RBI Assistant 2023: RBIನಲ್ಲಿ ಖಾಲಿ ಇರುವ 450 ಹುದ್ದೆಗಳಿಗೆ ಅರ್ಜಿ ಆಹ್ವಾನ
RBI Assistant 2023: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಭಾಗದಲ್ಲಿ ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ (SC/ST/PwBD ಅಭ್ಯರ್ಥಿಗಳಿಗೆ ಉತ್ತೀರ್ಣ ವರ್ಗ) ಪದವಿ ಹೊಂದಿರಬೇಕು & PCಯಲ್ಲಿ ವರ್ಡ್ ಪ್ರೊಸೆಸಿಂಗ್ ಜ್ಞಾನವನ್ನು ಹೊಂದಿರಬೇಕು.
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಖಾಲಿ ಇರುವ 450 ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಂಗಳವಾರ (ಸೆಪ್ಟೆಂಬರ್ 13)ದಿಂದಲೇ ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಕೆ ಪ್ರಾರಂಭವಾಗಿದ್ದು, ಅಕ್ಟೋಬರ್ 4 ಕೊನೆಯ ದಿನಾಂಕವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವೆಬ್‍ಸೈಟ್ https://opportunities.rbi.org.in/ ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಹತಾ ಮಾನದಂಡ: ಅಭ್ಯರ್ಥಿಗಳು ಯಾವುದೇ ವಿಭಾಗದಲ್ಲಿ ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ (SC/ST/PwBD ಅಭ್ಯರ್ಥಿಗಳಿಗೆ ಉತ್ತೀರ್ಣ ವರ್ಗ) ಪದವಿ ಹೊಂದಿರಬೇಕು ಮತ್ತು PCಯಲ್ಲಿ ವರ್ಡ್ ಪ್ರೊಸೆಸಿಂಗ್ ಜ್ಞಾನವನ್ನು ಹೊಂದಿರಬೇಕು. ನಿರ್ದಿಷ್ಟ ನೇಮಕಾತಿ ಕಚೇರಿಯಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಾಜ್ಯ/ನೇಮಕಾತಿ ಕಚೇರಿಯಡಿ ಬರುವ ಯಾವುದೇ ರಾಜ್ಯಗಳ ಭಾಷೆಯಲ್ಲಿ ಪ್ರವೀಣರಾಗಿರಬೇಕು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ 'ಬರ' ಗ್ಯಾರಂಟಿ ಖಚಿತ ಮತ್ತು ನಿಶ್ಚಿತ: ಬಿಜೆಪಿ
ವಯೋಮಿತಿ: ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು 2023ರ ಸೆಪ್ಟೆಂಬರ್ 1ರಂತೆ 20 ಮತ್ತು 28 ವರ್ಷಗಳ ನಡುವೆ ಇರಬೇಕು. 1995ರ ಸೆಪ್ಟೆಂಬರ್ 2ಕ್ಕಿಂತ ಮೊದಲು ಮತ್ತು 2003ರ ಸೆಪ್ಟೆಂಬರ್ 1ರ ನಂತರ ಜನಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಪ್ರಮುಖ ದಿನಾಂಕಗಳು: ಅಭ್ಯರ್ಥಿಗಳು ಅಕ್ಟೋಬರ್ 4ರವರೆಗೆ ಅರ್ಜಿ ಸಲ್ಲಿಸಬಹುದು. ಅ.4ರೊಳಗೆ ಆನ್‌ಲೈನ್ ಮೂಲಕ ಪರೀಕ್ಷಾ ಶುಲ್ಕ ಪಾವತಿಸಬಹುದಾಗಿದೆ. ಅ.21 ಮತ್ತು ಅ.23ರಂದು ಆನ್‌ಲೈನ್ ಪೂರ್ವಭಾವಿ ಪರೀಕ್ಷೆ (ತಾತ್ಕಾಲಿಕ) ನಡೆಯಲಿದೆ. ಡಿಸೆಂಬರ್ 2ರಂದು ಆನ್‌ಲೈನ್ ಮುಖ್ಯ ಪರೀಕ್ಷೆ(ತಾತ್ಕಾಲಿಕ) ನಡೆಯಲಿದೆ.
ಇದನ್ನೂ ಓದಿ: 161 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಬರ ಘೋಷಣೆ ಸಂಬಂಧಿಸಿ ಸಿಎಂಗೆ ಶಿಫಾರಸು: ಕೃಷ್ಣ ಬೈರೇಗೌಡ
ಅರ್ಜಿ ಶುಲ್ಕ: ಅಭ್ಯರ್ಥಿಗಳು SC/ST/PwBD/EXS ಇಂಟಿಮೇಷನ್ ಶುಲ್ಕ 50 ರೂ. ಜೊತೆಗೆ 18% GST, ಮಾಹಿತಿ ಶುಲ್ಕಗಳು ಸೇರಿದಂತೆ GEN/OBC/EWS ಅರ್ಜಿ ಶುಲ್ಕ 450 ರೂ. ಜೊತೆಗೆ 18% GST ಪಾವತಿಸಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.