ಬೆಂಗಳೂರು: ನವೋದಯ ವಿದ್ಯಾಲಯ ಸಮಿತಿಯು ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉದ್ಯೋಗ ಪಡೆಯಲು ಉತ್ತಮ ಅವಕಾಶ ನೀಡಿದೆ. ಖಾಲಿ ಇರುವ 7500ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


COMMERCIAL BREAK
SCROLL TO CONTINUE READING

NVSನ ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ನಮೂದಿಸಿದ ಸ್ವರೂಪದಲ್ಲಿ ಅರ್ಜಿ ಸಲ್ಲಿಸಬೇಕು. ಈ ನೇಮಕಾತಿ ಅಭಿಯಾನದ ಮೂಲಕ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.


ಇದನ್ನೂ ಓದಿ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ: ನಳಿನ್‍ಕುಮಾರ್ ಕಟೀಲ್


ಖಾಲಿ ಹುದ್ದೆಗಳ ವಿವರ:


ಈ ನೇಮಕಾತಿ ಅಭಿಯಾನದಲ್ಲಿ 7500ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಹುದ್ದೆಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ.


* PGT (ಕಂಪ್ಯೂಟರ್-ವಿಜ್ಞಾನ) – 306 ಪೋಸ್ಟ್‌ಗಳು


* PGT (ದೈಹಿಕ ಶಿಕ್ಷಣ) – 91 ಪೋಸ್ಟ್‌ಗಳು


* PGT (ಆಧುನಿಕ ಭಾರತ ಭಾಷೆ) – 46 ಹುದ್ದೆಗಳು


* TGT (ಕಂಪ್ಯೂಟರ್ ಸೈನ್ಸ್) – 649 ಪೋಸ್ಟ್‌ಗಳು


* TGT (ಕಲೆ) – 649 ಪೋಸ್ಟ್‌ಗಳು


* TGT (ದೈಹಿಕ ಶಿಕ್ಷಣ) – 1244 ಪೋಸ್ಟ್‌ಗಳು


* TGT (ಸಂಗೀತ) – 649 ಪೋಸ್ಟ್‌ಗಳು


* ಸ್ಟಾಫ್ ನರ್ಸ್ – 649 ಹುದ್ದೆಗಳು


* ಅಡುಗೆ ಮೇಲ್ವಿಚಾರಕರು – 637 ಹುದ್ದೆಗಳು


* ಕಚೇರಿ ಸೂಪರಿಂಟೆಂಡೆಂಟ್ – 598 ಹುದ್ದೆಗಳು


* ಎಲೆಕ್ಟ್ರಿಷಿಯನ್/ಪ್ಲಂಬರ್ – 598 ಹುದ್ದೆಗಳು


* ಮೆಸ್ ಸಹಾಯಕ - 1297 ಪೋಸ್ಟ್‌ಗಳು


* ಸಹಾಯಕ ಆಯುಕ್ತರು – 50 ಹುದ್ದೆಗಳು


* ಸಹಾಯಕ ಆಯುಕ್ತರು (ಹಣಕಾಸು) – 2 ಹುದ್ದೆಗಳು


* ಕಾನೂನು ಸಹಾಯಕ – 1 ಹುದ್ದೆ


* ASO – 50 ಪೋಸ್ಟ್‌ಗಳು


* ವೈಯಕ್ತಿಕ ಸಹಾಯಕ – 25 ಹುದ್ದೆಗಳು


* ಕಂಪ್ಯೂಟರ್ ಆಪರೇಟರ್ – 8 ಹುದ್ದೆಗಳು


*ಸ್ಟೆನೋಗ್ರಾಫರ್ – 49 ಪೋಸ್ಟ್‌ಗಳು


ಯಾರು ಅರ್ಜಿ ಸಲ್ಲಿಸಬಹುದು..?


ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿಯು ಹುದ್ದೆಗೆ ಅನುಗುಣವಾಗಿ ಭಿನ್ನವಾಗಿರುತ್ತದೆ. ನೀವು ಅರ್ಜಿ ಸಲ್ಲಿಸಬೇಕಾದ ಖಾಲಿ ಹುದ್ದೆಯ ಬಗ್ಗೆ ಮಾಹಿತಿ ಪಡೆಯಲು ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಸೂಚನೆಯನ್ನು ಪರಿಶೀಲಿಸಬೇಕು. ಅರ್ಜಿ ಸಲ್ಲಿಸಲು ಮತ್ತು ವಿವರಗಳನ್ನು ತಿಳಿಯಲು ನೀವು NVSನ ಅಧಿಕೃತ ವೆಬ್‌ಸೈಟ್‌ navodaya.gov.in. ಗೆ ಭೇಟಿ ನೀಡಬಹುದು. ಹುದ್ದೆಗೆ ಅನುಗುಣವಾಗಿ ಸಂಬಳವೂ ಇರಲಿದ್ದು, ಬೋಧಕ ಹುದ್ದೆಗಳಿಗೆ ತಿಂಗಳಿಗೆ 44,000 ರೂ.ಗಳಿಂದ 1,42,000 ರೂ. ಇದೆ. ಇನ್ನುಇತ್ತೀಚಿನ ಅಪ್‍ಡೇಟ್‍ಗಳನ್ನು ತಿಳಿಯಲು ಕಾಲಕಾಲಕ್ಕೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.


ಇದನ್ನೂ ಓದಿ: ಚಿರತೆ ಸೆರೆಗಾಗಿ ಬೋನಲ್ಲಿಟ್ಟಿದ್ದ ಮೇಕೆ ಕಳ್ಳರ ಪಾಲು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.