Gold-Silver Rate:ಆಭರಣ ಖರೀದಿಸಬೇಕಾ? ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ ವಿವರ!

ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹46,090 ರೂಪಾಯಿಗೆ ತಲುಪಿದೆ.

Last Updated : Mar 20, 2021, 12:44 PM IST
  • ನಿರಂತರವಾಗಿ ಇಳಿಕೆ ಕಾಣುತ್ತಿದ್ದ ಬಂಗಾರದ ದರ ಚಿನ್ನಾಭರಣ ಪ್ರಿಯರ ಮೊಗದಲ್ಲಿ ಸಂತಸದ ನಗೆ ಮೂಡಿಸಿತ್ತು.
  • 1 ವಾರದಿಂದ ಬೆಲೆಯಲ್ಲಿ ಏರಿಳಿತ ಕಂಡಿತ್ತು.
  • ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹46,090 ರೂಪಾಯಿಗೆ ತಲುಪಿದೆ.
Gold-Silver Rate:ಆಭರಣ ಖರೀದಿಸಬೇಕಾ? ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ ವಿವರ! title=

ಬೆಂಗಳೂರು: ಕಳೆದ ಕೆಲದಿನಗಳಿಂದ ನಿರಂತರವಾಗಿ ಇಳಿಕೆ ಕಾಣುತ್ತಿದ್ದ ಬಂಗಾರದ ದರ ಚಿನ್ನಾಭರಣ ಪ್ರಿಯರ ಮೊಗದಲ್ಲಿ ಸಂತಸದ ನಗೆ ಮೂಡಿಸಿತ್ತು. ಆದರೆ 1 ವಾರದಿಂದ ಬೆಲೆಯಲ್ಲಿ ಏರಿಳಿತ ಕಂಡಿತ್ತು. ಶನಿವಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ಇಳಿಕೆ ಕಂಡು ₹4,506ರೂಪಾಯಿ ದಾಖಲಾಗಿದೆ.

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು (ಶನಿವಾರ) ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆ(Gold Rate)ಗೆ 10 ರೂ ಇಳಿಕೆ ಕಂಡು, ₹42,250 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹46,090 ರೂಪಾಯಿಗೆ ತಲುಪಿದೆ.

'ವಿಮಾ ಕಂಪನಿಗಳು ಆರೋಗ್ಯ ವಿಮೆಯ ಪ್ರಿಮಿಯಂ ಹೆಚ್ಚಿಸುವಂತಿಲ್ಲ'

ಬೆಳ್ಳಿ ದರ: ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ ಇಂದು ಒಂದು ಕೆಜಿಗೆ ₹66,900 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ(Silver Rate) ₹66,900 ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ ₹70,700 ರೂ ನಿಗದಿಯಾಗಿದೆ.

EPFO update : ಕೆಲಸ ಬದಲಾಯಿತೆಂದು ಪಿಎಫ್ ವಿತ್ ಡ್ರಾ ಮಾಡಿದರೆ ಆಗಲಿದೆ ಭಾರೀ ನಷ್ಟ

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ: ಬೆಂಗಳೂರು ₹42,250 (22 ಕ್ಯಾರಟ್‌) ₹46,090(24 Carat Gold) ಚೆನ್ನೈ ₹42,580 (22 ಕ್ಯಾರಟ್‌) ₹46,450 (24 ಕ್ಯಾರಟ್‌) ದಿಲ್ಲಿ ₹44,360 (22 ಕ್ಯಾರಟ್‌), ₹48,390 (24 ಕ್ಯಾರಟ್‌) ಹೈದರಾಬಾದ್‌ ₹42,250 (22 ಕ್ಯಾರಟ್‌) ₹46,090 (24 ಕ್ಯಾರಟ್‌) ಕೋಲ್ಕತಾ ₹44,590 (22 ಕ್ಯಾರಟ್‌), ₹47,290 (24 ಕ್ಯಾರಟ್‌) ಮಂಗಳೂರು ₹42,050 (22 ಕ್ಯಾರಟ್‌) ₹45,830 (24 ಕ್ಯಾರಟ್‌) ಮುಂಬಯಿ ₹44,290(22 ಕ್ಯಾರಟ್‌), ₹45,290 (24 ಕ್ಯಾರಟ್‌) ಮೈಸೂರು ₹42,250(22 ಕ್ಯಾರಟ್‌) ₹46,090 (24 ಕ್ಯಾರಟ್‌)

Reliance Jio: ಗ್ರಾಹಕರಿಗೆ 'ಭಾರಿ ಅಗ್ಗದ ಪ್ಲಾನ್ ನೀಡಿದ 'ರಿಲಾಯನ್ಸ್ ಜಿಯೋ!

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತುಸು ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿ ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

LIC Nivesh Plus Plan: ಈ ಯೋಜನೆಯಲ್ಲಿ ಹೂಡಿಕೆ ಮಾಡಿ ದೊಡ್ಡ ಲಾಭ ಪಡೆಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News