ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿದೆ ಭರ್ಜರಿ ಉದ್ಯೋಗಾವಕಾಶ

Digital Marketing: ಪ್ರಸ್ತುತ ಡಿಜಿಟಲ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಸಾಕಷ್ಟಿದ್ದು ಕೇವಲ ದೊಡ್ಡ ದೊಡ್ಡ ಹೆಸರಾಂತ ಕಂಪನಿಗಳು ಮಾತ್ರವಲ್ಲ ಪ್ರತಿಯೊಂದು ಸಣ್ಣ ಕಂಪನಿಗಳು ಸಹ ಡಿಜಿಟಲ್ ಮಾರ್ಕೆಟಿಂಗ್‌ನತ್ತ ಮುಖ ಮಾಡುತ್ತಿವೆ. 

Written by - Yashaswini V | Last Updated : Dec 5, 2023, 08:55 AM IST
  • ನಿಮಗೆಲ್ಲರಿಗೂ ತಿಳಿದಿರುವಂತೆ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಇಡೀ ಜಗತ್ತೇ ಆರ್ಥಿಕ ಹಿಂಜರಿತವನ್ನು ಎದುರಿಸಬೇಕಾಯಿತು.
  • ಈ ಸಂದರ್ಭದಲ್ಲಿ ಅನೇಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಕಂಪನಿಗಳು ಮುಚ್ಚಲ್ಪಟ್ಟವು
  • ಇದರಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು.
ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿದೆ ಭರ್ಜರಿ ಉದ್ಯೋಗಾವಕಾಶ  title=

Digital Marketing: ಪ್ರಸ್ತುತ ಸಮಯದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಕೊರತೆಯಿಲ್ಲ. ಇನ್ನೊಂದು ಪ್ರಮುಖ ವಿಷಯವೆಂದರೆ ಡಬಲ್ ಡಿಗ್ರಿ ಇಲ್ಲದೆಯೇ ಉತ್ತಮ ಸ್ಯಾಲರಿ ಪ್ಯಾಕೇಜ್ ಪಡೆಯುವ ಕ್ಷೇತ್ರವನ್ನು ಪ್ರವೇಶಿಸಲು ಬಯಸುವವರಿಗೆ ಡಿಜಿಟಲ್ ಮಾರ್ಕೆಟಿಂಗ್ ಒಂದು ಅತ್ಯುತ್ತಮ ಆಯ್ಕೆ ಎಂದು ಸಾಬೀತುಪಡಿಸಬಹುದು. 

ವಾಸ್ತವವಾಗಿ, ಪ್ರಸ್ತುತ ಡಿಜಿಟಲ್ ಮಾಧ್ಯಮವು ಮಾರುಕಟ್ಟೆಯ ಮುಖ್ಯ ಮಾಧ್ಯಮವಾಗಿದೆ. ಇಂದಿನ ಕಾಲದಲ್ಲಿ ಇಡೀ ಜಗತ್ತು ಡಿಜಿಟಲೀಕರಣದತ್ತ ಚಲಿಸುತ್ತಿದ್ದು ಇದೀಗ ಆನ್‌ಲೈನ್ ಮಾರ್ಕೆಟಿಂಗ್ ವ್ಯವಹಾರವು ವೇಗವಾಗಿ ಬೆಳೆಯುತ್ತಿದೆ. 

ಇದನ್ನೂ ಓದಿ- GK Quiz: ಯಾವ ಪ್ರಾಣಿಯ ಹೃದಯ ಅದರ ತಲೆಯಲ್ಲಿರುತ್ತದೆ ಗೊತ್ತಾ?

ಟಾಪ್ 5 ಉದ್ಯೋಗ ಒದಗಿಸುವ ಕ್ಷೇತ್ರಗಳನ್ನೊಳಗೊಂಡ ವರದಿಯ ಪ್ರಕಾರ, 2021-22ರಲ್ಲಿ ಡಿಜಿಟಲ್ ವಲಯದಲ್ಲಿ ಹೆಚ್ಚಿನ ಉದ್ಯೋಗಗಳು ಹೊರಹೊಮ್ಮಿವೆ. ಈ ಕಾರಣಕ್ಕಾಗಿಯೇ ಡಿಜಿಟಲ್ ಕ್ಷೇತ್ರವನ್ನು ದೇಶದ ಟಾಪ್ 5 ಉದ್ಯೋಗ ಒದಗಿಸುವ ಕ್ಷೇತ್ರಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ಅಂದಾಜಿನ ಪ್ರಕಾರ, ಡಿಜಿಟಲ್ ಮಾರ್ಕೆಟಿಂಗ್ ತಜ್ಞರ ಬೇಡಿಕೆಯು ಪ್ರತಿ ವರ್ಷ 30% ದರದಲ್ಲಿ ಹೆಚ್ಚಾಗುತ್ತಿದೆ. 

ಜಾಬ್ ಲಾಸ್: 
ನಿಮಗೆಲ್ಲರಿಗೂ ತಿಳಿದಿರುವಂತೆ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಇಡೀ ಜಗತ್ತೇ ಆರ್ಥಿಕ ಹಿಂಜರಿತವನ್ನು ಎದುರಿಸಬೇಕಾಯಿತು. ಈ ಸಂದರ್ಭದಲ್ಲಿ  ಅನೇಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಕಂಪನಿಗಳು ಮುಚ್ಚಲ್ಪಟ್ಟು ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು. ಭಾರತ ಸೇರಿದಂತೆ ಇಡೀ ವಿಶ್ವದಲ್ಲಿ ಸರ್ಕಾರಿ ಹುದ್ದೆಗಳ ಸಂಖ್ಯೆಯೂ ಕ್ಷೀಣಿಸ ತೊಡಗಿವೆ. ಇದೀಗ ಯುವಕಾರು ಡಿಜಿಟಲ್ ಕ್ಷೇತ್ರದಲ್ಲಿ  ಉದ್ಯೋಗಕ್ಕಾಗಿ ಹುಡುಕುತ್ತಿದ್ದಾರೆ. ಇದಕ್ಕಾಗಿ ಕೆಲವು ಕೋರ್ಸ್‌ಗಳು ಕೂಡ ಲಭ್ಯವಿವೆ. 

ಇದನ್ನೂ ಓದಿ- GK Quiz: ಭಾರತದ ಅತ್ಯಂತ ಪುರಾತನ ಜಿಲ್ಲೆ ಯಾವುದು ಗೊತ್ತಾ?

ಏನಿದು ಡಿಜಿಟಲ್ ಮಾರ್ಕೆಟಿಂಗ್: 
ಡಿಜಿಟಲ್ ಮಾರ್ಕೆಟಿಂಗ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು, ಇಂಟರ್ನೆಟ್, ಇ-ಮೇಲ್ ಮಾರ್ಕೆಟಿಂಗ್ ಇತ್ಯಾದಿಗಳನ್ನು ಒಳಗೊಂಡಿದೆ. ನೀವು ಈ ಕ್ಷೇತ್ರದಲ್ಲಿ ನಿಮ್ಮ ವೃತ್ತಿಜೀವನವನ್ನು ಆರಂಭಿಸಲು ಇಚ್ಛಿಸಿದರೆ ಇದಕ್ಕಾಗಿ ಕೌಶಲ್ಯ ಅಭಿವೃದ್ಧಿ ಕೋರ್ಸ್ ಮಾಡಬಹುದು.

ಟಾಪ್ 5 ಡಿಜಿಟಲ್ ಮಾರ್ಕೆಟಿಂಗ್ ಉದ್ಯೋಗಗಳೆಂದರೆ:- 
* ಎಸ್ಇಒ ಸ್ಪೆಷಲಿಸ್ಟ್
* ಪ್ರಾಡಕ್ಟ್ ಮಾರ್ಕೆಟಿಂಗ್ ಸ್ಪೆಷಲಿಸ್ಟ್ ಪೆಡ್
* ಮಾರ್ಕೆಟಿಂಗ್ ಸ್ಪೆಷಲಿಸ್ಟ್
* ಕಂಟೆಂಟ್ ಮಾರ್ಕೆಟರ್ 
* ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News