ನವದೆಹಲಿ : ಕರೋನಾ (Coronavirus) ಅವಧಿಯಲ್ಲಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಪರಿಸ್ಥಿತಿಯಲ್ಲಿ ಹಣದ ಕೊರತೆ ಎದುರಾಗದೇ ಇರದು. ಕೈಯಲ್ಲಿ ಕೆಲಸವಿಲ್ಲದ ಸಂದರ್ಭದಲ್ಲಿ ಸಾಲ ಪಡೆಯುವುದು ಕೂಡಾ ಸುಲಭವಲ್ಲ. ಆದರೆ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ತನ್ನ ಪಾಲಿಸಿಯ ಮೇಲೆ ಸಾಲ ನೀಡಲಿದೆ. ಅದು ಕೂಡಾ ಕಡಿಮೆ ಬಡ್ಡಿದಲ್ಲಿ. 


COMMERCIAL BREAK
SCROLL TO CONTINUE READING

ಇದು ಸುರಕ್ಷಿತ ಸಾಲ : 
ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ತನ್ನ ವಿಮಾ ಪಾಲಿಸಿಯ ಮೇಲೆ ವೈಯಕ್ತಿಕ ಸಾಲವನ್ನು ನೀಡುತ್ತದೆ. ಪ್ರಯಾಣ, ಉನ್ನತ ಶಿಕ್ಷಣ, ವೈದ್ಯಕೀಯ ತುರ್ತುಸ್ಥಿತಿ, ವಿವಾಹ, ಮನೆ ರಿಪೇರಿ ಮುಂತಾದ ಖರ್ಚುಗಳಿಗಾಗಿ ಈ ಸಾಲವನ್ನು (Loan) ತೆಗೆದುಕೊಳ್ಳಬಹುದು. ಇದರಲ್ಲಿ, ನಿಮ್ಮ ವಿಮಾ ಪಾಲಿಸಿಯನ್ನು ಭದ್ರತೆಯಾಗಿ ಇರಿಸಲಾಗುತ್ತದೆ. ಒಂದು ವೇಳೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ವಿಮಾ ಪಾಲಿಸಿಯ ಮುಕ್ತಾಯ ಅಥವಾ ಕ್ಲೈಮ್ ಮೊತ್ತದಿಂದ ಎಲ್ಐಸಿ ಅದನ್ನು ಸರಿದೂಗಿಸಬಹುದು.


ಇದನ್ನೂ ಓದಿ :  New Wage Code: ಇನ್ನು ಸಿಗಲಿದೆ 300 ದಿನಗಳ Earned Leave! ಮೂರು ದಿನಗಳ ವಾರದ ರಜೆ ?


ಮುಕ್ತಾಯ ಅವಧಿಯವರೆಗೆ ಪಾವತಿಸಬಹುದು :
ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ (LIC) ಸಾಲ ತೆಗೆದುಕೊಳ್ಳುವ ಕನಿಷ್ಠ ಅಧಿಕಾರಾವಧಿ 6 ತಿಂಗಳುಗಳು. ಆದರೆ ಸಂಪೂರ್ಣ ಮುಕ್ತಾಯದ ಅವಧಿಯವರೆಗೆ ಅದನ್ನು ಮರುಪಾವತಿಸಬಹುದು. ಇದರೊಂದಿಗೆ, ಎಲ್‌ಐಸಿ ಸಾಲದ ಮೇಲೆ ಬಡ್ಡಿಯನ್ನು (Interest) ಪಾವತಿಸುತ್ತಲೇ ಇರಬೇಕಾಗುತ್ತದೆ. ನಂತರದ ಮೊತ್ತವನ್ನು ಮೆಚ್ಯೂರಿಟಿ ಮೊತ್ತದಿಂದ ಕಡಿತಗೊಳಿಸಬಹುದು. ಟರ್ಮ್ ಪ್ಲ್ಯಾನ್‌ಗಳಲ್ಲಿ (Term plan) ಈ ಸೌಲಭ್ಯ ಇರುವುದಿಲ್ಲ.


ಸಾಲದ ಬಡ್ಡಿದರ:
ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಯಿಂದ ತೆಗೆದುಕೊಳ್ಳುವ ಸಾಲಕ್ಕೆ ಕಡಿಮೆ ಬಡ್ಡಿದರ ವಿಧಿಸಲಾಗುತ್ತದೆ. ಇದೀಗ ಎಲ್‌ಐಸಿ ಇದಕ್ಕಾಗಿ ಶೇಕಡಾ 10.5 ರಷ್ಟು ಬಡ್ಡಿಯನ್ನು ವಿಧಿಸುತ್ತಿದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಬ್ಯಾಂಕುಗಳು (Bank) ಅಥವಾ ಸಂಸ್ಥೆಗಳ ಬಡ್ಡಿದರಕ್ಕಿಂತ ಕಡಿಮೆಯಾಗಿದೆ. 


ಇದನ್ನೂ ಓದಿ : EPFO: 6 ಕೋಟಿ ಇಪಿಎಫ್‌ಒ ಚಂದಾದಾರರಿಗೆ ಮಹತ್ವದ ಮಾಹಿತಿ! ಪಿಂಚಣಿ, ಪಿಎಫ್ ಖಾತೆಗಳು ಪ್ರತ್ಯೇಕವಾಗಬಹುದು, ಕಾರಣವೇನು ಗೊತ್ತೇ?


ಸಾಲ ಪಡೆಯಬೇಕಾದರೆ ಈ ದಾಖಲೆಗಳಿರಬೇಕು :
ಎಲ್‌ಐಸಿಯಿಂದ ಸಾಲ ತೆಗೆದುಕೊಳ್ಳಲು, ಆಧಾರ್ ಕಾರ್ಡ್ (Aadhaar), ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಮತ್ತು ರೆಸಿಡೆನ್ಶಿಯಲ್ ಪ್ರೂಫ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಯುಟಿಲಿಟಿ ಬಿಲ್, ವೇತನ ಸ್ಲಿಪ್, ಬ್ಯಾಂಕ್ ಸ್ಟೇಟ್‌ಮೆಂಟ್‌ (Bank statement) ಅಗತ್ಯವಾಗಿರುತ್ತದೆ. ಸಾಲವನ್ನು ಪಡೆಯಬೇಕಾದ ಖಾತೆಯ ಕ್ಯಾನ್ಸಲ್ಡ್ ಚೆಕ್ ಕೂಡಾ ನೀಡಬೇಕಾಗುತ್ತದೆ. 


ಷರತ್ತುಗಳು ಏನಿರುತ್ತವೆ : 
ಅರ್ಜಿದಾರರ ಕನಿಷ್ಠ ವಯಸ್ಸು 18 ವರ್ಷಗಲಾಗಿರಬೇಕು. ಅರ್ಜಿದಾರನು ಮಾನ್ಯ ಎಲ್ಐಸಿ ಪಾಲಿಸಿ ಹೊಂದಿರಬೇಕು. ಟರ್ಮ್ ಪಾಲಿಸಿ ಮೇಲೆ ಈ ಸಾಲವನ್ನು ಪಡೆಯಲಾಗುವುದಿಲ್ಲ.  ಎಲ್‌ಐಸಿ ಪ್ರೀಮಿಯಂ ಅನ್ನು ಕನಿಷ್ಠ 3 ವರ್ಷಗಳವರೆಗೆ ಪಾವತಿಸಿರಬೇಕು. 


ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು :
ನೀವು ಆನ್‌ಲೈನ್ ಅಥವಾ ಆಫ್‌ಲೈನ್ ಮೋಡ್ ಮೂಲಕ ಎಲ್‌ಐಸಿ ಪಾಲಿಸಿ (LIC policy) ಮೇಲೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಎಲ್ಐಸಿ ಕಚೇರಿಗೆ ಭೇಟಿ ನೀಡಿ ಮತ್ತು ಸಾಲದ ಅರ್ಜಿಯನ್ನು ಅನ್ವಯವಾಗುವ ಕೆವೈಸಿ ದಾಖಲೆಗಳೊಂದಿಗೆ ಭರ್ತಿ ಮಾಡಿ ಮತ್ತು ಪಾಲಿಸಿಯ ಮೂಲ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ.  


ಇದನ್ನೂ ಓದಿ : ಉದ್ಯೋಗ ಕಳೆದುಕೊಂಡಿದ್ದೀರಾ ? ಹಾಗಿದ್ದರೆ ESIC ಯೋಜನೆ ಮೂಲಕ ಸಿಗಲಿದೆ ನಿರುದ್ಯೋಗ ಭತ್ಯೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.