Sheikh Hasina daughter Saima : ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಚಳವಳಿಯ ನಡುವೆ, ಶೇಖ್ ಹಸೀನಾ ಅವರು ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ನಿವಾಸ ಮಾತ್ರವಲ್ಲ,ಬಾಂಗ್ಲಾದೇಶವನ್ನು ತೊರೆದು ಇದೀಗ ಅವರು ಭಾರತಕ್ಕೆ ಬಂದಿದ್ದಾರೆ.ಅವರ ಮಗಳು ಸೈಮಾ ಈಗಾಗಲೇ ಭಾರತದಲ್ಲಿಯೇ ನೆಲೆಸಿದ್ದಾರೆ.ಅವರು WHO ನ ದೆಹಲಿ ಪ್ರಧಾನ ಕಚೇರಿಯಲ್ಲಿ ಆಗ್ನೇಯ ಏಷ್ಯಾ ಪ್ರದೇಶದ ಪ್ರಾದೇಶಿಕ ನಿರ್ದೇಶಕರ ಹುದ್ದೆಯನ್ನು ಅಲಂಕರಿಸಿದ್ದಾರೆ. ಸೈಮಾ ವಾಜೆದ್ ಈ ಹುದ್ದೆಗೆ ನೇಮಕಗೊಂಡ ಮೊದಲ ಬಾಂಗ್ಲಾದೇಶಿ ಮತ್ತು ಎರಡನೇ ಮಹಿಳೆ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ. 


COMMERCIAL BREAK
SCROLL TO CONTINUE READING

ಕಳೆದ ವರ್ಷ, ನವೆಂಬರ್ 1 ರಂದು, WHO ಆಗ್ನೇಯ ಏಷ್ಯಾ ಸದಸ್ಯರ ಸಭೆಯನ್ನು ದೆಹಲಿಯಲ್ಲಿ ನಡೆಸಲಾಯಿತು. ಇದರಲ್ಲಿ ಸೈಮಾ ವಾಜೆದ್ ಅವರನ್ನು ಈ ಜವಾಬ್ದಾರಿಗೆ ನಾಮನಿರ್ದೇಶನ ಮಾಡಲಾಯಿತು.ಅದರ ನಂತರ,ಜನವರಿ 23, 2024 ರಂದು, ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ WHO ನ ಕಾರ್ಯನಿರ್ವಾಹಕ ಮಂಡಳಿಯು ಅವರ ನೇಮಕಾತಿಯನ್ನು ಅನುಮೋದಿಸಿತು. 


ಇದನ್ನೂ ಓದಿ : NCET 2024 ಫೈನಲ್ ಆನ್ಸರ್ ಕೀ ಬಿಡುಗಡೆ :ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ


ವೃತ್ತಿಯಿಂದ ಮನಶ್ಶಾಸ್ತ್ರಜ್ಞ: 
ಸೈಮಾ ಅವರು ವೃತ್ತಿಯಲ್ಲಿ ಮನಶ್ಶಾಸ್ತ್ರಜ್ಞರಾಗಿದ್ದು,ನ್ಯೂರೋ ಡೆವಲಪ್‌ಮೆಂಟಲ್ ಡಿಸಾರ್ಡರ್‌ಗಳ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.2012 ರಿಂದ,ಅವರು ನ್ಯೂರೋ ಡೆವಲಪ್‌ಮೆಂಟಲ್ ಡಿಸಾರ್ಡರ್ಸ್‌ನ ಬಾಂಗ್ಲಾದೇಶದ ರಾಷ್ಟ್ರೀಯ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದಾರೆ.ಈ ಹೊಸ ಜವಾಬ್ದಾರಿಯನ್ನು ವಹಿಸುವ ಮೊದಲು, ಸೈಮಾ WHO ನಲ್ಲಿ ಮಾನಸಿಕ ಆರೋಗ್ಯ ಮತ್ತು ಆಟಿಸಂ ಕುರಿತು ಮಹಾನಿರ್ದೇಶಕರಿಗೆ ಸಲಹೆಗಾರರಾಗಿ ಕೆಲಸ ಮಾಡಿದ್ದರು.


ವೈಯಕ್ತಿಕ ಜೀವನ  : 
ಸೈಮಾ ತನ್ನ ಕುಟುಂಬದಲ್ಲಿ ಭಾರತದೊಳಗಿನ ಸಂಸ್ಥೆಗಾಗಿ ಕೆಲಸ ಮಾಡುತ್ತಿರುವ ಏಕೈಕ ವ್ಯಕ್ತಿ ಅಲ್ಲ.ಅವರ ತಂದೆ ಎಂ.ಎ.ವಾಜೇದ್ ಕೂಡಾ ಭಾರತದಲ್ಲಿ ಕೆಲಸ ಮಾಡಿದ್ದಾರೆ.ಅವರು ಪ್ರಸಿದ್ಧ ಭೌತಶಾಸ್ತ್ರಜ್ಞ ಮತ್ತು ಬಾಂಗ್ಲಾದೇಶದ ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷರಾಗಿದ್ದರು.ಅವರು ಭೌತಶಾಸ್ತ್ರದ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.ನವದೆಹಲಿಯಲ್ಲಿ ಭಾರತೀಯ ಪರಮಾಣು ಶಕ್ತಿ ಆಯೋಗದಲ್ಲಿ ಕೆಲಸ ಮಾಡಿದರು. 


ಇದನ್ನೂ ಓದಿ : ಟಾಟಾ ಸಾಮ್ರಾಜ್ಯದ ಸಾರಥ್ಯ ವಹಿಸಲಿರುವ ರತನ್ ಟಾಟಾ ಪರಿವಾರದ ಮಕ್ಕಳ ವಿದ್ಯಾರ್ಹತೆ ಎಷ್ಟು?


ಸೈಮಾ ಅವರ ಪತಿ ಖಂಡೇಕರ್ ಮಸೂರ್ ಹೊಸೈನ್ ಮಿಟು ಕೂಡ ಬಾಂಗ್ಲಾದೇಶದ ಪ್ರಮುಖ ರಾಜಕೀಯ ಕುಟುಂಬದಿಂದ ಬಂದವರು.ಸೈಮಾಗೆ ಒಬ್ಬ ಸಹೋದರನಿದ್ದಾನೆ.ಹೆಸರು ಸಾಜಿಬ್ ಅಹಮದ್ ವಾಜೇದ್.ಸಾಜಿಬ್ ಅಮೆರಿಕದಲ್ಲಿ ವಾಸಿಸುತ್ತಿದ್ದು, ಬಿಸ್ ನೆಸ್ ಮಾಡುತ್ತಿದ್ದಾರೆ. ಬಾಂಗ್ಲಾದೇಶ ಅವಾಮಿ ಲೀಗ್‌ನ ಸದಸ್ಯರೂ ಆಗಿದ್ದಾರೆ.ಸಾಜಿಬ್ ಅವರನ್ನು ಬಾಂಗ್ಲಾದೇಶದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವಾಲಯದಲ್ಲಿ ಸಲಹೆಗಾರರಾಗಿ ಇರಿಸಲಾಗಿತ್ತು.300 ಮಿಲಿಯನ್ ಡಾಲರ್ ಮೌಲ್ಯದ ವಹಿವಾಟಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪ ಅವರ ಮೇಲಿದೆ.  


https://bit.ly/3AClgDd


Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.