು ಡೀಸೆಲ್ ಲೀಟರ್‌ಗೆ 94.76 ರೂ. 
- ಚಂಡೀಗಢದಲ್ಲಿ ಪೆಟ್ರೋಲ್  96.20 ರೂ. ಮತ್ತು ಡೀಸೆಲ್ ಲೀಟರ್‌ಗೆ  84.26 ರೂ.
- ಹೈದರಾಬಾದ್‌ನಲ್ಲಿ ಪೆಟ್ರೋಲ್ 109.66  ರೂ. ಮತ್ತು ಡೀಸೆಲ್ ಲೀಟರ್‌ಗೆ   97.82 ರೂ. 
 
ಇದನ್ನೂ ಓದಿ : Good News! ನಿವೃತ್ತಿಯ ವಯಸ್ಸು ಹಾಗೂ ಪೆನ್ಷನ್ ಮೊತ್ತ ಏರಿಕೆಯಾಗುವ ಸಾಧ್ಯತೆ, ಇಲ್ಲಿದೆ ಮೋದಿ ಸರ್ಕಾರದ ಪ್ಲಾನ್!

ಕಂಪನಿಗಳು ನಷ್ಟದಲ್ಲಿಯೇ  ಮಾರಾಟ ಮಾಡುತ್ತಿವೆ ತೈಲ  :
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ತೈಲವನ್ನು ನಷ್ಟದಲ್ಲಿ ಮಾರಾಟ ಮಾಡುತ್ತಿವೆ. ವಾಸ್ತವವಾಗಿ, ಕಚ್ಚಾ ತೈಲದ ಬೆಲೆಗೆ  ಹೋಲಿಸಿದರೆ ಈ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿಲ್ಲ. ಈ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 14 ರಿಂದ 18 ರೂ ಮತ್ತು ಪ್ರತಿ ಲೀಟರ್ ಡೀಸೆಲ್‌ಗೆ 20 ರಿಂದ 25 ರೂಗಳ ಮೇಲೆ ನಷ್ಟವನ್ನು ಅನುಭವಿಸುತ್ತಿವೆ. ಆದರೆ ಖಾಸಗಿ ತೈಲ ಕಂಪನಿಗಳಾದ ನೈರಾ ಎನರ್ಜಿ, ಜಿಯೋ-ಬಿಪಿ ಮತ್ತು ಶೆಲ್ ಈ ನಷ್ಟವನ್ನು ಭರಿಸುವ ಸ್ಥಿತಿಯಲ್ಲಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News