ನೀವು ಕೆಲಸಕ್ಕಾಗಿ ಅಲೆಯುತ್ತಿದ್ದೀರಾ? ಇನ್ಫೋಸಿಸ್ ಹಾಗೂ ಟಿಸಿಎಸ್ ನಿಂದ ಇಲ್ಲಿದೆ ಭರ್ಜರಿ ಆಫರ್..!
ನೀವು ಐಟಿ ವಲಯದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದರೆ, ಇನ್ಫೋಸಿಸ್ ಮತ್ತು ಟಿಸಿಎಸ್‌ನಿಂದ ನಿಮಗೆ ಒಳ್ಳೆಯ ಸುದ್ದಿ ಇದೆ.
ನವದೆಹಲಿ: ನೀವು ಐಟಿ ವಲಯದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದರೆ, ಇನ್ಫೋಸಿಸ್ ಮತ್ತು ಟಿಸಿಎಸ್‌ನಿಂದ ನಿಮಗೆ ಒಳ್ಳೆಯ ಸುದ್ದಿ ಇದೆ. ಈ ಎರಡು ಐಟಿ ಕಂಪನಿಗಳು ಈ ವರ್ಷ ಸುಮಾರು ಒಂದು ಲಕ್ಷ ಹೊಸಬರಿಗೆ ಉದ್ಯೋಗ ನೀಡಲಿದೆ ಎನ್ನಲಾಗಿದೆ. ಈಗ ಬಂದಿರುವ ಮಾಹಿತಿ ಪ್ರಕಾರ ಉದ್ಯೋಗಗಳ ಸಂಖ್ಯೆ ಇನ್ನೂ ಅಧಿಕ ಇರಬಹುದು ಎನ್ನಲಾಗಿದೆ.ವಾಸ್ತವವಾಗಿ, ಈ ಕಂಪನಿಗಳಲ್ಲಿ ಉದ್ಯೋಗವನ್ನು ತೊರೆಯುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಈ ಸಮಸ್ಯೆಯನ್ನು ಪರಿಹರಿಸಲು, ಕಂಪನಿಯು ದೊಡ್ಡ ಪ್ರಮಾಣದಲ್ಲಿ ನೇಮಕಾತಿ ಮಾಡಲು ನಿರ್ಧರಿಸಿದೆ.ವಿಶೇಷವೆಂದರೆ ಕಂಪನಿಗಳು ಹೊಸಬರಿಗೆ ಕೂಡ ಉದ್ಯೋಗಾವಕಾಶಗಳನ್ನು ನೀಡಲು ಮುಂದಾಗಿದೆ.
ಇದನ್ನೂ ಓದಿ-ಅತಿ ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವ ಕಾರಣ ಮತ್ತು ಸುಲಭ ಪರಿಹಾರ
ದೇಶದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 40,000 ಹೊಸಬರಿಗೆ ಉದ್ಯೋಗ ಒದಗಿಸುವ ಗುರಿಯನ್ನು ಹೊಂದಿದೆ.ಕಂಪನಿಯು ಕಳೆದ ವರ್ಷವೂ ಹಲವು ಉದ್ಯೋಗಗಳ ಗುರಿಯನ್ನು ಹೊಂದಿತ್ತು, ಆದರೆ ಸುಮಾರು ಒಂದು ಲಕ್ಷ ಜನರಿಗೆ ಉದ್ಯೋಗ ನೀಡಿದೆ.ಈ ಬಾರಿಯೂ ಈ ಸಂಖ್ಯೆ ಹೆಚ್ಚಾಗುವ ವಿಶ್ವಾಸವಿದೆ.ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಸುಮಾರು 35000 ಜನರಿಗೆ ಉದ್ಯೋಗ ನೀಡುವ ಮೂಲಕ ಟಿಸಿಎಸ್ ದಾಖಲೆ ಸೃಷ್ಟಿಸಿತ್ತು.Benefits of Tea : ನೀವು ಚಹಾ ಪ್ರಿಯರೆ? ಹಾಗಿದ್ರೆ, ತಪ್ಪದೆ ತಿಳಿಯಿರಿ ಅದರ ಅಪಾಯ-ಉಪಾಯ!
ಭಾರತದ ಎರಡನೇ ಅತಿ ದೊಡ್ಡ ಐಟಿ ಕಂಪನಿ ಇನ್ಫೋಸಿಸ್ ಕೂಡ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಫ್ರೆಶರ್‌ಗಳನ್ನು ನೇಮಕ ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ.ಕಂಪನಿಯು 50000 ಐಟಿ ಹೊಸಬರನ್ನು ನೇಮಿಸಿಕೊಳ್ಳಲು ಯೋಜನೆಯನ್ನು ರೂಪಿಸಿದೆ.ಈಗ ಅಂಕಿ-ಅಂಶಗಳನ್ನು ಗಮನಿಸಿದರೆ, ಕಳೆದ ವರ್ಷ ಕಂಪನಿಯು 85,000 ಜನರಿಗೆ ಉದ್ಯೋಗ ನೀಡಿದೆ.ನೀವು ಐಟಿ ಪದವಿ ಅಥವಾ ಡಿಪ್ಲೊಮಾ ಹೊಂದಿದ್ದರೆ ನಿಮಗೂ ಕೂಡ ಉದ್ಯೋಗದ ಅವಕಾಶ ಲಭ್ಯವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.