BSNL Recruitment 2023: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಜೂನಿಯರ್ ಟೆಲಿಕಾಂ ಆಫೀಸರ್ (JTO) 11705  ಖಾಲಿ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆ ಹೊರಡಿಸಿದೆ. ಬಿಎಸ್ಎನ್ಎಲ್ ಜಿಟಿಓ ನೇಮಕಾತಿ 2023ರ ಅಧಿಸೂಚನೆಯು  ಅಧಿಕೃತ ವೆಬ್‌ಸೈಟ್ www.bsnl.co.in ನಲ್ಲಿ ಲಭ್ಯವಾಗಲಿದೆ. 


COMMERCIAL BREAK
SCROLL TO CONTINUE READING

ವಿದ್ಯಾರ್ಹತೆ:
ಬಿಎಸ್ಎನ್ಎಲ್ ಜಿಟಿಓ ನೇಮಕಾತಿ 2023ರಲ್ಲಿ 20 ರಿಂದ 30 ವರ್ಷ ವಯಸ್ಸಿನ ಆಸಕ್ತ ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ ಅಥವಾ ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ / ಮಾನ್ಯತೆ ಪಡೆದ ಸಂಸ್ಥೆ / ವಿಶ್ವವಿದ್ಯಾಲಯದಿಂದ ತತ್ಸಮಾನ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. 


ಇದನ್ನೂ ಓದಿ- ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪ್ರಥಮ ಮುದ್ರಣ ಪುಸ್ತಕಗಳ ಆಯ್ಕೆಗೆ ಅರ್ಜಿ ಆಹ್ವಾನ


ಅರ್ಜಿ ಸಲ್ಲಿಸುವುದು ಹೇಗೆ?
ಬಿಎಸ್ಎನ್ಎಲ್ ಜಿಟಿಓ 2023ರ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗಾಗಿ ಶೀಘ್ರದಲ್ಲೇ  ಅಪ್ಲಿಕೇಶನ್ ಪ್ರಕ್ರಿಯೆ ಆರಂಭವಾಗಲಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ- ನರೇಗಾ ಯೋಜನೆ : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


ನೇಮಕಾತಿ ಪ್ರಕ್ರಿಯೆ:
ಬಿಎಸ್ಎನ್ಎಲ್ ಜಿಟಿಓ ನೇಮಕಾತಿ ಅಧಿಸೂಚನೆಯ ಪ್ರಕಾರ, 50% ಹುದ್ದೆಗಳನ್ನು ಗೇಟ್ ಸ್ಕೋರ್ ಮೂಲಕ ಭರ್ತಿ ಮಾಡಲಾಗುತ್ತದೆ ಮತ್ತು ಇನ್ನುಳಿದ 50%  ಹುದ್ದೆಗಳನ್ನು ಸೀಮಿತ ಆಂತರಿಕ ಸ್ಪರ್ಧಾತ್ಮಕ ಪರೀಕ್ಷೆ (LICE) ಮೂಲಕ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.