Post Office Scheme: ಪೋಸ್ಟ್ ಆಫೀಸ್ ಸ್ಕೀಮ್ ತನ್ನ ಗ್ರಾಹಕರಿಗೆ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಇಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡುವ ಮೂಲಕ ಸಾರ್ವಜನಿಕರು ಅಧಿಕ ಲಾಭವನ್ನು ಪಡೆಯಬಹುದು. ಪೋಸ್ಟ್ ಆಫೀಸ್ ನ ಹೊಸ ಸ್ಕೀಮ್ ನಲ್ಲಿ  ಕೇವಲ 120  ತಿಂಗಳುಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು. ಈ ಯೋಜನೆಯ ಹೆಸರು ಕಿಸಾನ್ ವಿಕಾಸ್ ಪತ್ರ ಯೋಜನೆ. ಈ ಯೋಜನೆಯ ಬಡ್ಡಿದರಗಳನ್ನು ಕೂಡಾ ಹೆಚ್ಚಿಸಲಾಗಿದೆ. 


COMMERCIAL BREAK
SCROLL TO CONTINUE READING

ಅಂಚೆ ಕಚೇರಿಯ ಈ ಹೊಸ ಯೋಜನೆ ಯಾವುದು? :
ಅಂಚೆ ಕಚೇರಿಯ ಒಂದು ಮಹತ್ತರವಾದ ಯೋಜನೆಯನ್ನು ಹೊರತಂದಿದೆ. ಇದರಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಹಣವನ್ನು ದ್ವಿಗುಣಗೊಳಿಸಬಹುದು. ಈ ಯೋಜನೆಯ ಹೆಸರು ಕಿಸಾನ್ ವಿಕಾಸ್ ಪತ್ರ ಯೋಜನೆ. ಈ ಯೋಜನೆಯಲ್ಲಿ, ನಿಮ್ಮ ಹಣವು 120 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ. ಇದರಲ್ಲಿ ಶೇಕಡಾ 7.20 ರವರೆಗೆ ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಶೇಕಡಾ 7.2 ಬಡ್ಡಿ ಸಿಗುತ್ತದೆ.  


ಇದನ್ನೂ ಓದಿ : LIC ಪಾಲಿಸಿದಾರರೆ ಮಾರ್ಚ್ 24 ರೊಳಗೆ ಈ ಕೆಲಸ ಮಾಡಿ, ಇಲ್ಲದಿದ್ದರೆ ಭಾರಿ ನಷ್ಟ


ಯೋಜನೆಯಲ್ಲಿ ಹಣವನ್ನು ದ್ವಿಗುಣಗೊಳಿಸುವುದು ಹೇಗೆ ? :
ಈ ಯೋಜನೆಯಲ್ಲಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, 120 ತಿಂಗಳುಗಳಲ್ಲಿ 7.2 ಶೇಕಡಾ ಬಡ್ಡಿಯನ್ನು ಪಡೆಯುತ್ತೀರಿ. ಅಲ್ಲದೆ ನೀವು ಹೂಡಿಕೆ ಮಾಡಿದ ಹಣವು 120 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ. 10 ಲಕ್ಷ ರೂಪಾಯಿಗಳೆಂದರೆ ನಿಮ್ಮ ಕೈಗೆ 20 ಲಕ್ಷ ರೂಪಾಯಿ  ಸೇರುತ್ತದೆ. 


ಖಾತೆಯನ್ನು ತೆರೆಯುವುದು ಹೇಗೆ ? :
ಈ ಯೋಜನೆಯಲ್ಲಿ, 10 ವರ್ಷಗಳ ನಂತರವೂ ಖಾತೆಯನ್ನು ಮುಂದುವರೆಸಬಹುದು. ಇದಕ್ಕಾಗಿ ಅಂಚೆ ಕಚೇರಿಗೆ ಹೋಗಿ ಅರ್ಜಿಯನ್ನು ಭರ್ತಿ ಮಾಡಬೇಕು. ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಹೂಡಿಕೆಯನ್ನು ಠೇವಣಿ ಮಾಡಬೇಕು. ಇಲ್ಲಿ ನಿಮ್ಮ ಗುರುತಿನ ಚೀಟಿಯನ್ನು  ಹಾಕಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ತಕ್ಷಣ ಕಿಸಾನ್ ವಿಕಾಸ್ ಪ್ರಮಾಣಪತ್ರ ನಿಮಗೆ ಸಿಗುತ್ತದೆ. 


ಇದನ್ನೂ ಓದಿ : Wheat Price : ಗೋಧಿ ಮತ್ತು ಅದರ ಹಿಟ್ಟಿನ ಬೆಲೆಯ ಬಗ್ಗೆ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.