New Jeevan Shanti Policy: ಒಮ್ಮೆ ಹೂಡಿಕೆ ಮಾಡಿದರೆ ಸಾಕು ಜೀವನಪೂರ್ತಿ ಸಿಗಲಿದೆ ಪಿಂಚಣಿ

New Jeevan Shanti Policy : ಎಲ್‌ಐಸಿ ಹೊಸ ಜೀವನ್ ಶಾಂತಿ ಪಾಲಿಸಿಯನ್ನು ಆರಂಭಿಸಿದೆ. ಈ ಪಾಲಿಸಿಯ ದೊಡ್ಡ ವೈಶಿಷ್ಟ್ಯವೆಂದರೆ ಅದರಲ್ಲಿ ಲಭ್ಯವಿರುವ ಪಿಂಚಣಿ.  ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ, ಜೀವನಪೂರ್ತಿ ಮಾಸಿಕ ಪಿಂಚಣಿ ಪಡೆಯಬಹುದು. 

Written by - Ranjitha R K | Last Updated : Jun 21, 2021, 10:09 AM IST
  • ಎಲ್‌ಐಸಿ ಹೊಸ ಜೀವನ್ ಶಾಂತಿ ಪಾಲಿಸಿ ಆರಂಭ
  • ಒಮ್ಮೆ ಹೂಡಿಕೆ ಮಾಡಿದರೆ ಜೀವನಪೂರ್ತಿ ಪಿಂಚಣಿ
  • ಪಾಲಿಸಿಯ ಲಾಭದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ
New Jeevan Shanti Policy: ಒಮ್ಮೆ ಹೂಡಿಕೆ ಮಾಡಿದರೆ ಸಾಕು ಜೀವನಪೂರ್ತಿ ಸಿಗಲಿದೆ ಪಿಂಚಣಿ  title=
ಎಲ್‌ಐಸಿ ಹೊಸ ಜೀವನ್ ಶಾಂತಿ ಪಾಲಿಸಿ ಆರಂಭ (photo zee news)

ನವದೆಹಲಿ : New Jeevan Shanti Policy : ಎಲ್‌ಐಸಿ ಹೊಸ ಜೀವನ್ ಶಾಂತಿ ಪಾಲಿಸಿಯನ್ನು ಆರಂಭಿಸಿದೆ. ಈ ಪಾಲಿಸಿಯ ದೊಡ್ಡ ವೈಶಿಷ್ಟ್ಯವೆಂದರೆ ಅದರಲ್ಲಿ ಲಭ್ಯವಿರುವ ಪಿಂಚಣಿ.  ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ, ಜೀವನಪೂರ್ತಿ ಮಾಸಿಕ ಪಿಂಚಣಿ (Life long pension) ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ನಿವೃತ್ತಿಯ ನಂತರ ಖರ್ಚುಗಳನ್ನು ಸುಲಭವಾಗಿ ಪೂರೈಸಬಹುದು. ಜೀವನ್ ಶಾಂತಿ  ಪಾಲಿಸಿಯಲ್ಲಿ (Jeevan Shanti Policy) ಎರಡು ಆಯ್ಕೆಗಳಿವೆ. ಮೊದಲನೆಯದು ಇಮಿಡಿಯೆಟ್ ಎನ್ಯುಟಿ ಮತ್ತು ಎರಡನೆಯದು ಡೆಫರ್ಡ್ ಎನ್ಯುಟಿ. 

ಮೊದಲ ಅಂದರೆ ಇಮಿಡಿಯೆಟ್ ಎನ್ಯುಟಿ ಅಡಿಯಲ್ಲಿ ಪಾಲಿಸಿಯನ್ನು ಖರೀಸಿದ ತಕ್ಷಣ ಪಿಂಚಣಿ ಆರಂಭವಾಗುತ್ತದೆ. ಇದು ಎಲ್‌ಐಸಿಯ ಜೀವನ್ ಅಕ್ಷಯ್‌ ಪಾಲಿಸಿಯನ್ನು ಹೋಲುತ್ತದೆ. ಡೆಫರ್ಡ್ ಎನ್ಯುಟಿಯಲ್ಲಿ  ಪಾಲಿಸಿ ಖರೀದಿಯ 5, 10, 15 ಅಥವಾ 20 ವರ್ಷಗಳ ನಂತರ ಪಿಂಚಣಿ ಸೌಲಭ್ಯ ಲಭ್ಯವಿರುತ್ತದೆ.  

ಇದನ್ನೂ ಓದಿ : ದುಬಾರಿ ಪೆಟ್ರೋಲ್ ಜಾಗಕ್ಕೆ ಬರಲಿದೆ ಪರ್ಯಾಯ ಇಂಧನ. ಬೆಲೆ ಕೇವಲ 62 ರೂ./ಲೀ

ಪಿಂಚಣಿ ಎಷ್ಟು ಸಿಗಲಿದೆ (How Much Pension Will Be Received): 
ಈ ಯೋಜನೆಯಡಿ ಪಿಂಚಣಿ ಮೊತ್ತವನ್ನು ನಿಗದಿಪಡಿಸಲಾಗಿಲ್ಲ. ನಿಮ್ಮ ಹೂಡಿಕೆ, ವಯಸ್ಸು ಮತ್ತು ಡಿಫರ್ ಮೆಂಟ್ ಪೀರಿಯೆಡ್ ಗೆ  ಅನುಗುಣವಾಗಿ ಪಿಂಚಣಿಯನ್ನು ಪಡೆಯಬಹುದು. ಹೂಡಿಕೆ ಮತ್ತು ಪಿಂಚಣಿ (Pension) ಪ್ರಾರಂಭದ ನಡುವಿನ ಅವಧಿ ಎಷ್ಟು ಹೆಚ್ಚಿರುತ್ತದೋ ಪಿಂಚಣಿಯೂ ಅದೇ ಆಧಾರದಲ್ಲಿ ಸಿಗಲಿದೆ. ನಿಮ್ಮ ಹೂಡಿಕೆಯ ಶೇಕಡಾವಾರು ಪ್ರಕಾರ ಎಲ್ಐಸಿ (LIC) ಪಿಂಚಣಿ ನೀಡುತ್ತದೆ.

ಯಾರಿಗೆ ಸಿಗಲಿದೆ  ಪಾಲಿಸಿಯ ಲಾಭ (People Of This Age Can Take Benefits) :
ಎಲ್ಐಸಿಯ (LIC Policy) ಈ ಯೋಜನೆಯನ್ನು ಕನಿಷ್ಠ 30 ವರ್ಷಗಳು ಮತ್ತು ಗರಿಷ್ಠ 85 ವರ್ಷಗಳವರೆಗೆ ತೆಗೆದುಕೊಳ್ಳಬಹುದು. ಇದಲ್ಲದೆ, ಜೀವನ್ ಶಾಂತಿ ಯೋಜನೆಯಲ್ಲಿ ಪಿಂಚಣಿ ಪ್ರಾರಂಭಿಸಿದ 1 ವರ್ಷದ ನಂತರ ಸಾಲವನ್ನು ಪಡೆಯಬಹುದು. ಮತ್ತು ಪಿಂಚಣಿ ಪ್ರಾರಂಭವಾದ 3 ತಿಂಗಳ ನಂತರ ಅದನ್ನು ಸರೆಂಡರ್ ಮಾಡಬಹುದು. ಎರಡೂ ಆಯ್ಕೆಗಳಿಗೆ ಪಾಲಿಸಿ ಖರೀದಿ ವೇಳೆ, ವಾರ್ಷಿಕ ದರಗಳನ್ನು ಖಾತರಿಪಡಿಸಲಾಗುತ್ತದೆ. ಯೋಜನೆಯ ಅಡಿಯಲ್ಲಿ ವಿವಿಧ ವರ್ಷಾಶನ ಆಯ್ಕೆಗಳು ಮತ್ತು ವರ್ಷಾಶನ ಪಾವತಿಯ ವಿಧಾನಗಳು ಲಭ್ಯವಿದೆ. ಆದರೆ ಈ ಪಾಲಿಸಿಯನ್ನ ಖರೀದಿ ವೇಳೆ ಆಯ್ಕೆ ಮಾಡುವ ಆಯ್ಕೆಯನ್ನು ಮತ್ತೆ ಬದಲಾಯಿಸುವುದು ಸಾಧ್ಯವಿಲ್ಲ ಎನ್ನುವುದು ನೆನಪಿರಲಿ. ಈ ಪಾಲಿಸಿಯನ್ನು ಆಫ್‌ಲೈನ್‌ನಲ್ಲಿ (offline) ಮತ್ತು ಆನ್‌ಲೈನ್‌ನಲ್ಲಿ ಖರೀದಿಸಬಹುದು.

ಇದನ್ನೂ ಓದಿ : Gold Hallmarking ನಿಯಮದ ಬಳಿಕ ಮನೆಯಲ್ಲಿಟ್ಟ ಚಿನ್ನ ಏನಾಗಲಿದೆ, ಹಾಲ್ಮಾರ್ಕಿಂಗ್ ಮಾಡಿಸಬೇಕೆ? ಬೇಡವೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News