Gratuity New Rules: ಗ್ರ್ಯಾಚುಟಿ ಗೆ ಸಂಬಂಧಿಸಿದಂತೆ ಭಾರಿ ಸಂತಸದ ಸುದ್ದಿ ಪ್ರಕಟ, ಇಲ್ಲಿದೆ ವಿಸ್ತೃತ ಮಾಹಿತಿ

Gratuity New Rules: ಉದ್ಯೋಗಿಗಳಿಗೆ ಶುಭ ಸುದ್ದಿ. ಹೊಸ ಕಾರ್ಮಿಕ ಸಂಹಿತೆಗಳಲ್ಲಿ, ಉದ್ಯೋಗಿಗಳಿಗೆ ಗ್ರಾಚ್ಯುಟಿಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆಯಾಗಲಿದೆ. ಹೊಸ ನಿಯಮಗಳ ಅಡಿಯಲ್ಲಿ, ಗ್ರಾಚ್ಯುಟಿಯ ಅರ್ಹತೆಯನ್ನು 5 ವರ್ಷದಿಂದ 1 ವರ್ಷಕ್ಕೆ ಇಳಿಸಲಾಗುತ್ತದೆ. ಇತ್ತೀಚಿನ ನವೀಕರಣಗಳನ್ನು ತಿಳಿಯೋಣ.  

Written by - Nitin Tabib | Last Updated : Jul 19, 2022, 11:29 PM IST
  • ನೌಕರಿಯಲ್ಲಿ ನಿರತ ಉದ್ಯೋಗಿಗಳ ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ.
  • ದೇಶದಲ್ಲಿ ಕಾರ್ಮಿಕ ಹಿತಾಸಕ್ತಿ ಸುಧಾರಣೆಗಾಗಿ ಕೇಂದ್ರ ಸರ್ಕಾರವು 4 ಹೊಸ ಕಾರ್ಮಿಕ ಸಂಹಿತೆಗಳನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ.
  • ಈ ಕುರಿತು ಲೋಕಸಭೆಯಲ್ಲಿ ಕಾರ್ಮಿಕ ಖಾತೆ ರಾಜ್ಯ ಸಚಿವ ರಾಮೇಶ್ವರ ತೇಲಿ ಲಿಖಿತ ಮಾಹಿತಿ ನೀಡಿದ್ದಾರೆ.
Gratuity New Rules: ಗ್ರ್ಯಾಚುಟಿ ಗೆ ಸಂಬಂಧಿಸಿದಂತೆ ಭಾರಿ ಸಂತಸದ ಸುದ್ದಿ ಪ್ರಕಟ, ಇಲ್ಲಿದೆ ವಿಸ್ತೃತ ಮಾಹಿತಿ title=
Gratuity Update

Gratuity New Rules: ನೌಕರಿಯಲ್ಲಿ ನಿರತ ಉದ್ಯೋಗಿಗಳ ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ದೇಶದಲ್ಲಿ ಕಾರ್ಮಿಕ ಹಿತಾಸಕ್ತಿ ಸುಧಾರಣೆಗಾಗಿ ಕೇಂದ್ರ ಸರ್ಕಾರವು 4 ಹೊಸ ಕಾರ್ಮಿಕ ಸಂಹಿತೆಗಳನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಈ ಕುರಿತು ಲೋಕಸಭೆಯಲ್ಲಿ ಕಾರ್ಮಿಕ ಖಾತೆ ರಾಜ್ಯ ಸಚಿವ ರಾಮೇಶ್ವರ ತೇಲಿ ಲಿಖಿತ ಮಾಹಿತಿ ನೀಡಿದ್ದಾರೆ. ಅನೇಕ ರಾಜ್ಯಗಳು ವಿಭಿನ್ನ ಕೋಡ್‌ಗಳಿಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿವೆ. ಹೀಗಾಗಿ ಶೀಘ್ರದಲ್ಲೇ ಕೇಂದ್ರ ಸರ್ಕಾರ ಇದನ್ನು ಜಾರಿಗೆ ತರುವ ನಿರೀಕ್ಷೆ ಹೆಚ್ಚಾಗತೊಡಗಿದೆ.

ಹೊಸ ಕಾರ್ಮಿಕ ಸಂಹಿತೆಯಲ್ಲಿ ನಿಯಮಗಳು ಬದಲಾಗಲಿವೆ
ಹೊಸ ಕಾರ್ಮಿಕ ಸಂಹಿತೆ ಜಾರಿಯಾದ ನಂತರ ಉದ್ಯೋಗಿಗಳ ವೇತನ, ರಜೆ, ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿಯಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಇದರ ಅಡಿಯಲ್ಲಿ, ಕೆಲಸದ ಸಮಯ ಮತ್ತು ವಾರದ ನಿಯಮಗಳು ಕೂಡ ಬದಲಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರ ಜೊತೆಗೆ ಉದ್ಯೋಗಿಗಳು ಗ್ರಾಚ್ಯುಟಿಗಾಗಿ ಯಾವುದೇ ಸಂಸ್ಥೆಯಲ್ಲಿ 5 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡುವಂತೆ ಯಾವುದೇ ಒತ್ತಾಯವಿರುವುದಿಲ್ಲ ಎನ್ನಲಾಗಿದೆ. ಸರ್ಕಾರ ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ, ಆದರೆ ಹೊಸ ಕಾರ್ಮಿಕ ಕಾನೂನು ಜಾರಿಗೆ ಬಂದ ತಕ್ಷಣ ಈ ನಿಯಮ ಕೂಡ ಜಾರಿಗೆ ಬರಲಿದೆ ಎನ್ನಲಾಗುತ್ತಿದೆ.

ಎಷ್ಟು ಗ್ರಾಚ್ಯುಟಿ ಸಿಗುತ್ತದೆ ಗೊತ್ತಾ?
ಪ್ರಸ್ತುತ, ಗ್ರಾಚ್ಯುಟಿ ನಿಯಮದ ಅಡಿಯಲ್ಲಿ, ಯಾವುದೇ ಸಂಸ್ಥೆಯಲ್ಲಿ 5 ವರ್ಷಗಳನ್ನು ಪೂರೈಸಿದ ನಂತರವೇ ಉದ್ಯೋಗಿಗೆ ಗ್ರಾಚ್ಯುಟಿ ಲಾಭ ನೀಡಲಾಗುತ್ತದೆ. ಇದರ ಅಡಿಯಲ್ಲಿ, 5 ವರ್ಷಗಳು ಪೂರ್ಣಗೊಂಡ ನಂತರ ನೀವು ಕಂಪನಿಯನ್ನು ತೊರೆಯುವ ದಿನದಂದು ಆ ತಿಂಗಳ ನಿಮ್ಮ ಸಂಬಳದ ಆಧಾರದ ಮೇಲೆ ಗ್ರಾಚ್ಯುಟಿಯ ಲೆಕ್ಕಾಚಾರವನ್ನು ನಡೆಸಲಾಗುತ್ತದೆ. ಉದಾಹರಣೆಗೆ, ಒಬ್ಬ ಉದ್ಯೋಗಿ ಕಂಪನಿಯಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿದ್ದರೆ ಮತ್ತು ಕೊನೆಯ ತಿಂಗಳಲ್ಲಿ ಅವನ ಖಾತೆಗೆ 50 ಸಾವಿರ ರೂಪಾಯಿ ಬಂದಿದೆ ಎಂದರೆ, ಅವನ ಮೂಲ ವೇತನ 20 ಸಾವಿರ + ರೂ. 6 ಸಾವಿರ ರೂಪಾಯಿ ತುಟ್ಟಿಭತ್ಯೆಯಾಗಿದೆ. ಹೀಗಾಗಿ ಆತನ ಗ್ರಾಚ್ಯುಟಿಯನ್ನು 26 ಸಾವಿರ (ಮೂಲ ಮತ್ತು ತುಟ್ಟಿಭತ್ಯೆ) ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಕೆಲಸದ ದಿನಗಳನ್ನು ಗ್ರಾಚ್ಯುಟಿಯಲ್ಲಿ 26 ಎಂದು ಪರಿಗಣಿಸಲಾಗುತ್ತದೆ, ಇದರ ಪ್ರಕಾರ, ಲೆಕ್ಕಾಚಾರವನ್ನು ಹೇಗೆ ನಡೆಸಲಾಗುತ್ತದೆ ತಿಲಿಕುಕೊಳ್ಳೋಣ ಬನ್ನಿ,

ದಿನಕ್ಕೆ 26,000/26 ಅಂದರೆ 1000 ರೂಪಾಯಿ
15X1,000 = 15000
ಈಗ ಉದ್ಯೋಗಿ 15 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ಅವನು ಒಟ್ಟು 15X15,000 = 75000 ರೂಪಾಯಿಗಳನ್ನು ಗ್ರಾಚ್ಯುಟಿಯಾಗಿ ಪಡೆಯುತ್ತಾನೆ.

ಇದನ್ನೂ ಓದಿ-Online Tax Filing: ಆನ್ಲೈನ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಯಲ್ಲಿನ ಅಡೆತಡೆಯಿಂದ ಮುಕ್ತಿ, ಈ ಆಪ್ ನಿಂದ ಸಾಧ್ಯ

ಸಾಮಾಜಿಕ ಭದ್ರತಾ ಮಸೂದೆಯಲ್ಲಿ ಗ್ರಾಚ್ಯುಟಿಯನ್ನು ಉಲ್ಲೇಖಿಸಲಾಗಿದೆ
ನಮ್ಮ ಪಾಲುದಾರ ವೆಬ್‌ಸೈಟ್ Zee ಬ್ಯುಸಿನೆಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, 4 ಲೇಬರ್ ಕೋಡ್‌ಗಳಲ್ಲಿ, ಗ್ರಾಚ್ಯುಟಿಯ ನಿಯಮದ ಕುರಿತು ಮಾಹಿತಿಯನ್ನು ಸಾಮಾಜಿಕ ಭದ್ರತಾ ಮಸೂದೆ 2020 ರ ಅಧ್ಯಾಯ 5 ರಲ್ಲಿ ನೀಡಲಾಗಿದೆ ವಾಸ್ತವದಲ್ಲಿ, ಗ್ರಾಚ್ಯುಟಿಯು ಕಂಪನಿಯು ತನ್ನ ಯಾವುದೇ ಓರ್ವ ಉದ್ಯೋಗಿಗೆ ನೀಡುವ ಬಹುಮಾನವಾಗಿದೆ, ಉದ್ಯೋಗಿಯು ಕೆಲಸದ ಕೆಲವು ಷರತ್ತುಗಳನ್ನು ಪೂರೈಸಿದರೆ, ನಿಗದಿತ ಸೂತ್ರದ ಅಡಿಯಲ್ಲಿ ಖಾತರಿಯೊಂದಿಗೆ ಗ್ರಾಚ್ಯುಟಿ ಪಾವತಿಸಲಾಗುತ್ತದೆ. ಗ್ರಾಚ್ಯುಟಿಯ ಕೇವಲ ಅತ್ಯಲ್ಪ ಭಾಗವನ್ನು ಉದ್ಯೋಗಿಯ ಸಂಬಳದಿಂದ ಕಡಿತಗೊಳಿಸಲಾಗುತ್ತದೆ ಮತ್ತು ಹೆಚ್ಚಿನ ಭಾಗವನ್ನು ಪಾವತಿಸಲಾಗುತ್ತದೆ.

ಇದನ್ನೂ ಓದಿ-Electric Vehicles: ಎಲೆಕ್ಟ್ರಿಕ್ ವಾಹನ ಖರೀದಿಸಲು ಇದು ಸೂಕ್ತ ಸಮಯವೇ..?

1 ವರ್ಷದ ಸೇವೆ ಸಲ್ಲಿಸಿದ ಬಳಿಕವೂ ಗ್ರಾಚ್ಯುಟಿ ಲಾಭ ಸಿಗಲಿದೆಯೇ?
ಲೋಕಸಭೆಯಲ್ಲಿ ಸಲ್ಲಿಸಲಾದ ಕರಡು ಪ್ರತಿಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಯಾವುದೇ ಉದ್ಯೋಗಿ ಯಾವುದೇ ಸ್ಥಳದಲ್ಲಿ ಒಂದು ವರ್ಷ ಕೆಲಸ ಮಾಡಿದ್ದರೆ, ಉದ್ಯೋಗಿಯು ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ. ನಿಗದಿತ ಅವಧಿಯ ನೌಕರರಿಗೆ ಅಂದರೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ವ್ಯವಸ್ಥೆಯನ್ನು ಮಾಡಿದೆ. ಒಬ್ಬ ವ್ಯಕ್ತಿಯು ಒಂದು ವರ್ಷದ ನಿಗದಿತ ಅವಧಿಗೆ ಕಂಪನಿಯೊಂದಿಗೆ ಒಪ್ಪಂದದ ಮೇಲೆ ಕೆಲಸ ಮಾಡಿದ್ದರೆ, ಅವನೂ ಕೂಡ ಗ್ರಾಚ್ಯುಟಿಯನ್ನು ಪಡೆಯಲಿದ್ದಾನೆ. ಇದರ ಹೊರತಾಗಿ, ನಿಗದಿತ ಅವಧಿಯ ಉದ್ಯೋಗಿಗಳು ಮಾತ್ರ ಗ್ರಾಚ್ಯುಟಿ ಕಾಯ್ದೆ 2020 ರ ಪ್ರಯೋಜನವನ್ನು ಪಡೆಯುತ್ತಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News