ನಿಷ್ಕ್ರಿಯ ಬ್ಯಾಂಕ್ ಖಾತೆಯಿಂದಲೂ ಹಣ ವಿತ್ ಡ್ರಾ ಮಾಡಬಹುದು- ಇಲ್ಲಿದ ಸುಲಭ ಮಾರ್ಗ
Withdraw Money from Inactive Account: ಯಾವುದೇ ಬ್ಯಾಂಕ್ ಖಾತೆಯಲ್ಲಿ ನೀವು ದೀರ್ಘಕಾಲದವರೆಗೆ ಬ್ಯಾಂಕ್ ಖಾತೆಗಳಲ್ಲಿ ವಹಿವಾಟುಗಳನ್ನು ಮಾಡದಿದ್ದರೆ ಅವುಗಳನ್ನು ನಿಷ್ಕ್ರಿಯ ಖಾತೆ ಎಂದು ಘೋಷಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆ ನಿಷ್ಕ್ರಿಯ ಖಾತೆಗಳಿಂದ ನೀವು ಹಣವನ್ನು ಹಿಂಪಡೆಯಬಹುದೇ? ಒಂದೊಮ್ಮೆ ಪಡೆಯಬಹುದಾದರೂ ಅದು ಹೇಗೆ ಸಾಧ್ಯ ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ...
ನಿಷ್ಕ್ರಿಯ ಖಾತೆಯಿಂದ ಹಣವನ್ನು ಹಿಂಪಡೆಯುವುದು ಹೇಗೆ: ಹಲವು ಬಾರಿ ಸಂಬಳದ ಸಲುವಾಗಿಯೋ ಅಥವಾ ಬೇರೆ ಇನ್ನಾವುದೇ ಕಾರಣಗಳಿಗಾಗಿ ಜನರು ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಯಬೇಕಾಗುತ್ತದೆ. ಆದರೆ, ನಾನಾ ಕಾರಣಗಳಿಂದಾಗಿ ಎಲ್ಲಾ ಖಾತೆಗಳಲ್ಲೂ ವಹಿವಾಟು ನಡೆಸುವುದು ಅಸಾಧ್ಯ. ಬ್ಯಾಂಕಿಂಗ್ ನಿಯಮಗಳ ಪ್ರಕಾರ ದೀರ್ಘಕಾಲದವರೆಗೆ ಯಾವುದೇ ವಹಿವಾಟುಗಳಿಲ್ಲದ ಖಾತೆಯನ್ನು ನಿಷ್ಕ್ರಿಯ ಖಾತೆ ಎಂದು ಹೇಳಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ, ಆ ಖಾತೆಯಲ್ಲಿರುವ ಮೊತ್ತವನ್ನು ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ (DEAF) ಹಾಕಲಾಗುತ್ತದೆ. ಆರ್‌ಬಿಐ ಬಳಿ ಇರುವ ಈ ಮೊತ್ತ ಪ್ರತಿ ವರ್ಷ ಹೆಚ್ಚಾಗುತ್ತಿದ್ದು, ಈಗ ಸುಮಾರು 40 ಸಾವಿರ ಕೋಟಿ ರೂಪಾಯಿಗೆ ತಲುಪಿದೆ. ನೀವೂ ಸಹ ಯಾವುದೇ ಬ್ಯಾಂಕ್‌ಗಳಲ್ಲಿ ನಿಷ್ಕ್ರಿಯ ಬ್ಯಾಂಕ್ ಖಾತೆಗಳನ್ನು ಹೊಂದಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಆ ನಿಷ್ಕ್ರಿಯ ಖಾತೆಗಳಿಂದ ಹಣವನ್ನು ಹಿಂಪಡೆಯುವ ಸಂಪೂರ್ಣ ಮಾರ್ಗ ಏನು ಎಂದು ತಿಳಿದಿರುವುದು ಬಹಳ ಮುಖ್ಯ.
ನಿಮ್ಮ ಖಾತೆಯಲ್ಲಿ ಎಷ್ಟು ಮೊತ್ತ ಬಾಕಿ ಇದೆ ಎಂದು ತಿಳಿಯಲು ಬ್ಯಾಂಕ್ ಅನ್ನು ಸಂಪರ್ಕಿಸಿ:
ಆರ್‌ಬಿಐ ಅಧಿಕಾರಿಗಳ ಪ್ರಕಾರ, ಮೊದಲು ನೀವು ಹಣವನ್ನು ಹಿಂಪಡೆಯಲು ಬಯಸುವ ನಿಷ್ಕ್ರಿಯ ಖಾತೆಯಲ್ಲಿ ಸ್ವಲ್ಪ ಮೊತ್ತವಿದೆಯೇ ಎಂದು ತಿಳಿಯುವುದು ಮುಖ್ಯ. ಇದಕ್ಕಾಗಿ ನೀವು ಬ್ಯಾಂಕ್‌ಗೆ ಹೋಗಿ ಸಂಪರ್ಕಿಸಬೇಕು. ಅಲ್ಲಿ ನೀವು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಹುಟ್ಟಿದ ದಿನಾಂಕ ಮತ್ತು ಖಾತೆದಾರರ ಹೆಸರು-ವಿಳಾಸವನ್ನು ತಿಳಿಸಬೇಕು. ನೀವು ನಿಜವಾಗಿಯೂ ಖಾತೆದಾರ ಅಥವಾ ಅದರ ನಾಮಿನಿಯೇ ಎಂದು ಖಚಿತವಾದ ಬಳಿಕ ಖಾತೆಯಲ್ಲಿರುವ ಮೊತ್ತದ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಅನೇಕ ಬ್ಯಾಂಕ್‌ಗಳು ತಮ್ಮ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಒದಗಿಸುತ್ತವೆ.
ಇದನ್ನೂ ಓದಿ- ಆರ್‌ಬಿಐನ ಹೊಸ ಆದೇಶ- ಈ ಬ್ಯಾಂಕ್‌ನಿಂದ 15,000 ಕ್ಕಿಂತ ಹೆಚ್ಚು ಹಣ ಡ್ರಾ ಮಾಡಲು ಸಾಧ್ಯವಿಲ್ಲ
ಕೆವೈಸಿ ನಂತರ ಕೈ ಸೇರಲಿದೆ ಹಣ:
ಹಣಕಾಸು ತಜ್ಞರ ಪ್ರಕಾರ, ನೀವೇ ಖಾತೆದಾರರಾಗಿದ್ದರೆ, ಬ್ಯಾಂಕ್ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಸಾಮಾನ್ಯ ವಿಚಾರಣೆ ನಂತರ ನಿಷ್ಕ್ರಿಯ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಬಡ್ಡಿಯೊಂದಿಗೆ ಹಿಂತಿರುಗಿಸುತ್ತಾರೆ. ನೀವು ಖಾತೆದಾರರಲ್ಲದೇ ಆ ಖಾತೆದಾರರ ನಾಮಿನಿಯಾಗಿದ್ದರೆ, ಹಣವನ್ನು ಮರಳಿ ಪಡೆಯಲು ಅವರಿಗೆ ಬೇರೆ ಮಾರ್ಗವಿದೆ. ಈ ಸಂದರ್ಭದಲ್ಲಿ, ನೀವು ಖಾತೆದಾರರನ್ನು ಬ್ಯಾಂಕಿಗೆ ಕರೆದೊಯ್ಯಬೇಕಾಗುತ್ತದೆ. ಒಂದೊಮ್ಮೆ ಖಾತೆದಾರರು ಮೃತಪಟ್ಟಿದ್ದರೆ ಅವರ ಮರಣ ಪ್ರಮಾಣಪತ್ರ ಮತ್ತು ಇತರ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇದರ ನಂತರ, ಬ್ಯಾಂಕ್ ಖಾತೆಯಲ್ಲಿರುವ ಮೊತ್ತವನ್ನು ಬಡ್ಡಿಯೊಂದಿಗೆ ನಾಮಿನಿಗೆ ಹಿಂದಿರುಗಿಸಲಾಗುತ್ತದೆ.
ಹಲವು ಸಂದರ್ಭಗಳಲ್ಲಿ ಬಹುತೇಕ ಜನರು ಖಾತೆಯಲ್ಲಿ ನಾಮಿನಿ ಹೆಸರನ್ನು ನಮೂದಿಸಿರುವುದಿಲ್ಲ. ಒಂದೊಮ್ಮೆ ಖಾತೆದಾರನು ಮರಣಹೊಂದಿದ್ದರೆ ಮತ್ತು ಅವನು ತನ್ನ ಖಾತೆಯಲ್ಲಿ ಯಾವುದೇ ಕುಟುಂಬದ ಸದಸ್ಯರನ್ನು ನಾಮಿನಿಯಾಗಿ ಮಾಡದಿದ್ದರೆ, ನೀವು ಅವರ ಪಾಸ್‌ಬುಕ್ ಮತ್ತು ಇತರ ಪೇಪರ್‌ಗಳೊಂದಿಗೆ ಬ್ಯಾಂಕ್ ಅನ್ನು ಸಂಪರ್ಕಿಸಬೇಕಾಗುತ್ತದೆ. ಇದರ ನಂತರ, ದೊಡ್ಡ ಮೊತ್ತವನ್ನು ಹಿಂಪಡೆಯಲು ಉತ್ತರಾಧಿಕಾರ ಪ್ರಮಾಣಪತ್ರವನ್ನು ಬ್ಯಾಂಕ್‌ಗೆ ಸಲ್ಲಿಸಬೇಕಾಗುತ್ತದೆ. ಇದರ ನಂತರ, ಬ್ಯಾಂಕ್ ಆಡಳಿತವು ಫಿರ್ಯಾದಿಯ ಅರ್ಜಿಯಿಂದ ತೃಪ್ತರಾದ ನಂತರ, 15 ದಿನಗಳಲ್ಲಿ ಹಕ್ಕು ಪಡೆಯದ ಮೊತ್ತವನ್ನು ಹಿಂದಿರುಗಿಸುತ್ತದೆ.
ಇದನ್ನೂ ಓದಿ- ಆನ್ಲೈನ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಯಲ್ಲಿನ ಅಡೆತಡೆಯಿಂದ ಮುಕ್ತಿ, ಈ ಆಪ್ ನಿಂದ ಕೆಲಸ ಸುಲಭ
ಖಾತೆಯಲ್ಲಿ ನಾಮಿನಿ ಏಕೆ ಅಗತ್ಯ?
ಯಾವುದೇ ಖಾತೆಯಲ್ಲಿ ನಾಮಿನಿ ಹೆಸರನ್ನು ನಮೂದಿಸುವುದು ಅಗತ್ಯ. ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ ನೀವು ಎಫ್‌ಡಿ ಅಥವಾ ಆರ್‌ಡಿ ಖಾತೆಯನ್ನು ತೆರೆದಿದ್ದರೆ ಮತ್ತು ಅದರಲ್ಲಿ 8 ವರ್ಷಗಳವರೆಗೆ ವಹಿವಾಟುಗಳನ್ನು ಮಾಡದಿದ್ದರೆ, ಅದು ನಿಷ್ಕ್ರಿಯವಾಗಿದೆ ಎಂದು ಘೋಷಿಸಲಾಗುತ್ತದೆ. ಆದರೆ ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಗೆ ಈ ಕಾಲಮಿತಿ ಕೇವಲ 2 ವರ್ಷಗಳು. ಅದರ ನಂತರ, ಆ ಖಾತೆಗಳನ್ನು ನಿಷ್ಕ್ರಿಯವೆಂದು ಘೋಷಿಸಿ, ಅವುಗಳಲ್ಲಿನ ಮೊತ್ತವನ್ನು DEAF ಗೆ ಕಳುಹಿಸಲಾಗುತ್ತದೆ. ಆದ್ದರಿಂದ, ನಿಮ್ಮ ಖಾತೆಗಳನ್ನು ನಿಷ್ಕ್ರಿಯಗೊಳಿಸುವುದನ್ನು ತಪ್ಪಿಸಲು, ಅವುಗಳಲ್ಲಿ ವಹಿವಾಟು ನಡೆಸುವುದು ಅವಶ್ಯಕ. ನೀವು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಚಲಾಯಿಸಲು ಬಯಸದಿದ್ದರೆ, ನಂತರ ಅರ್ಜಿಯನ್ನು ನೀಡಿ ನೀವು ಆ ಖಾತೆಯನ್ನು ಮುಚ್ಚಬಹುದು. ಹೀಗೆ ಮಾಡುವುದರಿಂದ ನೀವು ಅದರಲ್ಲಿರುವ ಹಣವನ್ನು ಮರಳಿ ಪಡೆಯುತ್ತೀರಿ. ಇದರೊಂದಿಗೆ, ಭವಿಷ್ಯದ ದೃಷ್ಟಿಯಿಂದ ನಿಮ್ಮ ಖಾತೆಯಲ್ಲಿ ನಾಮಿನಿ ಹೆಸರನ್ನು ಅಗತ್ಯವಾಗಿ ನಮೂದಿಸಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.