ನವದೆಹಲಿ: ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು ಖಾಲಿ ಇರುವ 7,784 ಟ್ರಾವೆಲಿಂಗ್ ಟಿಕೆಟ್ ಪರೀಕ್ಷಕ (TTE) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‍ಸೈಟ್‍ indianrailways.gov.inಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ʼಮುತ್ತೆ ಮತ್ತಿಗೆ ಕಾರಣʼ ಆದ್ರೆ ಇಲ್ಲಿ ಸಾವಿಗೆ ಸಮೀಪಿಸಿದೆ; ವಿಡಿಯೋ ನೀವೇ ನೋಡಿ..!


ಹುದ್ದೆಯ ಹೆಸರು: ಟ್ರಾವೆಲಿಂಗ್ ಟಿಕೆಟ್ ಪರೀಕ್ಷಕ(TTE)


ಒಟ್ಟು ಹುದ್ದೆಗಳ ಸಂಖ್ಯೆ: 7,784


ಅರ್ಹತೆ: ಗ್ರೂಪ್ ‘ಸಿ’ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ (SSLC /SSC/ಮೆಟ್ರಿಕ್ಯುಲೇಷನ್) ಉತ್ತೀರ್ಣರಾಗಿರಬೇಕು, 12ನೇ ತರಗತಿ ಅಥವಾ ಡಿಪ್ಲೊಮಾ ಮಾಡಿರಬೇಕು.


ವಯೋಮಿತಿ​: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 2023ರ ಜನವರಿ 1ಕ್ಕೆ ಅನ್ವಯವಾಗುವಂತೆ 18 ರಿಂದ 30 ವರ್ಷ ವಯೋಮಿತಿ ಹೊಂದಿರಬೇಕು.


ವೇತನ ಶ್ರೇಣಿ: ರೈಲ್ವೆ TTE ಹುದ್ದೆಗೆ ಆಯ್ಕೆಯಾದವರಿಗೆ 5,200 ರಿಂದ 20,200 ರೂ. ಜೊತೆಗೆ GP (gross pay) 1,900 ರೂ. ನೀಡಲಾಗುತ್ತದೆ.


ಆಯ್ಕೆ ಪ್ರಕ್ರಿಯೆ: ಅರ್ಜಿದಾರರು ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (ಸಿಬಿಇ) ತೆಗೆದುಕೊಳ್ಳಬೇಕಾಗುತ್ತದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು 2ನೇ ಸುತ್ತಿಗೆ ಕರೆಯಲಾಗುತ್ತದೆ, ಅಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳು ವೈದ್ಯಕೀಯ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಎಲ್ಲಾ 3 ಸುತ್ತುಗಳಲ್ಲಿ ಉತ್ತೀರ್ಣರಾದವರನ್ನು ರೈಲ್ವೆ ಟಿಟಿಇ ಆಗಿ ನೇಮಕ ಮಾಡಲಾಗುತ್ತದೆ.


ಇದನ್ನೂ ಓದಿ: ಸಹಕಾರಿ ಸಚಿವರ ತವರಲ್ಲೇ ಹಾಲು ಒಕ್ಕೂಟದಲ್ಲಿ ಭಾರೀ ಅಕ್ರಮ..?


ಟಿಟಿಇ ನೇಮಕಾತಿಯ ಸಿಬಿಟಿ 200 ಅಂಕಗಳನ್ನು ಹೊಂದಿರುತ್ತದೆ ಮತ್ತು ತಲಾ 40 ಅಂಕಗಳ 5 ವಿಭಾಗಗಳನ್ನು ಹೊಂದಿರುತ್ತದೆ. (general awareness, arithmetic, technical ability, reasoning ability, general intelligence)


ಅರ್ಜಿ ಶುಲ್ಕ: ಸಾಮಾನ್ಯ ಅಥವಾ ಕಾಯ್ದಿರಿಸದ ವರ್ಗದ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಾಜಿ ಸೈನಿಕರು/ವಿಕಲಚೇತನರು, ಮಹಿಳೆಯರು, ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 250 ರೂ. ಪಾವತಿಸಬೇಕು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.