SBI Debit Card ಕಳೆದಿದೆಯೇ? ಇಲ್ಲಿದೆ ಮತ್ತೊಂದು ಕಾರ್ಡ್ ಪಡೆಯುವ ಸುಲಭ ವಿಧಾನ
ಫೋನ್ ಕಾಲ್ ಮೂಲಕವೂ ಕಾರ್ಡ್ನ್ನು ಬ್ಲಾಕ್ ಮಾಡಬಹುದಾಗಿದೆ.
ದೇಶದ ಪ್ರತಿಷ್ಟಿತ ಬ್ಯಾಂಕ್ ಎಸ್ಬಿಐ ತನ್ನ ಗ್ರಾಹಕರಿಗೆ ಡೆಬಿಟ್ ಕಾರ್ಡ್ ಕಳೆದುಕೊಂಡಲ್ಲಿ ಅದನ್ನ ಬ್ಲಾಕ್ ಮಾಡುವ ಕೆಲಸವನ್ನ ಫೋನ್ ಕಾಲ್ ಹಾಗೂ ಎಸ್ಎಂಎಸ್ ಮೂಲಕವೇ ಮಾಡುವ ಸೌಲಭ್ಯವನ್ನ ಒದಗಿಸಿದೆ. ಡೆಬಿಟ್ ಕಾರ್ಡ್ ಕಳೆದು ಹೋದಲ್ಲಿ ಇಲ್ಲವೇ ಕಳುವಾದಲ್ಲಿ ಕಾರ್ಡ್ನ್ನ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ಗ್ರಾಹಕರು ಆದಷ್ಟು ಬೇಗ ತಮ್ಮ ಕಾರ್ಡ್ಗಳನ್ನ ಬ್ಲಾಕ್ ಮಾಡಬೇಕು.
ಹೀಗಾಗಿ ನೀವು ನಿಮ್ಮ ಎಸ್ಬಿಐ ಡೆಬಿಟ್ ಕಾರ್ಡ್(SBI Debit Card)ನ್ನು ಕಳೆದುಕೊಂಡ ಕೂಡಲೇ ಮೆಸೇಜ್ ಇಲ್ಲವೇ ಫೋನ್ ಕಾಲ್ ಮೂಲಕ ಕಾರ್ಡ್ನ್ನು ಬ್ಲಾಕ್ ಮಾಡಬಹುದು. ಇದಕ್ಕಾಗಿ ನೀವು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ BLOCK ಎಂದು ಟೈಪ್ ಮಾಡಿ ಬಳಿಕ ನಿಮ್ಮ ಕಾರ್ಡ್ನ ಕೊನೆಯ ನಾಲ್ಕು ಸಂಖ್ಯೆಯನ್ನ ನಮೂದಿಸಿ 567676ಗೆ ಎಸ್ಎಂಎಸ್ ಮಾಡಿ. ನಿಮ್ಮ ಬ್ಲಾಕ್ ಆಯ್ಕೆ ಯಶಸ್ವಿಯಾಗುತ್ತಿದ್ದಂತೆಯೇ ಬ್ಯಾಂಕ್ನಿಂದ ನಿಮಗೆ ದೃಢೀಕರಣ ಮೆಸೇಜ್ ಬರಲಿದೆ.
Gold-Silver Rate:ಆಭರಣ ಖರೀದಿಸಬೇಕಾ? ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ ವಿವರ!
ಫೋನ್ ಕಾಲ್ ಮೂಲಕವೂ ಕಾರ್ಡ್ನ್ನು ಬ್ಲಾಕ್ ಮಾಡಬಹುದಾಗಿದೆ. ಎಸ್ಬಿಐ ಸಹಾಯವಾಣಿ ಸಂಖ್ಯೆ(SBI Help Line Number) 18004253800 or 1800112211ಗೆ ಕರೆ ಮಾಡಿ ಕಾರ್ಡ್ನ್ನು ಬ್ಲಾಕ್ ಮಾಡಬಹುದು.
ಫೋನ್ ಕಾಲ್ ಮೂಲಕ ಎಸ್ಬಿಐ ಕಾರ್ಡ್ ಬ್ಲಾಕ್ ಮಾಡೋದು ಹೇಗೆ:
1800 112 211 ಸಂಖ್ಯೆಗೆ ಕರೆ(Customer Care) ಮಾಡಿ
ಎಸ್ಬಿಐ ಕಾರ್ಡ್ ಬ್ಲಾಕ್ ಮಾಡಲು 2ನ್ನು ಒತ್ತಿ
'ವಿಮಾ ಕಂಪನಿಗಳು ಆರೋಗ್ಯ ವಿಮೆಯ ಪ್ರಿಮಿಯಂ ಹೆಚ್ಚಿಸುವಂತಿಲ್ಲ'
ನಿಮ್ಮ ಬ್ಯಾಂಕ್ ಖಾತೆ(Bank Account)ಯ ಕೊನೆಯ 5 ಸಂಖ್ಯೆಯನ್ನ ನಮೂದಿಸಿ
ಕಾರ್ಡ್ ಬ್ಲಾಕ್ ಆಗಿರೋದ್ರ ಬಗ್ಗೆ ಎಸ್ಎಂಎಸ್(SMS) ಮೂಲಕ ಎಸ್ಬಿಐ ಮಾಹಿತಿ ನೀಡಲಿದೆ.
ಹೊಸ ಡೆಬಿಟ್ ಕಾರ್ಡ್ ಪಡೆಯಲು ಈ ಮಾರ್ಗಗಳನ್ನ ಬಳಸಿ: ವೆಬ್ಸೈಟ್: sbicard.com ಗೆ ಲಾಗಿನ್ ಆಗಿ ನೀವು ಹೊಸ ಕಾರ್ಡ್(New Card)ಗೆ ಮನವಿ ಸಲ್ಲಿಸಬಹುದಾಗಿದೆ. ರಿಕ್ವೆಸ್ಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಬಳಿಕ ರಿ ಇಶ್ಯೂ / ರಿಪ್ಲೇಸ್ ಕಾರ್ಡ್ ಸೆಲೆಕ್ಟ್ ಮಾಡಿ. ಕಾರ್ಡ್ ನಂಬರ್ನ್ನು ಆಯ್ಕೆ ಮಾಡಿ ಸಬ್ಮಿಟ್ ಕೊಡಿ.
EPFO update : ಕೆಲಸ ಬದಲಾಯಿತೆಂದು ಪಿಎಫ್ ವಿತ್ ಡ್ರಾ ಮಾಡಿದರೆ ಆಗಲಿದೆ ಭಾರೀ ನಷ್ಟ
ಮೊಬೈಲ್ ಅಪ್ಲಿಕೇಶನ್: ಎಸ್ಬಿಐ ಮೊಬೈಲ್ ಅಪ್ಲಿಕೇಶನ್ ಅಲ್ಲಿ ಲಾಗಿನ್ ಆಗಿ ಮೆನು ಟ್ಯಾಬ್(Menu Tab)ನಲ್ಲಿ ಸರ್ವೀಸ್ ರಿಕ್ವೆಸ್ಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇಲ್ಲಿ ರಿ ಇಶ್ಯೂ / ರಿಪ್ಲೇಸ್ ಕಾರ್ಡ್ ಆಯ್ಕೆ ಮಾಡಿ. ಕಾರ್ಡ್ ನಂಬರ್ ಆಯ್ಕೆ ಮಾಡಿ ಸಬ್ಮಿಟ್ ಕೊಡಿ.
ಇ ಮೇಲ್: sbicard.com/email ಗೆ ಅಧಿಕೃತ ಮೇಲ್ ಬರೆಯಬಹುದು.
ಸಹಾಯವಾಣಿ: 1800 425 3800 ಸಂಖ್ಯೆಗೆ ಕರೆ ಮಾಡಿ.
ಹೊಸ ಕಾರ್ಡ್ಗಾಗಿ ನೀವು 100 ರೂಪಾಯಿ ಹಾಗೂ ಕೆಲ ತೆರಿಗೆ ಮೊತ್ತವನ್ನ ಪಾವತಿ ಮಾಡಬೇಕು. ಹೊಸ ಕಾರ್ಡ್ಗೆ ವಿನಂತಿ ಸಲ್ಲಿಸಿದ 7 ದಿನಗಳಲ್ಲಿ ನಿಮ್ಮ ಕೈ ಸೇರಲಿದೆ.
Reliance Jio: ಗ್ರಾಹಕರಿಗೆ 'ಭಾರಿ ಅಗ್ಗದ ಪ್ಲಾನ್ ನೀಡಿದ 'ರಿಲಾಯನ್ಸ್ ಜಿಯೋ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.