/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಬೆಂಗಳೂರು : ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ  ಒಳ್ಳೆಯ ಸುದ್ದಿ ಕಾಯುತ್ತಿದೆ. ಮೂಲಗಳ ಪ್ರಕಾರ, ಮೋದಿ ಸರ್ಕಾರವು ಉದ್ಯೋಗಿಗಳ ತುಟ್ಟಿಭತ್ಯೆ (ಡಿಎ) ಮತ್ತು ಡಿಯರ್ನೆಸ್ ರಿಲೀಫ್ (ಡಿಆರ್) ಅನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದೆ. ಸರ್ಕಾರದ ಮೂಲಗಳ ಪ್ರಕಾರ, ಈ ತಿಂಗಳ ಅಂತ್ಯದ ವೇಳೆಗೆ ಡಿಎ ಹೆಚ್ಚಳದ ಕುರಿತು ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ. ಜುಲೈ 1, 2023 ರಿಂದ ಅನ್ವಯವಾಗುವ ಡಿಎ ಹೆಚ್ಚಳವು ಶೇಕಡಾ 3 ಅಥವಾ 4 ರಷ್ಟಿರುತ್ತದೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. ಹೆಚ್ಚಳದ ನಂತರ,  ಒಟ್ಟು ತುಟ್ಟಿಭತ್ಯೆ  45 ಅಥವಾ 46 ಪ್ರತಿಶತವನ್ನು ತಲುಪುತ್ತದೆ.

ವೇತನ ಎಷ್ಟು ಹೆಚ್ಚಾಗುತ್ತದೆ? : 
ಜುಲೈನಿಂದ ತುಟ್ಟಿಭತ್ಯೆಯಲ್ಲಿನ ಹೆಚ್ಚಳವು 3 ಪ್ರತಿಶತ ಅಥವಾ 4 ಪ್ರತಿಶತ  ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ. ಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳ ಮಾಡಿದರೂ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಏರಿಕೆ ಕಂಡು ಬರಲಿದೆ. ಉದಾಹರಣೆಗೆ, ಉದ್ಯೋಗಿಯ ವೇತನವು ತಿಂಗಳಿಗೆ 50,000 ರೂ. ಆಗಿದ್ದು, ಅವರ ಮೂಲ ವೇತನ  15,000 ರೂ. ಆಗಿದ್ದರೆ, 42 ಪ್ರತಿಶತದ ಪ್ರಕಾರ 6,300 ರೂಪಾಯಿ ತುಟ್ಟಿಭತ್ಯೆ ಈಗ ಪಡೆಯುತ್ತಿದ್ದಾರೆ.  ಆದರೆ, ಡಿಎಯಲ್ಲಿ ಶೇ 3 ರಷ್ಟು ಹೆಚ್ಚಳವಾದರೆ ತಿಂಗಳಿಗೆ 6,750 ರೂ.ಗಳನ್ನು  ತುಟ್ಟಿಭತ್ಯೆ ಪಡೆಯುತ್ತಾರೆ. ಅಂದರೆ, ತಿಂಗಳ ವೇತನದಲ್ಲಿ 450 ರೂಪಾಯಿ ಹೆಚ್ಚಾಗುತ್ತದೆ.

ಇದನ್ನೂ ಓದಿ : PPF-ಸುಕನ್ಯಾ ಸಮೃದ್ಧಿ ಯಲ್ಲಿ ಹೂಡಿಕೆ ಮಾಡಿದ್ದರೆ ಸರ್ಕಾರದಿಂದ ಗುಡ್ ನ್ಯೂಸ್ ! ಹಣಕಾಸು ಸಚಿವರ ಘೋಷಣೆ

ಡಿಎ ಹೆಚ್ಚಳವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ? : 
ಉದ್ಯೋಗಿಗಳಿಗೆ ಡಿಎ ಮತ್ತು ಪಿಂಚಣಿದಾರರಿಗೆ ಡಿಆರ್ ಅನ್ನು ಬ್ಯೂರೋ ಆಫ್ ಲೇಬರ್ ಬಿಡುಗಡೆ ಮಾಡುವ ಇಂಡಸ್ಟ್ರಿಯಲ್ ವರ್ಕರ್ಸ್ (CPI-IW) ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಈ ಬ್ಯೂರೋ ಆಫ್ ಲೇಬರ್ ಕಾರ್ಮಿಕ ಸಚಿವಾಲಯದ ವಿಭಾಗವಾಗಿದೆ. 

ಜುಲೈ 2023 ಕ್ಕೆ ಬಿಡುಗಡೆಯಾದ ಇತ್ತೀಚಿನ ಮಾಹಿತಿಯ ಪ್ರಕಾರ, ಜುಲೈ 2023 ಕ್ಕೆ ಅಖಿಲ ಭಾರತ CPI-IW 3.3 ಪಾಯಿಂಟ್‌ಗಳಿಂದ 139.7 ಕ್ಕೆ ಏರಿಕೆಯಾಗಿದೆ. 1-ತಿಂಗಳ ಶೇಕಡಾವಾರು ಬದಲಾವಣೆಯಲ್ಲಿ, ಹಿಂದಿನ ತಿಂಗಳಿಗೆ ಹೋಲಿಸಿದರೆ ಸೂಚ್ಯಂಕವು 2.42 ಶೇಕಡಾ ಹೆಚ್ಚಾಗಿದೆ.

ಇದನ್ನೂ ಓದಿ : ಇಂದಿನ ಅಡಿಕೆ ಧಾರಣೆ: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ!

ಫೆಡರೇಶನ್ ನಾಲ್ಕು ಶೇಕಡಾದಷ್ಟು ತುಟ್ಟಿಭತ್ಯೆ ಹೆಚ್ಚಳವನ್ನು ನಿರೀಕ್ಷಿಸುತ್ತಿದೆ. ಆದರೆ, ಹೆಚ್ಚಳವು ಮೂರು ಶೇಕಡಾಕ್ಕಿಂತ ಸ್ವಲ್ಪ ಹೆಚ್ಚು ಇದ್ದು DA ಮೂರು ಶೇಕಡಾ ಪಾಯಿಂಟ್‌ಗಳಷ್ಟು ಏರಿಕೆಯಾಗಿ 45 ಶೇಕಡಾವಾಗುತ್ತದೆ ಎಂದು ಅಖಿಲ ಭಾರತ ರೈಲ್ವೇ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ  ತಿಳಿಸಿದ್ದಾರೆ.  2006 ರಲ್ಲಿ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ DA ಮತ್ತು TR ಅನ್ನು ಲೆಕ್ಕಾಚಾರ ಮಾಡುವ ಸೂತ್ರವನ್ನು ಪರಿಷ್ಕರಿಸಿತು.

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ  ಡಿಆರ್  ನೀಡಲಾಗುತ್ತದೆ. ಎರಡನ್ನೂ ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ, ಅಂದರೆ ಜನವರಿ ಮತ್ತು ಜುಲೈ ತಿಂಗಳಲ್ಲಿ ಏರಿಕೆ ಮಾಡಲಾಗುತ್ತದೆ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ ಶೇ.42 ತುಟ್ಟಿ ಭತ್ಯೆ ನೀಡಲಾಗುತ್ತಿದೆ.

ಇದನ್ನೂ ಓದಿ : ಖಾತೆಯಲ್ಲಿ ನಯಾ ಪೈಸೆ ಇಲ್ಲದಿದ್ದರೂ ಮಾಡಬಹುದು UPI ಪೇಮೆಂಟ್ : ಆರ್ ಬಿಐ ಹೊಸ ನಿಯಮ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Section: 
English Title: 
govt will announce da hike on this date central govt employee to get good news soon
News Source: 
Home Title: 

ಈ ದಿನಾಂಕದಂದು ಹೊರ ಬೀಳಲಿದೆ ಡಿಎ ಹೆಚ್ಚಳದ ಅಧಿಸೂಚನೆ ! ಸರ್ಕಾರಿ ನೌಕರರ ವೇತನ ಹೆಚ್ಚಳದ ಲೆಕ್ಕಾಚಾರ ಇಲ್ಲಿದೆ 
 

ಈ ದಿನಾಂಕದಂದು ಹೊರ ಬೀಳಲಿದೆ ಡಿಎ ಹೆಚ್ಚಳದ ಅಧಿಸೂಚನೆ ! ಸರ್ಕಾರಿ ನೌಕರರ ವೇತನ ಹೆಚ್ಚಳದ ಲೆಕ್ಕಾಚಾರ ಇಲ್ಲಿದೆ
Yes
Is Blog?: 
No
Tags: 
Facebook Instant Article: 
Yes
Highlights: 

ಈ ತಿಂಗಳ ಅಂತ್ಯದ ವೇಳೆಗೆ ಡಿಎ ಹೆಚ್ಚಳ

ಸರ್ಕಾರ ಹೊರಡಿಸಲಿದೆ ಅಧಿಸೂಚನೆ 

ವೇತನದಲ್ಲಿ ಎಷ್ತಾಗುವುದು ಹೆಚ್ಚಳ 
 

Mobile Title: 
ಈ ದಿನಾಂಕದಂದು ಹೊರ ಬೀಳಲಿದೆ ಡಿಎ ಹೆಚ್ಚಳದ ಅಧಿಸೂಚನೆ ! ಸರ್ಕಾರಿ ನೌಕರರ ವೇತನ ಹೆಚ್ಚಳದ ಲೆಕ್ಕಾಚಾರ
Ranjitha R K
Publish Later: 
No
Publish At: 
Wednesday, September 13, 2023 - 12:21
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
1
Is Breaking News: 
No
Word Count: 
347