ಚಿರತೆ ಸೆರೆಗಾಗಿ ಬೋನಲ್ಲಿಟ್ಟಿದ್ದ ಮೇಕೆ ಕಳ್ಳರ ಪಾಲು..!

Goat Theft : ಚಿರತೆ ಸೆರೆಗಾಗಿ ಬೋನಿನಲ್ಲಿ  ಕಟ್ಟಿದ್ದ ಮೇಕೆಯನ್ನು ಕಳ್ಳರು ಹೊತ್ತೊಯ್ದಿರುವ ವಿಚಿತ್ರ ಗುಂಡ್ಲುಪೇಟೆ ತಾಲೂಕಿನ  ಚನ್ನವಡೆಯನಪುರ ಗ್ರಾಮದಲ್ಲಿ ನಡೆದಿದೆ.  

Written by - Savita M B | Last Updated : Jun 24, 2023, 01:28 PM IST
  • ಚಿರತೆ ಸೆರೆ ಹಿಡಿಯಲು ಗ್ರಾಮದ ರೈತರು ಒತ್ತಾಯಿಸಿದ್ದರು.
  • ಅರಣ್ಯಾಧಿಕಾರಿಗಳು ಚಿರತ ಕುಮಾರ್ ಚಿರತೆ ಸೆರೆಗೆ ಬೋನು ಇರಿಸಿದ್ದರು.
  • ಕಳ್ಳರ ಕೈ ಚಳಕದಿಂದ ಮೇಕೆ ಮಾಯವಾಗಿತ್ತು.
ಚಿರತೆ ಸೆರೆಗಾಗಿ ಬೋನಲ್ಲಿಟ್ಟಿದ್ದ ಮೇಕೆ ಕಳ್ಳರ ಪಾಲು..!  title=

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ‌ ಚನ್ನವಡೆಯಪುರ ಗ್ರಾಮದ ಬಳಿ ಚಿರತೆ ದಾಳಿ ನಡೆಸಿ ಕರು, ಕುರಿಗಳನ್ನು ಸಾಯಿಸಿತ್ತು. ಚಿರತೆ ಸೆರೆ ಹಿಡಿಯಲು ಗ್ರಾಮದ ರೈತರು ಒತ್ತಾಯಿಸಿದ್ದರು. ಅದರಂತೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ಅರಣ್ಯಾಧಿಕಾರಿಗಳು ಚಿರತ ಕುಮಾರ್ ಚಿರತೆ ಸೆರೆಗೆ ಬೋನು ಇರಿಸಿದ್ದರು.

ಇದನ್ನೂ ಓದಿ-ಜೂನ್ 22 ನ್ನು ಶ್ರೀ ಶ್ರೀ ರವಿ ಶಂಕರ್ ದಿನ ಎಂದು ಘೋಷಣೆ

ಸಂಜೆ ಬೋನಿಗೆ ಮೇಕೆ ಕಟ್ಟಿ ಅರಣ್ಯ ಇಲಾಖೆ ಸಿಬ್ಬಂದಿ ವಾಪಸ್ ಬಂದಿದ್ದರು. ಬೆಳಗ್ಗೆ ಬೋನಿನ ಹತ್ತಿರ ಹೋದಾಗ ಕಳ್ಳರ ಕೈ ಚಳಕದಿಂದ ಮೇಕೆ ಮಾಯವಾಗಿತ್ತು.

ಚಿರತೆ ಏನಾದರೂ ಮೇಕೆಯನ್ನು ಎಳೆದುಕೊಂಡು ಹೋಗಿದೆಯಾ ಎಂದ್ರೆ ಚಿರತೆ ಬಂದಿದ್ದ ಕುರುಹು ಕೂಡ ಇಲ್ಲದಿದ್ದರಿಂದ ಕಳ್ಳರು ಮೇಕೆಯನ್ನು ಬಿಚ್ಚಿಕೊಂಡು ಹೋಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ‌.

ಇದನ್ನೂ ಓದಿ-ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ: ನಳಿನ್‍ಕುಮಾರ್ ಕಟೀಲ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News