ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ಟೀಕಾಪ್ರಹಾರ ನಡೆಸಿದೆ. ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಬಿಜೆಪಿ, ಅನ್ನಭಾಗ್ಯ ಮತ್ತು ಗೃಹಜ್ಯೋತಿ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯರ #ATMSarkaraದ ಎಡಬಿಡಂಗಿ ನಿರ್ಧಾರಗಳು. ಗೃಹ ಜ್ಯೋತಿ ತಲೆ ಮೇಲೆ ಟೋಪಿ, ಹೇಳಿದ್ದು, ಎಲ್ಲರಿಗೂ ಇಲ್ಲದ ಫ್ರೀ 200 ಯುನಿಟ್ ವಿದ್ಯುತ್! ಹೊಸ ಮನೆ, ಬಾಡಿಗೆದಾರರಿಗಿಲ್ಲ ಫ್ರೀ ವಿದ್ಯುತ್..!, ಜುಲೈ ಅಥವಾ ಆಗಸ್ಟ್ ತಿಂಗಳಿಂದ ಉಚಿತ ವಿದ್ಯುತ್..!, ಜೂನ್ 17 ಮತ್ತು 18ರಂದು ಹಾಕಿದ ಅರ್ಜಿಗಳು ಸ್ವೀಕೃತಗೊಂಡಿಲ್ಲ..!, ಸರ್ವರ್ ಬ್ಯೂಸಿ ಅರ್ಜಿಗಳು ಸ್ವೀಕಾರ ಆಗುತ್ತಿಲ್ಲ..! ಮತ್ತು ಗೃಹ ಜ್ಯೋತಿ ಕೊಡುವ ಮುನ್ನವೇ ಮತ್ತೆ ಹೆಚ್ಚುವರಿ 200 ರೂ. ವಿದ್ಯುತ್ ಬಿಲ್..!’ ಎಂದು ಕುಟುಕಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಜೀ ಕನ್ನಡ ನ್ಯೂಸ್ ವರದಿಯ ಬಿಗ್ ಇಂಪ್ಯಾಕ್ಟ್..!
ಅನ್ನಭಾಗ್ಯ ಕಿವಿ ಮೇಲೆ ಲಾಲ್ ಬಾಗ್, ಹೇಳಿದ್ದು 10 ಕೆಜಿ ಅಕ್ಕಿ ಎಲ್ಲರಿಗೂ ಪ್ರೀ..! 5 ಕೆಜಿ ಅಕ್ಕಿ ಎಫ್‌ಸಿಐ ಕೊಡುತ್ತಿಲ್ಲ..!, ಯಾವ ರಾಜ್ಯದಲ್ಲೂ ಅಕ್ಕಿ ಸಿಗುತ್ತಿಲ್ಲ..!, 5 ಕೆಜಿ ಕೇಂದ್ರ ಸರ್ಕಾರದ ಅಕ್ಕಿ ಜೊತೆ 5 ಕೆಜಿ ಅಕ್ಕಿ ಹಣ..!, 5 ಕೆಜಿ ಪ್ರಧಾನಿ ಮೋದಿ ಸರ್ಕಾರದ ಅಕ್ಕಿಯಲ್ಲಿ #ATMSarkaraಕ್ಕೆ 2 ಕೆಜಿ ಕಮಿಷನ್..! ಮತ್ತು ಪಡಿತರ ಚೀಟಿದಾರರಿಗೆ ಕೇವಲ 3 ಕೆಜಿ ಅಕ್ಕಿ ಮಾತ್ರ ವಿತರಣೆ..!’ ಎಂದು ಬಿಜೆಪಿ ಟೀಕಿಸಿದೆ.
ರಾಜ್ಯದಲ್ಲಿ @siddaramaiah ಅವರ #ATMSarkara ದ ಎಡಬಿಡಂಗಿ ನಿರ್ಧಾರಗಳು..!
⚡ ಗೃಹ ಜ್ಯೋತಿ ತಲೆ ಮೇಲೆ ಟೋಪಿ
ಹೇಳಿದ್ದು -> ಎಲ್ಲರಿಗೂ ಇಲ್ಲದ ಫ್ರೀ 200 ಯುನಿಟ್ ವಿದ್ಯುತ್!
🏘️ ಹೊಸ ಮನೆ, ಬಾಡಿಗೆದಾರರಿಗಿಲ್ಲ ಫ್ರೀ ವಿದ್ಯುತ್..!
💡 ಜುಲೈ ಅಥವಾ ಆಗಸ್ಟ್ ತಿಂಗಳಿಂದ ಉಚಿತ ವಿದ್ಯುತ್..!
🔎 ಜೂನ್ 17 ಮತ್ತು 18 ರಂದು ಹಾಕಿದ…— BJP Karnataka (@BJP4Karnataka) July 16, 2023
‘ರಾಜ್ಯದ #ATMSarkaraದ ಆಡಳಿತದಲ್ಲಿ ಜನತೆ ಹೊಟ್ಟೆ ತುಂಬಾ ಒಂದೊಪ್ಪತ್ತಿನ ಊಟ ಮಾಡಲು ಎರೆಡೆರಡು ಬಾರಿ ಯೋಚಿಸುವಂತಾಗಿದೆ. ತರಕಾರಿ, ಹಾಲು, ದಿನಸಿ ಪದಾರ್ಥಗಳ ಬೆಲೆ ಕಾಂಗ್ರೆಸ್ ಸರ್ಕಾರದಡಿಯಲ್ಲಿ ಏರಿದೆ, ಇನ್ನೂ ಏರಲಿದೆ! ಇಷ್ಟು ಸಾಲದ್ದಕ್ಕೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈಗ ಆ ಪಟ್ಟಿಗೆ ಮೀನುಗಳ ದರವೂ ಸೇರಿದ್ದು, ಮಾಂಸಹಾರಿಗಳ ಜೇಬು ಬರಿದಾಗುತ್ತಿದೆ’ ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: ಶಾಲಾ ಆವರಣದಲ್ಲಿ ಪ್ರತ್ಯಕ್ಷವಾದ ಹಾವು: ಉರಗ ತಜ್ಞ ರಕ್ಷಣೆ
‘ಬರ ಹಾಗೂ ಬೆಲೆಯೇರಿಕೆಯಿಂದ ಬಸವಳಿದಿದ್ದ ರೈತರಿಗೆ, ಈಗ ಹಾಲಿನ ದರವನ್ನು ಸಹ ಕಡಿತಗೊಳಿಸುವ ಮೂಲಕ #ATMSarkara ಗಾಯದ ಮೇಲೆ ಬರೆ ಎಳೆದಿದೆ. ಈ ಹಿಂದೆ ಹಾಲು ಉತ್ಪಾದಕರಿಗೆ 32.25 ರೂ. ನೀಡುತ್ತಿದ್ದ ಸರ್ಕಾರ ಈಗ 1.75 ರೂ. ಕಡಿತಗೊಳಿಸಿ ರೈತರ ಆದಾಯಕ್ಕೆ ಕೊಡಲಿ ಪೆಟ್ಟು ನೀಡಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.