ನಿಮ್ಮ ಬಳಿ 50 ಪೈಸೆ ನಾಣ್ಯವಿದ್ದರೆ ರಾತ್ರೋರಾತ್ರಿ ಲಕ್ಷಾಧಿಪತಿಯಾಗಬಹುದು ..!

Sell Your Old 50 Paise Coin To Earn Money: 2011 ರಲ್ಲಿ ಬಿಡುಗಡೆಯಾಗಿರುವ 50 ಪೈಸೆಯ ನಾಣ್ಯವು  ವಿಶೇಷವಾಗಿದೆ. ಯಾಕೆಂದರೆ  2011 ರಲ್ಲಿ  ಭಾರತ ಸರ್ಕಾರವು 25 ಮತ್ತು 50 ಪೈಸೆಯ ನಾಣ್ಯಗಳ ಚಲಾವಣೆಯನ್ನು ಕೊನೆಗೊಳಿಸಿತ್ತು. 

Written by - Ranjitha R K | Last Updated : Jul 19, 2022, 11:47 AM IST
  • ನಿಮಗೂ ಇದೆಯೇ ಹಳೆಯ ನೋಟು ಸಂಗ್ರಹದ ಅಭ್ಯಾಸ
  • ನಿಮ್ಮ ಬಳಿ 2011 ರ ನಾಣ್ಯವಿದೆಯೇ ನೋಡಿಕೊಳ್ಳಿ
  • ಇದ್ದರೆ ಸೂಕ್ತ ವೇದಿಕೆ ನೋಡಿಕೊಂಡು ಮಾರಾಟ ಮಾಡಬಹುದು
ನಿಮ್ಮ ಬಳಿ 50 ಪೈಸೆ ನಾಣ್ಯವಿದ್ದರೆ ರಾತ್ರೋರಾತ್ರಿ  ಲಕ್ಷಾಧಿಪತಿಯಾಗಬಹುದು ..! title=
old coin sale (file photo)

ಬೆಂಗಳೂರು : Sell Your Old 50 Paise Coin To Earn Money : ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸ ಕೆಲವರಿಗೆ ಇರುತ್ತದೆ. ಈ ಅಭ್ಯಾಸವಿದ್ದರೆ ಲಕ್ಷಾಂತರ ರೂಪಾಯಿ ಗಳಿಸುವ ಅವಕಾಶವಿದೆ. ಏಕೆಂದರೆ ಮಾರುಕಟ್ಟೆಯಲ್ಲಿ ಅಪರೂಪದ ನೋಟುಗಳು ಮತ್ತು ನಾಣ್ಯಗಳು ಮಾರಾಟವಾಗುತ್ತಿವೆ. ಆನ್‌ಲೈನ್ ಕ್ಲಾಸಿಫೈಡ್ಸ್ ಪೋರ್ಟಲ್ ಒಎಲ್‌ಎಕ್ಸ್‌ನಲ್ಲಿ ಹಳೆಯ 50 ಪೈಸೆ ನಾಣ್ಯಗಳನ್ನು 1 ಲಕ್ಷ ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ.  

ನಿಮ್ಮ ಬಳಿ 2011 ರ ನಾಣ್ಯವಿದೆಯೇ ನೋಡಿಕೊಳ್ಳಿ : 
2011 ರಲ್ಲಿ ಬಿಡುಗಡೆಯಾಗಿರುವ 50 ಪೈಸೆಯ ನಾಣ್ಯವು ವಿಶೇಷವಾಗಿದೆ. ಯಾಕೆಂದರೆ  2011 ರಲ್ಲಿ  ಭಾರತ ಸರ್ಕಾರವು 25 ಮತ್ತು 50 ಪೈಸೆಯ ನಾಣ್ಯಗಳ ಚಲಾವಣೆಯನ್ನು ಕೊನೆಗೊಳಿಸಿತ್ತು.  2011 ರಲ್ಲಿ ಬಿಡುಗಡೆಯಾದ 50 ಪೈಸೆ ನಾಣ್ಯಗಳು ಈಗ ಸಂಗ್ರಹ ಯೋಗ್ಯವಾಗಿವೆ. ಈ ಕಾರಣದಿಂದಲೇ ಈ ನಾಣ್ಯವನ್ನು ಸಂಗ್ರಹಿಸುವಲ್ಲಿ ಜನ ಕೂಡಾ ಮುಂದಾಗುತ್ತಾರೆ. ಈ ಹಿನ್ನೆಲೆಯಲ್ಲಿ ಇಂಥಹ ನಾಣ್ಯ ನಿಮ್ಮ ಬಳಿ ಇದ್ದರೆ, ಅದನ್ನು ಮಾರಾಟ ಮಾಡಬಹುದು. 

ಇದನ್ನೂ ಓದಿ : Vegetable Price: ಹೇಗಿದೆ ಗೊತ್ತಾ ಈರುಳ್ಳಿ, ಟೊಮ್ಯಾಟೋ ಬೆಲೆ? ಇಲ್ಲಿದೆ ತರಕಾರಿ ದರದ ಸಂಪೂರ್ಣ ವಿವರ

ಹಳೆಯ ನಾಣ್ಯಗಳನ್ನು ಅನೇಕ ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ : 
ಹಳೆಯ ನಾಣ್ಯವನ್ನು ಮಾರಾಟ ಮಾಡಲು ಪ್ರೊಫೈಲ್ ಅನ್ನು OLX ನಲ್ಲಿ ರಚಿಸಬೇಕು. ಪ್ರೊಫೈಲ್ ರೆಡಿಯಾದ ನಂತರ, 50 ಪೈಸೆ ನಾಣ್ಯದ ಲಿಸ್ಟ್ ಮಾಡಬೇಕಾಗುತ್ತದೆ. ಇದಕ್ಕಾಗಿ  2011 ರಲ್ಲಿ ಬಿಡುಗಡೆಯಾದ ನಾಣ್ಯದ ಕೆಲವು ಫೋಟೋ ತೆಗೆದುಕೊಳ್ಳಬೇಕು. ಲಿಸ್ಟ್ ಲೈವ್ ಆದ ನಂತರ, ನಾಣ್ಯ ಖರೀದಿಸಲು ಆಸಕ್ತಿ ಇರುವವರು ನಿಮ್ಮನ್ನು ಸಂಪರ್ಕಿಸುತ್ತಾರೆ. ಆಗ ನೀವು ಮಾರಾಟ ಮಾಡಲು ಬಯಸುವ ಮೊತ್ತವನ್ನು ಗ್ರಾಹಕರಿಗೆ ತಿಳಿಸಬೇಕು. 

ಯಾವಾಗಲೂ ಮೋಸದ ಬಗ್ಗೆ ಎಚ್ಚರದಿಂದಿರಿ :
ತಮ್ಮ ಹಳೆಯ ಮತ್ತು ಸಂಗ್ರಹಿಸಬಹುದಾದ ನಾಣ್ಯಗಳು ಮತ್ತು ನೋಟುಗಳನ್ನು ಮಾರಾಟ ಮಾಡಲು ಇಂಡಿಯಾಮಾರ್ಟ್‌ನಂತಹ ವೆಬ್‌ಸೈಟ್‌ಗಳನ್ನು ಕೂಡಾ ಬಳಸಬಹುದು.  ಆದರೆ ಈ ಪ್ಲಾಟ್‌ಫಾರ್ಮ್‌ಗಳಲ್ಲಿ UPI ವಂಚನೆಗಳ ಬಗ್ಗೆ ಯಾವಾಗಲೂ ಎಚ್ಚರದಿಂದಿರಬೇಕು. 

ಇದನ್ನೂ ಓದಿ : Gold Price Today : ಇಂದು ಮಾರುಕಟ್ಟೆಯಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ಬೆಲೆ ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News