Railway Recruitment 2024: ಭಾರತೀಯ ರೈಲ್ವೆ ಇಲಾಖೆಯಲ್ಲಿ 32,000 ಹುದ್ದೆಗಳ ನೇಮಕಾತಿ
Railway Recruitment 2024: ಈ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ʼ2014ರಿಂದ 2024ರವರೆಗೆ ರೈಲ್ವೆ ಇಲಾಖೆಯು 5.02 ಲಕ್ಷ ಉದ್ಯೋಗಗಳನ್ನು ಒದಗಿಸಿದೆ. 2004ರಿಂದ 2014ರ UPA ಸರ್ಕಾರದ ಅವಧಿಯಲ್ಲಿ 4.11 ಲಕ್ಷ ಉದ್ಯೋಗಗಳಿಗೆ ಹೋಲಿಸಿದರೆ ಶೇ.25ರಷ್ಟು ಹೆಚ್ಚಳವಾಗಿದೆ ಅಂತಾ ಹೇಳಿದ್ದಾರೆ.
Railway Recruitment 2024: ಭಾರತೀಯ ರೈಲ್ವೆ ಸಚಿವಾಲಯವು ರೈಲ್ವೆ ಪ್ರೊಟೆಕ್ಷನ್ ಫೋರ್ಸ್(RPF)ನಲ್ಲಿ ಖಾಲಿ ಇರುವ 32,000 ಹುದ್ದೆಗಳನ್ನು ಭರ್ತಿ ಮಾಡಲಿದೆ. ಈ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ʼ2014ರಿಂದ 2024ರವರೆಗೆ ರೈಲ್ವೆ ಇಲಾಖೆಯು 5.02 ಲಕ್ಷ ಉದ್ಯೋಗಗಳನ್ನು ಒದಗಿಸಿದೆ. 2004ರಿಂದ 2014ರ ಯುಪಿಎ ಸರ್ಕಾರದ ಅವಧಿಯಲ್ಲಿ 4.11 ಲಕ್ಷ ಉದ್ಯೋಗಗಳಿಗೆ ಹೋಲಿಸಿದರೆ ಶೇ.25ರಷ್ಟು ಹೆಚ್ಚಳವಾಗಿದೆ ಅಂತಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿದ ಅವರು, ಕೋವಿಡ್-19 ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಅಧಿಕಾರಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೂಲಕ 1,30,581 ಅಭ್ಯರ್ಥಿಗಳನ್ನು ನೇಮಕ ಮಾಡಿದ್ದಾರೆ. ಡಿಸೆಂಬರ್ 28, 2020ರಿಂದ ಜುಲೈ 31, 2021ರವರೆಗೆ 7 ಹಂತಗಳಲ್ಲಿ 726 ಕೇಂದ್ರಗಳಲ್ಲಿ 211 ನಗರಗಳಾದ್ಯಂತ 1.26 ಕೋಟಿ ಅಭ್ಯರ್ಥಿಗಳಿಗೆ CBT ನಡೆಸಲಾಯಿತು. ಕೇವಲ 1 ತಿಂಗಳ ಅವಧಿಯ 5 ಹಂತಗಳಲ್ಲಿ, ಆಗಸ್ಟ್ 17, 2022ರಿಂದ ಅಕ್ಟೋಬರ್ 11, 2022ರವರೆಗೆ 191 ನಗರಗಳಲ್ಲಿ ಮತ್ತು 551 ಕೇಂದ್ರಗಳಲ್ಲಿ 1.1 ಕೋಟಿಗೂ ಹೆಚ್ಚು ಅಭ್ಯರ್ಥಿಗಳನ್ನು CBT ಮೂಲಕ ಮೌಲ್ಯಮಾಪನ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Kargil Vijay Diwas: ʼಕಾರ್ಗಿಲ್ ವಿಜಯ ದಿವಸʼದ ಮಹತ್ವ ಮತ್ತು ಇತಿಹಾಸ ತಿಳಿಯಿರಿ
ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ
ರೈಲ್ವೆ ಸಚಿವಾಲಯವು ಈ ವರ್ಷ ವಿವಿಧ ಗ್ರೂಪ್ 'C' ಹುದ್ದೆಗಳಿಗೆ ವಾರ್ಷಿಕ ಕ್ಯಾಲೆಂಡರ್ ಪರಿಚಯಿಸುವ ಮೂಲಕ ನೇಮಕಾತಿಯನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ತಿಳಿಸಿದೆ. ಜನವರಿಯಿಂದ ಮಾರ್ಚ್ 2024ರವರೆಗೆ ಒಟ್ಟು 32,603 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ಪೈಕಿ ಸಹಾಯಕ ಲೋಕೋ ಪೈಲಟ್, ತಂತ್ರಜ್ಞ, ಸಬ್ ಇನ್ಸ್‌ಪೆಕ್ಟರ್ ಮತ್ತು RPFನಲ್ಲಿ ಕಾನ್‌ಸ್ಟೆಬಲ್‌ನಂತಹ ಹುದ್ದೆಗಳು ಸೇರಿವೆ.
ರೈಲ್ವೆ ಸಂರಕ್ಷಣಾ ಪಡೆಗೆ ಸೇರಲು ಉತ್ಸುಕರಾಗಿರುವವರಿಗೆ RPF ಕಾನ್ಸ್‌ಟೇಬಲ್‌ಗಳ ನೇಮಕಾತಿ ಪ್ರಕ್ರಿಯೆಯು ಅತ್ಯುತ್ತಮ ಅವಕಾಶವಾಗಿದೆ. 7ನೇ ಕೇಂದ್ರ ವೇತನ ಆಯೋಗದ (CPC) ಪ್ರಕಾರ, RPF ಕಾನ್‌ಸ್ಟೆಬಲ್‌ನ ಮೂಲ ವೇತನವು 21,700 ರೂ. ಆಗಿರುತ್ತದೆ.
ಇದನ್ನೂ ಓದಿ: Kargil Vijay Diwas: ʼಕಾರ್ಗಿಲ್ ವಿಜಯ ದಿವಸʼ 25ನೇ ವಾರ್ಷಿಕೋತ್ಸವ; ಹುತಾತ್ಮರಿಗೆ ಪ್ರಧಾನಿ ಮೋದಿ ಗೌರವ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.