ಬೆಂಗಳೂರು : ಉದ್ಯೋಗಿಗಳ ಪಿಂಚಣಿ ಯೋಜನೆ ಅಡಿಯಲ್ಲಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಪ್ರಾರಂಭಿಸಿದೆ. ಸುಪ್ರೀಂ ಕೋರ್ಟ್‌ನ ನವೆಂಬರ್ 4,2022 ರ ಆದೇಶಕ್ಕೆ ಅನುಸಾರವಾಗಿ, ತನ್ನ ಎಲ್ಲಾ ಪ್ರಾದೇಶಿಕ ಮತ್ತು ವಲಯ ಕಚೇರಿಗಳಿಗೆ ಹೆಚ್ಚಿನ ಪಿಂಚಣಿಗಾಗಿ ನೌಕರರು ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ಇಪಿಎಫ್‌ಒ ಸೋಮವಾರ ಸೂಚನೆಗಳನ್ನು ನೀಡಿದೆ. ಇದಕ್ಕಾಗಿ ಸದಸ್ಯರು ಮತ್ತು ಅವರ ಉದ್ಯೋಗದಾತರು ಇದಕ್ಕಾಗಿ ಜಂಟಿಯಾಗಿ ಅರ್ಜಿ ಸಲ್ಲಿಸಬಹುದು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಈಗ ಚಂದಾದಾರರಿಗೆ ತಿಂಗಳಿಗೆ ರೂ 15,000 ಕ್ಕೆ ಸೀಮಿತವಾದ ಪಿಂಚಣಿ ವೇತನವನ್ನು ಮೀರಿ ಹೋಗಲು EPFO ಅವಕಾಶ ಮಾಡಿಕೊಟ್ಟಿದೆ. ಉದ್ಯೋಗದಾತರು ಉದ್ಯೋಗಿ ಪಿಂಚಣಿ ಯೋಜನೆ ಅಡಿಯಲ್ಲಿ ಮೂಲ ವೇತನ'ದ 8.33 ಪ್ರತಿಶತದಷ್ಟು ಮೊತ್ತವನ್ನು ಕಡಿತಗೊಳಿಸುಬಹುದು.
ಇದನ್ನೂ ಓದಿ : PF ಖಾತೆದಾರರಿಗೆ ಸಿಹಿ ಸುದ್ದಿ : ಈ ದಿನ ನಿಮ್ಮ ಖಾತೆಗೆ ಜಮಾ ಆಗಲಿದೆ ಬಡ್ಡಿ ಹಣ!
ಠೇವಣಿ ವಿಧಾನ, ಪಿಂಚಣಿ ಲೆಕ್ಕಾಚಾರದ ವಿವರಗಳನ್ನು ಮುಂದಿನ ಸುತ್ತೋಲೆಗಳಲ್ಲಿ ವಿವರಿಸಲಾಗುವುದು ಎಂದು ಇಪಿಎಫ್‌ಒ ಇದೇ ವೇಳೆ ತಿಳಿಸಿದೆ.
ಒಬ್ಬ ಉದ್ಯೋಗಿ ಮತ್ತು ಉದ್ಯೋಗದಾತರು ಮುಂಬರುವ ದಿನಗಳಲ್ಲಿ ಒಟ್ಟಿಗೆ ಸೈನ್ ಅಪ್ ಮಾಡಿ, ಇಪಿಎಫ್‌ಒಗೆ ಮಾಸಿಕ ವೇತನದ ಶೇಕಡಾ 8.33 ರಷ್ಟು ಕಡಿತಗೊಳಿಸುವಂತೆ ವಿನಂತಿಸಬಹುದು. ಈ ಮೂಲಕ ಹೆಚ್ಚಿನ ಪಿಂಚಣಿಗೆ ಹಣ ಸಂಗ್ರಹವಾದಂತಾಗುತ್ತದೆ.
ಇದಕ್ಕೂ ಮುನ್ನ, 2014ರ ಆಗಸ್ಟ್ 22ರ ಇಪಿಎಸ್ ತಿದ್ದುಪಡಿಯು ಪಿಂಚಣಿ ವೇತನದ ಮಿತಿಯನ್ನು ತಿಂಗಳಿಗೆ 6,500 ರೂ.ನಿಂದ 15,000 ರೂ.ಗೆ ಹೆಚ್ಚಿಸಿತ್ತು. ಅಲ್ಲದೆ, ಸದಸ್ಯರು ಮತ್ತು ಅವರ ಉದ್ಯೋಗದಾತರು ತಮ್ಮ ವೇತನದ 8.33% ಅನ್ನು ಇಪಿಎಸ್‌ಗೆ ಕೊಡುಗೆ ನೀಡಲು ಅನುಮತಿಸಲಾಗಿತ್ತು.
ಇದನ್ನೂ ಓದಿ : Diesel-Petrol ಬೆಲೆ ಕುರಿತು ಮಹತ್ವದ ಅಪ್ಡೇಟ್ ಪ್ರಕಟ, ವಾಹನ ಸವಾರರಿಗೆ ಸಿಗಲಿದೆಯಾ ಸಂತಸದ ಸುದ್ದಿ!
ನವೆಂಬರ್ 4 ರಂದು, ನೌಕರರ ಪಿಂಚಣಿ (ತಿದ್ದುಪಡಿ) ಯೋಜನೆ, 2014 ಅನ್ನು ಕೋರ್ಟ್ ಎತ್ತಿಹಿಡಿದಿದೆ. ಈ ಮೂಲಕ EPS ಅನ್ನು ಪಡೆದಿರುವ EPF ಸದಸ್ಯರಿಗೆ ಮುಂದಿನ ನಾಲ್ಕು ತಿಂಗಳುಗಳಲ್ಲಿ ಹೆಚ್ಚಿನ ವರ್ಷಾಶನವನ್ನು ಆಯ್ಕೆ ಮಾಡಲು ಮತ್ತೊಂದು ಅವಕಾಶವನ್ನು ನೀಡಲಾಗಿದೆ. ಸೆಪ್ಟೆಂಬರ್ 1, 2014 ರಂತೆ ಅಸ್ತಿತ್ವದಲ್ಲಿರುವ ಇಪಿಎಸ್ ಸದಸ್ಯರಾಗಿದ್ದ ಉದ್ಯೋಗಿಗಳಿಗೆ ತಮ್ಮ ಸಂಬಳದ ಶೇಕಡಾ 8.33 ರಷ್ಟು ಕೊಡುಗೆ ನೀಡಲು ಮತ್ತೊಂದು ಅವಕಾಶವನ್ನು ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.