Library In Govt School By Jatti Foundation: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೆ ಹೆಚ್ಚು. ಇದಕ್ಕೆ ಸರ್ಕಾರಿ ಶಾಲೆಯಲ್ಲಿ ಸರಿಯಾದ ವ್ಯವಸ್ಥೆ ಇರುವುದಿಲ್ಲ ಎನ್ನುವ ಹಣೆಪಟ್ಟಿ ಬೇರೆ. ಆದರೆ,  ಯಾವುದೇ ಖಾಸಗಿ ಶಾಲೆಗಳಿಗೆ ನಮ್ಮ ಸರ್ಕಾರಿ ಶಾಲೆಗಳು ಕಡಿಮೆ ಇಲ್ಲ ಎನ್ನುವಂತೆ ಸರ್ಕಾರಿ ಶಾಲೆಗಳಿಗೆ ಇಲ್ಲೊಂದು ವಿದೇಶಿ ಮೂಲದ ವಿದ್ಯಾರ್ಥಿಗಳ ತಂಡ ಕಾಯಕಲ್ಪ ನೀಡುತ್ತಿದೆ.


COMMERCIAL BREAK
SCROLL TO CONTINUE READING

ಹೌದು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಲಹಲ್ಳಿಯ ಸರ್ಕಾರಿ ಶಾಲೆಗೆ (Govt School) ಫ್ರಾನ್ಸ್ ಮೂಲದ ವಿದ್ಯಾರ್ಥಿಗಳ ತಂಡ ಗ್ರಂಥಾಲಯ (Library) ನಿರ್ಮಾಣ ಮಾಡುವುದರ ಮೂಲಕ‌ ಸಾಮಾಜಿಕ ಕಳಕಳಿ‌ ಮೆರೆದಿದ್ದಾರೆ.


ಇದನ್ನೂ ಓದಿ- ಹೆಚ್ಚು ಸಂಭಾವನೆ ಲಭ್ಯವಿರುವ ವಿಶ್ವದ ಟಾಪ್ 8 ಉದ್ಯೋಗಗಳಿವು


ದೇಶದ ಮಾಜಿ ಉಪರಾಷ್ಟ್ರಪತಿ ದಿವಂಗತ ಬಿ.ಡಿ.ಜತ್ತಿ ಅವರ ಮೊಮ್ಮಗ ದ್ರುವ ಜತ್ತಿ ಅವರ ನೇತೃತ್ವದ ಜತ್ತಿ‌ ಫೌಂಡೇಶನ್ (Jatti foundation) ವತಿಯಿಂದ ಫ್ರಾನ್ಸ್ ಮೂಲದ ವಿದ್ಯಾರ್ಥಿಗಳ ಸಹಯೋಗದಲ್ಲಿ ಸರ್ಕಾರಿ ಶಾಲೆಗೆ ಗ್ರಂಥಾಲಯವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಂಟು ಜನ ವಿದ್ಯಾರ್ಥಿಗಳು ಸ್ವತಃ ತಾವೇ ಪೇಂಟಿಂಗ್, ಫರ್ನಿಚರ್ ವರ್ಕ್ ಸೇರಿದಂತೆ ಇತರೇ ಕೆಲಸಗಳಲ್ಲಿ ನಿರತರಾಗಿದ್ದಾರೆ.


ಇದನ್ನೂ ಓದಿ- ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿದೆ ಭರ್ಜರಿ ಉದ್ಯೋಗಾವಕಾಶ


ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲ‌ ಕಲ್ಪಿಸಲು ಸರ್ಕಾರಿ ಶಾಲೆಯಲ್ಲಿ ಸುಸಜ್ಜಿತವಾದ ಗ್ರಂಥಾಲಯ ನಿರ್ಮಾಣವಾಗುತ್ತಿದೆ. ಅಂದಾಜು ಹದಿನೈದು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಲಾಗುತ್ತಿದೆ. ಜೊತೆಗೆ ಸಸಿ ನೆಡುವುದು, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಸ್ವಚ್ಛತಾ ಕಾರ್ಯ ಸೇರಿ ಹೀಗೆ ಸಾಮಾಜಿಕ ಕಾರ್ಯಗಳ ಮೂಲಕ ಪರಿಸರ ಸಂರಕ್ಷಣೆಗೂ ಮುಂದಾಗಿರುವುದು ನಿಜಕ್ಕೂ ಪ್ರಶಂಸನೀಯ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.