ಅತಿ ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವ ಕಾರಣ ಮತ್ತು ಸುಲಭ ಪರಿಹಾರ

 ಪ್ರಸ್ತುತ ಯುಗದಲ್ಲಿ, ಅನೇಕ ಯುವಕರು ಬಿಳಿ ಕೂದಲಿನ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ, ಆದರೆ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. 

Written by - Ranjitha R K | Last Updated : Apr 29, 2022, 03:23 PM IST
  • ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗಲು ಏನು ಕಾರಣ
  • ಮಾಲಿನ್ಯ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
  • ಕೂದಲು ಕಪ್ಪಾಗಳು ಸಹಾಯ ಮಾಡುತ್ತದೆ ಈರುಳ್ಳಿ ರಸ
 ಅತಿ ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವ ಕಾರಣ  ಮತ್ತು ಸುಲಭ ಪರಿಹಾರ  title=
White Hair Problem Home Remedies (file photo)

ಬೆಂಗಳೂರು : White Hair Problem Home Remedies:  40 ಅಥವಾ 50 ವರ್ಷ ವಯಸ್ಸಿನವರ ಕೂದಲು ಬೆಳ್ಳಗಾಗುವುದು ಸಹಜ. ಆದರೆ 25 ರಿಂದ 30 ವರ್ಷ ವಯಸ್ಸಿನ ಯುವಕರು ಸಹ ಈ ಸಮಸ್ಯೆಯನ್ನು ಎದುರಿಸಬೇಕಾಗಿರುವುದು ಆತಂಕಕಾರಿಯಾಗಿದೆ. ಈ ಕಾರಣದಿಂದಾಗಿ, ಅನೇಕ ಯುವಕರ ಆತ್ಮವಿಶ್ವಾಸ ಕೂಡಾ ಕುಗ್ಗುತ್ತಿದೆ. ಕೆಲವರು ವಯಸ್ಸಾಗಿ ಕಾಣುವುದನ್ನು ತಪ್ಪಿಸಲು ತಮ್ಮ ಬಿಳಿ ಕೂದಲನ್ನು ಕೀಳುತ್ತಾರೆ. ಅನೇಕ ಯುವಕರು ತಮ್ಮ ಕೂದಲನ್ನು ಮತ್ತೆ ಕಪ್ಪು ಮಾಡಲು ಹೇರ್ ಡೈ ಅಥವಾ ರಾಸಾಯನಿಕ ಆಧಾರಿತ ಬಣ್ಣವನ್ನು ಬಳಸುತ್ತಾರೆ. ಆದರೆ ಇದು ಶಾಶ್ವತ ಪರಿಹಾರವನ್ನು ಒದಗಿಸುವುದಿಲ್ಲ. ಬದಲಾಗಿ ಬೇರೆ ಬೇರೆ ಸಮಸ್ಯೆಗಳಿಗೆ ಕಾರಣವಾಗಬಹುದು.  

ಕೂದಲು ಬೆಳ್ಳಗಾಗಲು ಏನು  ಕಾರಣ ? 
ಅನಾರೋಗ್ಯಕರ ಆಹಾರಗಳನ್ನು ಹೆಚ್ಚು ಸೇವಿಸಿದರೆ ಕೂದಲಿಗೆ ಸರಿಯಾದ ಪೋಷಣೆ ಸಿಗದೇ 25ರಿಂದ 30ನೇ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗಲು ಶುರುವಾಗುತ್ತದೆ. ನಿಮ್ಮ ಆಹಾರದಲ್ಲಿ ಮಸಾಲೆ, ಹುಳಿ ಮತ್ತು ಉಪ್ಪು ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡಿ. 

ಇದನ್ನೂ ಓದಿ : ತೂಕವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಹೋಂ ಮೇಡ್ ಡ್ರಿಂಕ್ಸ್

ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಸಮಸ್ಯೆ ಬಹಳಷ್ಟು ಹೆಚ್ಚಾಗಿದೆ. ಇದು ನಮ್ಮ ಕೂದಲಿನ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ಕಲುಷಿತ ಗಾಳಿ, ಧೂಳು ಮತ್ತು ಹೊಗೆಯಿಂದ ಕೂದಲನ್ನು ರಕ್ಷಿಸುವುದು ಬಹಳ ಮುಖ್ಯ.

ಕೂದಲು ಬಿಳಿಯಾಗಲು ಮುಖ್ಯ ಕಾರಣವೆಂದರೆ ಅತಿಯಾದ ಒತ್ತಡ, ರಾತ್ರಿ ತಡವಾಗಿ ಮಲಗುವುದು ಮತ್ತು ಕನಿಷ್ಟ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡದಿರುವುದು. ಮನಸ್ಸನ್ನು ನಿರಾಳವಾಗಿಟ್ಟುಕೊಂಡರೆ ಇಂತಹ ಸಮಸ್ಯೆಗಳು ಬರುವುದಿಲ್ಲ.

ಬಿಳಿ ಕೂದಲನ್ನು ಕಪ್ಪಾಗಿಸಲು ಈ ವಸ್ತುಗಳನ್ನು ಬಳಸಿ:
1- ಮೊಸರು
ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಮೊಸರನ್ನು ಬಳಸಬಹುದು. ಇದಕ್ಕಾಗಿ, ಟೊಮೆಟೊವನ್ನು ಪೇಸ್ಟ್ ಮಾಡಿ, ಮೊಸರಿನೊಂದಿಗೆ ಮಿಶ್ರಣ ಮಾಡಿ. ನಂತರ ಅದಕ್ಕೆ ಸ್ವಲ್ಪ ನೀಲಗಿರಿ ಎಣ್ಣೆಯನ್ನು ಸೇರಿಸಿ. ಈಗ ಪ್ರತಿ 3 ದಿನಗಳಿಗೊಮ್ಮೆ ಈ ಮಿಶ್ರಣದೊಂದಿಗೆ ತಲೆ ಕೂದಲಿಗೆ ಮಸಾಜ್ ಮಾಡಿ, ಕೆಲವೇ ವಾರಗಳಲ್ಲಿ ನಿಮ್ಮ ಕೂದಲು ಕಪ್ಪಾಗುತ್ತದೆ.

ಇದನ್ನೂ ಓದಿ : Healthy Morning Tips: ಮುಂಜಾನೆ ಈ ಐದು ಕೆಲಸಗಳನ್ನು ಮಾಡಿದರೆ ದಿನವಿಡೀ ಉಲ್ಲಾಸದಾಯಕವಾಗಿರುತ್ತದೆ

2. ಈರುಳ್ಳಿ ರಸ
ಈರುಳ್ಳಿ ರಸವನ್ನು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ರಸವನ್ನು ನೆತ್ತಿಯ ಮೇಲೆ ಮಸಾಜ್ ಮಾಡಿ. ಇದರಿಂದ ನಿಮ್ಮ ಕೂದಲು ನೈಸರ್ಗಿಕವಾಗಿ ಕಪ್ಪಾಗುವುದಲ್ಲದೆ, ಕೂದಲು ಉದುರುವಿಕೆಯಂತಹ ಸಮಸ್ಯೆಗಳೂ ದೂರವಾಗುತ್ತವೆ.

3. ಕರಿಬೇವಿನ ಎಲೆಗಳು
ಚಿಕ್ಕ ವಯಸ್ಸಿನಲ್ಲೇ ನಿಮ್ಮ ಕೂದಲು ಬೆಳ್ಳಗಾಗಲು ಪ್ರಾರಂಭಿಸಿದ್ದರೆ, ಕರಿಬೇವಿನ ಎಲೆಗಳು ನಿಮಗೆ ತುಂಬಾ ಉಪಯುಕ್ತವಾಗಬಹುದು. ಇದು ಕೂದಲಿನ ಬೇರುಗಳನ್ನು ಪೋಷಿಸುವ ಜೈವಿಕ ಸಕ್ರಿಯ ಗುಣಗಳನ್ನು ಹೊಂದಿದೆ. ಈ ಎಲೆಗಳನ್ನು ಪುಡಿಮಾಡಿ ಮತ್ತು ಕೂದಲಿಗೆ ಬಳಸುವ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಇದರಿಂದ ತಯಾರಿಸಿದ ಪೇಸ್ಟ್ ಅನ್ನು ವಾರದಲ್ಲಿ ಯಾವುದಾದರೂ ಒಂದು ದಿನ ಹಚ್ಚಿಕೊಳ್ಳಿ.

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,  ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News